ಮುಂಬೈಯಲ್ಲಿ 2,500 ಕೆಜಿಗಿಂತಲೂ ಹೆಚ್ಚು ಬೀಫ್ ವಶಕ್ಕೆ, 10 ಮಂದಿ ಬಂಧನ

ಪ್ರಾಣಿ ದಯಾ ಸಂಘದವರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಘಾಟ್ಕೊಪರ್ -ಮಾನ್ಖುರ್ದ್ ಲಿಂಕ್ ರೋಡ್​​ನಲ್ಲಿ ಗುರುವಾರ ಬಲೆ ಬೀಸಿದ್ದು ನಿಷೇಧಿತ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಂಬೈಯಲ್ಲಿ 2,500 ಕೆಜಿಗಿಂತಲೂ ಹೆಚ್ಚು ಬೀಫ್ ವಶಕ್ಕೆ, 10 ಮಂದಿ ಬಂಧನ
ಮುಂಬೈ ಪೊಲೀಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 07, 2022 | 7:54 PM

ಮುಂಬೈ: ಮುಂಬೈ ಸಬ್ಅರ್ಬನ್ ದಿಯೊನರ್​​ನಲ್ಲಿ (Deonar) ಗುರುವಾರ 2,500 ಕೆಜಿಗಿಂತಲೂ ಹೆಚ್ಚು ಬೀಫ್ (Beef) ವಶ ಪಡಿಸಿಕೊಳ್ಳಲಾಗಿದ್ದು 10 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು (Mumbai Police) ಹೇಳಿದ್ದಾರೆ. ಪ್ರಾಣಿ ದಯಾ ಸಂಘದವರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಘಾಟ್ಕೊಪರ್ -ಮಾನ್ಖುರ್ದ್ ಲಿಂಕ್ ರೋಡ್​​ನಲ್ಲಿ ಗುರುವಾರ ಬಲೆ ಬೀಸಿದ್ದು ನಿಷೇಧಿತ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ತುಂಬಿಸುತ್ತಿರುವಾಗ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಿಯೊನರ್ ಪೊಲೀಸ್ ಠಾಣೆಯ ಸಿಬ್ಬಂದಿ ಹೇಳಿದ್ದಾರೆ. ಮಾಂಸ ಸಾಗಿಸುತ್ತಿದ್ದ ಮೂರು ವಾಹನಗಳನ್ನು ಮತ್ತು ಅದರಲ್ಲಿ ಭಾಗಿಯಾಗಿರುವ ಹತ್ತು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶಫೀಖ್ ಟಾಡಾ ಎಂಬವರ ಸಹಾಯದಿಂದ ಮಾಲೇಂಗಾವ್ ನಿಂದ ಬೀಫ್ ತರಲಾಗಿದೆ ಎಂದು ಹೇಳಲಾಗಿದ್ದು ಇದನ್ನು ಸಾಜಿದ್ ಖುರೇಷಿ ಎಂಬವರಿಗೆ ಕೊಡುವುದಕ್ಕಾಗಿ ಕೊಂಡೊಯ್ಯಲಾಗುತ್ತಿತ್ತು.

ವಶ ಪಡಿಸಿಕೊಂಡಿರುವ ಬೀಫ್​​ನ ಸ್ಯಾಂಪಲ್​​ಗಳನ್ನು ಫಾರೆನ್ಸಿಕ್ ಲ್ಯಾಬ್​​​ಗೆ ಕಳಿಸಿಕೊಡಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ, ಮಹಾರಾಷ್ಟ್ರ ಪ್ರಾಣಿ ಸಂರಕ್ಷಣೆ ಕಾಯ್ದೆ ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Published On - 7:46 pm, Thu, 7 July 22