ಕೆಂಪೇಗೌಡರ 516 ನೇ ಜಯಂತಿ, ನಾಡಪ್ರಭುಗೆ ನಮಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್
ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದ ಘಟನೆ ನಡೆದು 11 ಜನ ಅಮಾಯಕರು ಸಾವಿಗೀಡಾದ ಬಳಿಕ ಸಿದ್ದರಾಮಯ್ಯ ಸರ್ಕಾರಕ್ಕೆ ಗರಬಡಿದಂತಾಗಿದೆ. ಸಚಿವರ ನಡುವೆ ಮೊದಲಿನ ಸಾಮರಸ್ಯ ಕಂಡುಬರುತ್ತಿಲ್ಲ. ಏತನ್ಮಧ್ಯೆ ವಸತಿ ಯೋಜನೆಯ ಮನೆ ಹಂಚಿಕೆ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದನ್ನು ಶಾಸಕ ಬಿಅರ್ ಪಾಟೀಲ್ ಮತ್ತು ಸಚಿವ ಅಪ್ತ ಕಾರ್ಯದರ್ಶಿ ನಡುವೆ ನಡೆದ ಮಾತುಕತೆ ಬಹಿರಂಗಗೊಳಿಸಿದೆ.
ಬೆಂಗಳೂರು, ಜೂನ್ 27: ಬೆಂಗಳೂರು ನಗರ ನಿರ್ಮಾತ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿಯನ್ನು ಇವತ್ತು ರಾಜ್ಯಾದಂತ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನ ಸೌಧದ ಆವರಣದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿದರು. ಸಿಎಂ ಮತ್ತು ಡಿಸಿಎಂ ನಂತರ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗಿ ಸಹ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದನ್ನೂ ಓದಿ: ಪ್ರಚಾರದ ಹುಚ್ಚು ನಂಗಿಲ್ಲ, ಏನಾದರೂ ವಿಷಯವಿದ್ದರೆ ನಾನೇ ಮಾಧ್ಯಮಗಳೊಂದಿಗೆ ಮಾತಾಡುತ್ತೇನೆ: ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos