Maharashtra Politics: ಸಿಎಂ ಏಕನಾಥ್ ಶಿಂಧೆ ಸರ್ಕಾರಕ್ಕೆ ಉದ್ಧವ್ ಠಾಕ್ರೆ ಬಣದಿಂದ ಹೊಸ ಸವಾಲು
ಬಿಜೆಪಿಯೊಂದಿಗೆ ಕೈಜೋಡಿಸಿದ್ದ ಶಿವಸೇನೆ ಬಂಡಾಯ ಬಣದ ನೂತನ ಸರ್ಕಾರ ರಚನೆಗೆ ಮುಂದಾಗಿತ್ತು. ಅದರಂತೆ ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮತ್ತು ದೇವೇಂದ್ರ ಫಡ್ನವಿಸ್ ಅವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ (Maharashtra CM Eknath Shinde) ಮತ್ತು ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ (Devendra Fadnavis) ಪ್ರಮಾಣವಚನ ಸ್ವೀಕಾರ ಮಾಡಿದ್ದರೂ ಅಲ್ಲಿನ ರಾಜಕೀಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಏಕನಾಥ್ ಶಿಂಧೆ ಅವರನ್ನು ಆಹ್ವಾನಿಸುವ ರಾಜ್ಯಪಾಲ ಭಗತ್ ಸಿಂಗ್ ನಿರ್ಧಾರದ ವಿರುದ್ಧ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸುಪ್ರೀಂ ಕೋರ್ಟ್‌ಗೆ (Supreme Court) ಮೊರೆ ಹೋಗಿದೆ. ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಮತ್ತು ಸ್ಪೀಕರ್ ಆಯ್ಕೆಗೆ ಆಹ್ವಾನಿಸುವ ಮಹಾರಾಷ್ಟ್ರ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ನೇತೃತ್ವದ ಬಣದ ಅರ್ಜಿಯನ್ನು ಜುಲೈ 11ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸಿ ಅಧಿಕಾರದದಲ್ಲಿ ಮುಂದುವರೆದಿದ್ದರು. ಆದರೆ, ಅನರ್ಹತೆ ಪ್ರಕ್ರಿಯೆ ಬಾಕಿಯಿರುವ 16 ಬಂಡಾಯ ಶಾಸಕರು ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಉದ್ಧವ್ ಠಾಕ್ರೆ ಶಿಬಿರ ವಾದಿಸಿತ್ತು.
ಇದನ್ನೂ ಓದಿ: Eknath Shinde: ಪ್ರಜ್ಞೆ ತಪ್ಪಿದ ಮಹಿಳಾ ಕಾನ್ಸ್ಟೆಬಲ್ಗೆ ಸಹಾಯ ಮಾಡಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ; ವಿಡಿಯೋ ವೈರಲ್
ಜೂನ್ 30ರಂದು ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಬಳಿಕ ಗೋವಾದಲ್ಲಿ ಬಿಡಾರ ಹೂಡಿದ್ದ ಬಂಡಾಯ ಶಾಸಕರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಬಿಜೆಪಿಯೊಂದಿಗೆ ಕೈಜೋಡಿಸಿದ್ದ ಶಿವಸೇನೆ ಬಂಡಾಯ ಬಣದ ನೂತನ ಸರ್ಕಾರ ರಚನೆಗೆ ಮುಂದಾಗಿತ್ತು. ಅದರಂತೆ ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮತ್ತು ದೇವೇಂದ್ರ ಫಡ್ನವಿಸ್ ಅವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದನ್ನೂ ಓದಿ: Eknath Shinde: ಮರ್ಸಿಡಿಸ್ ಬೆಂಜ್ ಕಾರನ್ನು ಆಟೋರಿಕ್ಷಾ ಹಿಂದಿಕ್ಕಿದೆ; ಉದ್ಧವ್ ಠಾಕ್ರೆಗೆ ಏಕನಾಥ್ ಶಿಂಧೆ ತಿರುಗೇಟು
ಅದಾದ ನಾಲ್ಕು ದಿನಗಳ ನಂತರ ಏಕನಾಥ್ ಶಿಂಧೆ ಅವರ ಪಾಳಯ ಮಹಾರಾಷ್ಟ್ರದ 288 ಸದಸ್ಯರ ಅಸೆಂಬ್ಲಿಯಲ್ಲಿ 164 ಮತಗಳನ್ನು ಪಡೆದಿದ್ದರು. ಸರಳ ಬಹುಮತಕ್ಕೆ 144ಕ್ಕಿಂತ ಹೆಚ್ಚು ಶಾಸಕರ ಬೆಂಬಲ ಬೇಕಾಗಿತ್ತು. ಆದರೆ, ಏಕನಾಥ್ ಶಿಂಧೆ ಅವರಿಗೆ 164 ಶಾಸಕರು ಬೆಂಬಲ ಘೋಷಿಸಿದ್ದರು. ಕೇವಲ 99 ಶಾಸಕರು ಮಾತ್ರ ಅದರ ವಿರುದ್ಧ ಮತ ಚಲಾಯಿಸಿದ್ದರು.
Published On - 9:13 am, Fri, 8 July 22