ರಾಜಣ್ಣ ಹೇಳಿದ್ದನ್ನು ವಿಶ್ಲೇಷಿಸುತ್ತಾ ಕೂರಲು ನಾನು ಪತ್ರಕರ್ತನಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಮೀಣ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳ ಅಸಹಜ ಸಾವನ್ನು ತನಿಖೆ ನಡೆಸಲು ಒಂದು ಸಮಿತಿಯನ್ನು ರಚಿಸುವಂತೆ ಸೂಚಿಸಿದ್ದೇನೆ, ತನಿಖಾ ವರದಿ ಸಿಕ್ಕ ನಂತರ ಹುಲಿಗಳ ಸಾವಿನ ಹಿಂದಿರುವ ನಿಜವಾದ ಕಾರಣ ಗೊತ್ತಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು, ಜೂನ್ 27: ನಮ್ಮ ಸರ್ಕಾರದ ಮಂತ್ರಿ ಮತ್ತು ಶಾಸಕರಲ್ಲಿ ಆಂತರಿಕ ತುಮುಲ, ಬೇಗುದಿ ಎಂಥದ್ದೂ ಇಲ್ಲ, ಯಾವ ಕ್ರಾಂತಿಯೂ ಅಗಲ್ಲ (no revolution), ರಾಜಣ್ಣ ಹೇಳಿದ್ದೊಂದು ಮಾಧ್ಯಮದವರು ಅರ್ಥೈಸಿಕೊಂಡಿರೋದು ಮತ್ತೊಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜಕೀಯ ಬೆಳವಣಿಗೆ ಬಗ್ಗೆ ಅವರು ಮಾತಾಡಿದ್ದಾರೆ, ಹೀಗೆಯೇ ಅಗುತ್ತೆ ಅಂತ ಅವರೇನಾದರೂ ಹೇಳಿದ್ದಾರಾ? ಅವರೇನು ಹೇಳಿದ್ದಾರೆ ಅಂತ ಮಾಧ್ಯಮಗಳ ಹಾಗೆ ತಾನು ವಿಶ್ಲೇಷಣೆ ಮಾಡುತ್ತಾ ಕೂರಲಾರೆ ಎಂದು ಸಿಎಂ ಹೇಳಿದರು. ಹಾಗಾದರೆ ರಾಜಣ್ಣ ಹೇಳಿದ್ದನ್ನು ನೀವು ಹೇಗೆ ಅರ್ಥೈಸಿಕೊಳ್ಳುತ್ತೀರಿ ಎಂದಾಗ ಸಿದ್ದರಾಮಯ್ಯ, ಅವರ ಮಾತುಗಳನ್ನು ಅಲಕ್ಷಿಸುವುದೇ ಉತ್ತಮ ಎಂದರು.
ಇದನ್ನೂ ಓದಿ: ಮುಂದೆ ಹೀಗೆ ಆದರೆ ಸಹಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ಬಳಿ ಹೈಕಮಾಂಡ್ ಖಡಕ್ ಸಂದೇಶ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ