AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂಗಳು ನಮ್ಮ ಪೂರ್ವಜರು, ಗೋಹತ್ಯೆ ಮಾಡಬೇಡಿ: ಬದ್ರುದ್ದೀನ್ ಅಜ್ಮಲ್

ಈದ್-ಉಲ್-ಅಧಾ ಸಂದರ್ಭದಲ್ಲಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಗೋವುಗಳನ್ನು ಬಲಿ ನೀಡದಂತೆ ಅಸ್ಸಾಂನ ಮುಸ್ಲಿಮರಿಗೆ ತನ್ನ ಮನವಿಯನ್ನು ಮಾಡಿದ್ದಾರೆ. 

ಹಿಂದೂಗಳು ನಮ್ಮ ಪೂರ್ವಜರು, ಗೋಹತ್ಯೆ ಮಾಡಬೇಡಿ: ಬದ್ರುದ್ದೀನ್ ಅಜ್ಮಲ್
Badruddin Ajmal
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Jul 08, 2022 | 10:57 AM

Share

ಗುವಾಹಟಿ: ಅಸ್ಸಾಂ ಲೋಕಸಭಾ ಸಂಸದ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್, ಅವರು ಅಸ್ಸಾಂ ರಾಜ್ಯ ಜಮಿಯತ್ ಉಲಮಾ (ASJU) ನ ಅಧ್ಯಕ್ಷರಾಗಿದ್ದಾರೆ.  ದಿಯೋಬಂದಿ ಸ್ಕೂಲ್ ಆಫ್ ಥಾಟ್‌ಗೆ ಸೇರಿದ ಇಸ್ಲಾಮಿಕ್ ವಿದ್ವಾಂಸರ ಪ್ರಮುಖ ಸಂಸ್ಥೆಗಳ ಉನ್ನತ ಸಂಸ್ಥೆಗಳು ಈ ವಾರದ ಈದ್-ಉಲ್-ಅಧಾ ಸಂದರ್ಭದಲ್ಲಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಗೋವುಗಳನ್ನು ಬಲಿ ನೀಡದಂತೆ ಅಸ್ಸಾಂನ ಮುಸ್ಲಿಮರಿಗೆ ತನ್ನ ಮನವಿಯನ್ನು ಮಾಡಿದ್ದಾರೆ.

ಆರ್‌ಎಸ್‌ ಎಸ್‌ ನ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೆಲವರು ಹಿಂದೂ ದೇಶ ಮಾಡಲು ಪ್ರಯತ್ನಿಸುವ ಮೂಲಕ ಹಿಂದೂಸ್ತಾನವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ. ಅವರ ಕನಸಿನಲ್ಲಿಯೂ ಹಿಂದೂ  ದೇಶ ಆಗುವುದಿಲ್ಲ. ಅವರು ಈ ದೇಶದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಏಕತೆಯನ್ನು ಒಡೆಯಲು ಸಾಧ್ಯವಿಲ್ಲ.   ಈದ್‌ನಲ್ಲಿ ಒಂದು ದಿನ ಗೋವುಗಳನ್ನು ಹತ್ಯೆ ಮಾಡಬಾರದು, ಬದಲಿಗೆ ನಾವು ಈದ್‌ ನ್ನು  ಹಿಂದೂ ಭಾಯಿಗಳೊಂದಿಗೆ ಆಚರಿಸುತ್ತೇವೆ. ನಮ್ಮ ಪೂರ್ವಜರೆಲ್ಲರೂ ಹಿಂದೂಗಳು. ನಂತರದಲ್ಲಿ  ಅವರು ಇಸ್ಲಾಂಗೆ ಬಂದರು ಏಕೆಂದರೆ ಅದು ವಿಶೇಷ ಗುಣಗಳನ್ನು ಹೊಂದಿರುವ ಧರ್ಮ. ಅದು ಇತರ ಧರ್ಮಗಳ ಭಾವನೆಗಳನ್ನು ಗೌರವಿಸುತ್ತದೆ ಎಂದು ಶ್ರೀ ಅಜ್ಮಲ್  ಸುದ್ದಿಗಾರರಿಗೆ ತಿಳಿಸಿದರು.

ಭಾನುವಾರದಂದು ಆಚರಿಸಲಾಗುವ ಈದ್-ಉಲ್-ಅಧಾ ದಿನದಂದು ‘ಕುರ್ಬಾನಿ’ ಅಥವಾ ತ್ಯಾಗ ಮಾಡುವುದು ಮುಸ್ಲಿಮರಿಗೆ ಅತ್ಯಗತ್ಯ ಕರ್ತವ್ಯವಾಗಿದೆ ಎಂದು ಈ ಹಿಂದೆ ಹೇಳಿಕೆಯಲ್ಲಿ ಶ್ರೀ ಅಜ್ಮಲ್ ಹೇಳಿದ್ದರು, ಅವರು ಧಾರ್ಮಿಕ ವಿಧಿ ಮತ್ತು ಸಂಪ್ರದಾಯಗಳಲ್ಲಿ ನೀಡಲಾಗುವ  ಪ್ರಾಣಿಗಳನ್ನು ಬಲಿಕೊಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಇದನ್ನು ಓದಿ: ಟೆಂಡರ್ ಹಗರಣ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್​ ಆಪ್ತನಿಗೆ ಸೇರಿದ 18 ಸ್ಥಳಗಳಲ್ಲಿ ಇಡಿ ದಾಳಿ

ಭಾರತವು ವೈವಿಧ್ಯಮಯ ಸಮುದಾಯಗಳು, ಜನಾಂಗೀಯ ಗುಂಪುಗಳು ಮತ್ತು ಧರ್ಮಗಳ ಜನರ ದೇಶವಾಗಿದೆ. ಭಾರತದ ಹೆಚ್ಚಿನ ನಿವಾಸಿಗಳು ಸನಾತನ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ,  ಹಸುವನ್ನು ಪವಿತ್ರ ಪ್ರಾಣಿ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.

ಹಿಂದೂಗಳು, ಬೌದ್ಧರು, ಸಿಖ್ಖರು, ಜೈನರು ಮತ್ತು ಇತರ ಜಾತಿ ಧರ್ಮದವರು ವಾಸಿಸುವ ಯಾವುದೇ ಪ್ರದೇಶದಲ್ಲಿ ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟವುದನ್ನು ನಿಷೇಧಿಸಿದೆ, ಇದನ್ನು ಕಳೆದ ವರ್ಷ ಅಂಗೀಕರಿಸಿದ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ, 2021 ಅನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಹೇಳಿಕೆ ಮತ್ತು ಭೀಕರ ಹತ್ಯೆಗಳ ಸುತ್ತಲಿನ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ಅಜ್ಮಲ್, “ಮುಸ್ಲಿಮರು ಪ್ರತಿಕ್ರಿಯಿಸಬಾರದು, ಬದಲಿಗೆ, ದೇವರು ನೂಪುರ್ ಶರ್ಮಾ ಅವರಂತಹವರಿಗೆ ಬುದ್ದಿಯನ್ನು ನೀಡಬೇಕೆಂದು ಪ್ರಾರ್ಥಿಸಬೇಕು. ಶಿರಚ್ಛೇದ ಮಾಡುವುದು ಮೂರ್ಖತನ ಎಂದಿದ್ದಾರೆ.

Published On - 9:50 am, Fri, 8 July 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?