ವಾರಾಣಸಿಯಲ್ಲಿ ಮಕ್ಕಳ ಜೊತೆ ನರೇಂದ್ರ ಮೋದಿ ಸಂವಾದ; ಹಾಡು, ನೃತ್ಯ ನೋಡಿ ಶಹಬ್ಭಾಸ್ ಎಂದ ಪ್ರಧಾನಿ

ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಮಧ್ಯೆ ಕುಳಿತು ಅವರ ಹಾಡು, ನೃತ್ಯ, ಯೋಗ, ಭಾಷಣ, ಮಿಮಿಕ್ರಿಯನ್ನು ವೀಕ್ಷಿಸುತ್ತಿದ್ದಾರೆ.

ವಾರಾಣಸಿಯಲ್ಲಿ ಮಕ್ಕಳ ಜೊತೆ ನರೇಂದ್ರ ಮೋದಿ ಸಂವಾದ; ಹಾಡು, ನೃತ್ಯ ನೋಡಿ ಶಹಬ್ಭಾಸ್ ಎಂದ ಪ್ರಧಾನಿ
ವಾರಾಣಸಿಯ ಮಕ್ಕಳೊಂದಿಗೆ ನರೇಂದ್ರ ಮೋದಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 08, 2022 | 9:46 AM

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ಮೋದಿಯವರ ಮುಂದೆ ತಮ್ಮ ಪ್ರತಿಭೆಯ ಪ್ರದರ್ಶನ ನೀಡಿದ ಮಕ್ಕಳನ್ನು ಅವರು ಪ್ರೋತ್ಸಾಹಿಸಿದರು. ಮಕ್ಕಳು ಸಾಂಸ್ಕೃತಿಕ ಗೀತೆಗಳನ್ನು ಹಾಡುತ್ತಾ, ಡೋಲು ಬಾರಿಸುತ್ತಾ, ಯೋಗಾಸನಗಳನ್ನು ಪ್ರದರ್ಶಿಸುತ್ತಾ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಮಧ್ಯೆ ಕುಳಿತು ಅವರ ಹಾಡು, ನೃತ್ಯ, ಯೋಗ, ಭಾಷಣ, ಮಿಮಿಕ್ರಿಯನ್ನು ವೀಕ್ಷಿಸುತ್ತಿದ್ದಾರೆ. ನಂತರ ಮಕ್ಕಳ ಪ್ರತಿಭೆಯನ್ನು ಮೆಚ್ಚಿದ ಪ್ರಧಾನಿ ಮೋದಿ, “ಶಹಬ್ಬಾಶ್! ನಿಮ್ಮೆಲ್ಲರ ಬಳಿಯೂ ಒಂದೊಂದು ವಿಭಿನ್ನ ಪ್ರತಿಭೆಯಿದೆ. ನೀವೆಲ್ಲರೂ ಅಸಾಧಾರಣ ಪ್ರತಿಭಾವಂತರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀವು ಸ್ವಚ್ಛತೆಗೆ ಆದ್ಯತೆ ನೀಡುತ್ತೀರಾ?, ಸರಿಯಾಗಿ ಕೈ ತೊಳೆದುಕೊಳ್ಳುತ್ತೀರಾ? ನಿಯಮಿತವಾಗಿ ವ್ಯಾಯಾಮ ಮಾಡುತ್ತೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಕೇಳಿದಾಗ ಮಕ್ಕಳೆಲ್ಲರೂ ಒಕ್ಕೊರಲಿನಿಂದ “ಹೌದು ಸರ್” ಎಂದು ಪ್ರತಿಕ್ರಿಯಿಸಿದರು.

ವಾರಣಾಸಿಯಲ್ಲಿ ಮೂರು ದಿನಗಳ ಸೆಮಿನಾರ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದರಲ್ಲಿ 300ಕ್ಕೂ ಹೆಚ್ಚು ಶಿಕ್ಷಣ ತಜ್ಞರು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಕುರಿತು ಚರ್ಚಿಸಲಿದ್ದಾರೆ. ಅಖಿಲ ಭಾರತೀಯ ಶಿಕ್ಷಾ ಸಮಾಗಮ್ ಪ್ರಮುಖ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ (NEP)ಯನ್ನು ಅನುಷ್ಠಾನಗೊಳಿಸುವಲ್ಲಿ ತಂತ್ರಗಳು, ಯಶಸ್ಸಿನ ಕಥೆಗಳು ಮತ್ತು ಉತ್ತಮ ಅಭ್ಯಾಸಗಳ ಕುರಿತು ಚರ್ಚಿಸಲುಈ ಕಾರ್ಯಕ್ರಮ ವೇದಿಕೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಬಿಹಾರ ವಿಧಾನಸಭೆಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ ಮೋದಿ

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ, ಬ್ರಿಟಿಷರು ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸಲು ಸೇವಕ ವರ್ಗವನ್ನು ರಚಿಸಲು ದೇಶಕ್ಕೆ ಶಿಕ್ಷಣ ವ್ಯವಸ್ಥೆಯನ್ನು ನೀಡಿದರು. ಈ ವ್ಯವಸ್ಥೆಯು ಕೇವಲ ಪದವಿ ಹೊಂದಿರುವವರನ್ನು ಉತ್ಪಾದಿಸದೆ ದೇಶವನ್ನು ಮುನ್ನಡೆಸಲು ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸಬೇಕು. ದೇಶದಲ್ಲಿ ಸೃಷ್ಟಿಯಾದ ಶಿಕ್ಷಣ ವ್ಯವಸ್ಥೆಯ ಉದ್ದೇಶ ಕೇವಲ ಉದ್ಯೋಗ ನೀಡುವುದಾಗಿದೆ ಎಂದಿದ್ದಾರೆ.

ಬ್ರಿಟಿಷರು ತಮ್ಮ ಅಗತ್ಯಗಳನ್ನು ಪೂರೈಸಲು ಸೇವಕ ವರ್ಗವನ್ನು ತಯಾರಿಸಲು ಈ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಿದರು. ಸ್ವಾತಂತ್ರ್ಯದ ನಂತರ ಅದರಲ್ಲಿ ಕೆಲವು ಬದಲಾವಣೆಗಳಾದವು. ಆದರೆ ಬಹಳಷ್ಟು ಹಾಗೇ ಉಳಿದಿವೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದೊಂದಿಗೆ ಆಯೋಜಿಸಿದ್ದ ಮೂರು ದಿನಗಳ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: PM Modi Varanasi Visit: ವಾರಾಣಸಿಗೆ ಇಂದು ಪ್ರಧಾನಿ ಮೋದಿ ಭೇಟಿ; 1,800 ಕೋಟಿ ರೂ. ಯೋಜನೆಗಳಿಗೆ ಚಾಲನೆ

“ನಾವು ಕೇವಲ ಪದವಿ ಹೊಂದಿರುವ ಯುವಕರನ್ನು ಉತ್ಪಾದಿಸಬಾರದು. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಗೂ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ಉತ್ಪಾದಿಸಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.