AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿಮೂನ್​ನಲ್ಲೇ ನವ ವಿವಾಹಿತನ ಕೊಲೆ; ಈ ವೆಬ್ ಸೀರಿಸ್​​ನ ಮಿಸ್ ಮಾಡಬೇಡಿ..

Honeymoon Photographer: ಜಿಯೋ ಹಾಟ್‌ಸ್ಟಾರ್‌ನಲ್ಲಿ ಒಂದು ವೆಬ್ ಸೀರಿಸ್ ಪ್ರಸಾರ ಕಾಣುತ್ತಿದೆ.ವೆಬ್ ಸರಣಿಯು ಮಾಲ್ಡೀವ್ಸ್‌ಗೆ ಹನಿಮೂನ್‌ಗೆಂದು ತೆರಳುವ ನವವಿವಾಹಿತನ ಕೊಲೆಯ ಸುತ್ತ ಸುತ್ತುತ್ತದೆ. ಆಶಾ ನೇಗಿ ಮತ್ತು ರಾಜೀವ್ ಸಿದ್ಧಾರ್ಥ ನಟಿಸಿರುವ ಈ 6 ಸಂಚಿಕೆಗಳ ಸರಣಿಯು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ.

ಹನಿಮೂನ್​ನಲ್ಲೇ ನವ ವಿವಾಹಿತನ ಕೊಲೆ; ಈ ವೆಬ್ ಸೀರಿಸ್​​ನ ಮಿಸ್ ಮಾಡಬೇಡಿ..
ವೆಬ್ ಸೀರಿಸ್
ರಾಜೇಶ್ ದುಗ್ಗುಮನೆ
|

Updated on:Jun 27, 2025 | 3:06 PM

Share

ಒಟಿಟಿ ವ್ಯಾಪ್ತಿ ಹೆಚ್ಚಿದಂತೆ ವೆಬ್ ಸೀರಿಸ್​ಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ 2020ರಿಂದ ಈಚೆಗೆ ಭಾರತದಲ್ಲಿ ಹಲವು ರೀತಿಯ ವೆಬ್ ಸೀರಿಸ್​ಗಳನ್ನು ನಿರ್ಮಾಣ ಮಾಡಿ ಒಟಿಟಿ ಪ್ರಿಯರ ಎದುರು ಇಡಲಾಗುತ್ತಿದೆ. ಈಗ ನಾವು ಹೇಳುತ್ತಿರುವ ವೆಬ್ ಸೀರಿಸ್ ನವ ವಿವಾಹಿತನ ಕೊಲೆಯ ಬಗ್ಗೆ ಇದೆ. ಅದೂ ಈ ಕೊಲೆ ನಡೆಯೋದು ಹನಿಮೂನ್​ನಲ್ಲೇ. ಈ ವೆಬ್ ಸೀರಿಸ್ ಹೆಸರು ‘ಹನಿಮೂನ್ ಫೋಟೋಗ್ರಾಫರ್.

ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸಿತ್ತು. ಹನಿಮೂನ್​ಗೆ ಹೋದಾಗ ಪತ್ನಿಯೇ ಲವರ್ ಜೊತೆ ಸೇರಿ ಪತಿಯ ಕೊಲೆ ಮಾಡಿದ್ದರು. ಈ ಕೊಲೆ ಸಾಕಷ್ಟು ಶಾಕಿಂಗ್ ಆಗಿತ್ತು. ಈ ಕೊಲೆಯ ಮೇಲೆ ಮುಂದೊಂದು ದಿನ ವೆಬ್ ಸೀರಿಸ್ ಬಂದರೂ ಅಚ್ಚರಿ ಏನಿಲ್ಲ. ಆದರೆ, 2024ರಲ್ಲೇ ಈ ರೀತಿಯ ಹನಿಮೂನ್​ನಲ್ಲಿ ನಡೆಯುವ ಕೊಲೆ ಪ್ರಕರಣದ ಬಗ್ಗೆ ಸೀರಿಸ್ ಮಾಡಲಾಗಿದೆ.

ಏನು ಕಥೆ..

ನವ ವಿವಾಹಿತರಿಬ್ಬರು ಮಾಲ್ಡೀವ್ಸ್​ಗೆ ಹನಿಮೂನ್​ಗೆ ತೆರಳುತ್ತಾರೆ. ಇವರ ಫೋಟೋ ತೆಗೆಯೋಕೆ ಲೇಡಿ ಫೋಟೋಗ್ರಾಫರ್ ಕೂಡ ಬರುತ್ತಾಳೆ. ರಾತ್ರೋ ರಾತ್ರಿ ನವ ವಿವಾಹಿತನ ಕೊಲೆ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಈ ಕೊಲೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಬರಲಾಗುತ್ತದೆ. ಆಗಗ ಬರೋ ಟ್ವಿಸ್ಟ್ ಅಚ್ಚರಿ ಮೂಡಿಸುತ್ತದೆ.

ಇದನ್ನೂ ಓದಿ
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ
Image
ಪಿಯುಸಿಯಲ್ಲಿ ಟಾಪರ್, ಐಎಎಸ್ ಓದಬೇಕಿದ್ದ ಯುವತಿ ನಟಿಯಾದ ಕಥೆ
Image
ವಿಚ್ಛೇದನ ಹಂತದಲ್ಲಿದ್ದ ನಟಿ ಈಗ ಪ್ರೆಗ್ನೆಂಟ್; ಆದರೆ, ಪತಿಗೇ ಗೊತ್ತೇ ಇಲ್ಲ
Image
ಡ್ರಗ್ಸ್ ತೆಗೆದುಕೊಳ್ಳೋ ಕಲಾವಿದರು ಇನ್ಮುಂದೆ ಚಿತ್ರರಂಗದಿಂದ ಬ್ಯಾನ್

ಇದನ್ನೂ ಓದಿ: ಕರಿಷ್ಮಾ ಮಾಜಿ ಪತಿ ನಿಧನ; ಹನಿಮೂನ್​ನಲ್ಲಿ ನಟಿಗೆ ಗೆಳೆಯರ ಜೊತೆ ಮಲಗಲು ಹೇಳಿದ್ದ ಸಂಜಯ್

ಪಾತ್ರವರ್ಗ

ಅರ್ಜುನ್ ಶ್ರೀವಾಸ್ತವ ಅವರು ಈ ವೆಬ್ ಸರಣಿಯನ್ನು ನಿರ್ದೇಶಿಸಿದ್ದಾರೆ. ಆಶಾ ನೇಗಿ, ರಾಜೀವ್ ಸಿದ್ಧಾರ್ಥ, ಅಪೇಕ್ಷಾ ಪೋರ್ವಾಲ್, ಸಾಹಿಲ್ ಸಲಾಥಿಯಾ ಮೊದಲಾದವರು ಈ ಸರಣಿಯಲ್ಲಿ ನಟಿಸಿದ್ದಾರೆ.

ಎಲ್ಲಿ ವೀಕ್ಷಿಸಬಹುದು?

ಈ ವೆಬ್ ಸರಣಿ ಜಿಯೋ ಹಾಟ್​ಸ್ಟಾರ್​ನಲ್ಲಿ ಲಭ್ಯವಿದೆ. ಕೇವಲ ಆರು ಎಪಿಸೋಡ್​ಗಳು ಇದ್ದು ಎಲ್ಲವೂ 30-35 ನಿಮಿಷಗಳ ಅಂತರದಲ್ಲಿ ಇದೆ. ಹೀಗಾಗಿ ಒಂದೇ ಸ್ಟ್ರೆಚ್​​ನಲ್ಲಿ ಸರಣಿ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:00 pm, Fri, 27 June 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ