ಕೇಂದ್ರ ಸಚಿವ ನಿತಿನ್​​​ ಗಡ್ಕರಿಗೆ ಗೌರವ ಡಾಕ್ಟರ್​​ ಆಫ್​​ ಸಯನ್ಸ್​​​ ಪದವಿ ಪ್ರದಾನ

ಗವರ್ನರ್ ಮತ್ತು ಪಬ್ಲಿಕ್ ಯುನಿವರ್ಸಿಟಿ ಚಾನ್ಸೆಲರ್​​ ಭಗತ್ ಸಿಂಗ್ ಕೊಶ್ಯಾರಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೇಂದ್ರ ಸಚಿವ ಗಡ್ಕರಿ ಅವರಿಗೆ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿದರು.

ಕೇಂದ್ರ ಸಚಿವ ನಿತಿನ್​​​ ಗಡ್ಕರಿಗೆ ಗೌರವ ಡಾಕ್ಟರ್​​ ಆಫ್​​ ಸಯನ್ಸ್​​​ ಪದವಿ ಪ್ರದಾನ
ನಿತಿನ್ ಗಡ್ಕರಿ
TV9kannada Web Team

| Edited By: Rashmi Kallakatta

Jul 07, 2022 | 8:51 PM

ಮಹಾರಾಷ್ಟ್ರದ (Maharashtra) ಅಲೋಕಾದಲ್ಲಿರುವ ಡಾ ಪಂಜಾಬ್​​ರಾವ್ ದೇಶ್​​ಮುಖ್​​​ ಕೃಷಿ ವಿದ್ಯಾಪೀಠವು  ಕೇಂದ್ರ ಸಚಿವ ನಿತಿನ್​​ ಗಡ್ಕರಿ (Nitin Gadkari) ಅವರಿಗೆ ಗುರುವಾರ ಡಾಕ್ಟರ್ ಆಫ್ ಸಯನ್ಸ್ ಪದವಿ ನೀಡಿ ಗೌರವಿಸಿದೆ. ಗವರ್ನರ್ ಮತ್ತು ಪಬ್ಲಿಕ್ ಯುನಿವರ್ಸಿಟಿ ಚಾನ್ಸೆಲರ್​​ ಭಗತ್ ಸಿಂಗ್ ಕೊಶ್ಯಾರಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೇಂದ್ರ ಸಚಿವ ಗಡ್ಕರಿ ಅವರಿಗೆ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿದರು.

ಮಾಜಿ ವೈಸ್ ಚಾನ್ಸೆಲರ್  ಡಾ ಮೋತಿಲಾಲ್ ಮದನ್, ವಿಸಿ ಡಾ ವಿಲಾಸ್ ಭಾಲೆ , ಡೀನ್ಸ್ , ವಿಶ್ವ ವಿದ್ಯಾಲಯದ  ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಬಹುಮಾನಗಳನ್ನು ವಿತರಿಸಲಾಯಿತು.

Follow us on

Related Stories

Most Read Stories

Click on your DTH Provider to Add TV9 Kannada