Kerala Rain: ಕೇರಳದಲ್ಲಿ ಐದು ದಿನ ಭಾರೀ ಮಳೆ: ಮುಖ್ಯಮಂತ್ರಿ ಕಚೇರಿಯಿಂದ ಸಿದ್ಧತೆಗೆ ಸೂಚನೆ

ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.

Kerala Rain: ಕೇರಳದಲ್ಲಿ ಐದು ದಿನ ಭಾರೀ ಮಳೆ: ಮುಖ್ಯಮಂತ್ರಿ ಕಚೇರಿಯಿಂದ ಸಿದ್ಧತೆಗೆ ಸೂಚನೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 08, 2022 | 8:13 AM

ಕೇರಳ: ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ (HEAVY RAIN AND THUNDERSTORM) ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೇರಳ (KERALA) ಮುಖ್ಯಮಂತ್ರಿ ಕಚೇರಿ ಎಚ್ಚರಿಕೆ ನೀಡಲಾಗಿದೆ. ಇಂದು ಮತ್ತು ನಾಳೆ ತಿರುವನಂತಪುರಂ ಮತ್ತು ಕೊಲ್ಲಂ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಉತ್ತರ ಕೇರಳದಲ್ಲಿ ಕಡಲುಂಡಿ (ಮಲಪುರಂ), ಭರತಪುಳ (ಪಾಲಕಾಡು), ಶಿರಿಯಾ (ಕಾಸರಗೋಡು), ಕರವನ್ನೂರ್ (ತ್ರಿಶೂರ್) ಮತ್ತು ಗಾಯತ್ರಿ (ತ್ರಿಶೂರ್) ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಇದರೊಂದಿಗೆ ದಕ್ಷಿಣ ಕೇರಳದ ವಾಮನಪುರಂ (ತಿರುವನಂತಪುರಂ), ನೆಯ್ಯರ್ (ತಿರುವನಂತಪುರಂ), ಕರಮಾನ (ತಿರುವನಂತಪುರಂ), ಕಲ್ಲಡ (ಕೊಲ್ಲಂ), ಮಣಿಮಾಲಾ (ಇಡುಕ್ಕಿ), ಮೀನಚಿಲ್ (ಕೊಟ್ಟಾಯಂ) ಮತ್ತು ಕೊತ್ತಮಂಗಲಂ (ಎರನಾಕುಲಂ) ನದಿಗಳಲ್ಲಿಯೂ ನೀರಿನ ಮಟ್ಟ ಏರುತ್ತಿದೆ.

ವರದಿಯ ಪ್ರಕಾರ ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಅಧೀನದಲ್ಲಿರುವ ಆಣೆಕಟ್ಟುಗಳ ಪೈಕಿ, ಇಡುಕ್ಕಿ ಜಿಲ್ಲೆಯ ಪೆರಿಯಾರ್ ಮತ್ತು ಕಲ್ಲರ್ಕುಟ್ಟಿ ಆಣೆಕಟ್ಟುಗಳ ಸಮೀಪದಲ್ಲಿ ರೆಡ್ ಅಲರ್ಟ್ ಮತ್ತು ತ್ರಿಶೂರ್ ಜಿಲ್ಲೆಯ ಪೆರಿಂಗಲ್ಕುತ್ ಆಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಕೋಯಿಕ್ಕೋಡ್‌ನ ಕುಟ್ಟಿಯಾಡಿ ಆಣೆಕಟ್ಟಿನಲ್ಲಿ ಬ್ಲೂ ಅಲರ್ಟ್ ಘೋಷಿಸಲಾಗಿದೆ. ಸದ್ಯ ನೀರಾವರಿ ಇಲಾಖೆ ವ್ಯಾಪ್ತಿಯ ಅಣೆಕಟ್ಟುಗಳಲ್ಲಿ ಯಾವುದೇ ಎಚ್ಚರಿಕೆ ನೀಡಿಲ್ಲ.

ಇದನ್ನೂ ಓದಿ: Karnataka Rain: ಕರ್ನಾಟಕದ 7 ಜಿಲ್ಲೆಗಳಿಗೆ ರೆಡ್ ಅಲರ್ಟ್​; ಕರಾವಳಿ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ

ಭಾರೀ ಮಳೆಯ ಎಚ್ಚರಿಕೆಯ ಮೇರೆಗೆ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ಕೇರಳ ಸರ್ಕಾರ ನಿಯೋಜಿಸಲಾಗಿದೆ. ವಯನಾಡು, ಕೋಯಿಕ್ಕೋಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಪ್ರತಿ ತಂಡವನ್ನು ಸಿದ್ಧಪಡಿಸಿದ್ದು, ಸಿವಿಲ್ ಡಿಫೆನ್ಸ್ ಅಕಾಡೆಮಿಯ ಎರಡೂ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಮಳೆಯಿಂದ ಉಕ್ಕಿ ಹರಿಯುತ್ತಿರುವ ಪಂಚಗಂಗಾ, ದೂದ್​ಗಂಗಾ ನದಿ; ಬೆಳಗಾವಿಯಲ್ಲಿ ಪ್ರವಾಹ ಭೀತಿ