Nainital Accident: ನೈನಿತಾಲ್​ನ​ ನದಿಯಲ್ಲಿ ಕೊಚ್ಚಿಹೋದ ಕಾರು; 9 ಜನ ಸಾವು, ಮಹಿಳೆಯ ರಕ್ಷಣೆ

ಪ್ರವಾಸ ಹೊರಟಿದ್ದಾಗ ವಾಹನ ಧೇಲಾ ನದಿಯಲ್ಲಿ ಮುಳುಗಿದ್ದು, ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ. ಐವರ ಶವ ಇನ್ನೂ ಕಾರಿನಲ್ಲಿ ಉಳಿದಿದೆ. ನಾಜಿಯಾ ಎಂಬ 22 ವರ್ಷದ ಮಹಿಳೆಯನ್ನು ಆ ವಾಹನದಿಂದ ಜೀವಂತವಾಗಿ ರಕ್ಷಿಸಲಾಗಿದೆ.

Nainital Accident: ನೈನಿತಾಲ್​ನ​ ನದಿಯಲ್ಲಿ ಕೊಚ್ಚಿಹೋದ ಕಾರು; 9 ಜನ ಸಾವು, ಮಹಿಳೆಯ ರಕ್ಷಣೆ
ನೈನಿತಾಲ್​ನಲ್ಲಿ ಕೊಚ್ಚಿಹೋದ ವಾಹನ
Image Credit source: Indian Express
TV9kannada Web Team

| Edited By: Sushma Chakre

Jul 08, 2022 | 10:27 AM

ನೈನಿತಾಲ್: ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಇಂದು ಬೆಳಗ್ಗೆ ಉತ್ತರಾಖಂಡದ ರಾಮನಗರದಲ್ಲಿ ಕಾರೊಂದು ಧೇಲಾ ನದಿಗೆ (Dhela River) ಬಿದ್ದು, ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಈ ದುರಂತದಲ್ಲಿ ಪಂಜಾಬ್‌ನ 9 ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಒಬ್ಬರನ್ನು ರಕ್ಷಿಸಲಾಗಿದೆ. ಈಗಾಗಲೇ 4 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 5 ಶವಗಳು ಕಾರಿನೊಳಗೆ ಸಿಲುಕಿಕೊಂಡಿವೆ. ನೀರಿನಲ್ಲಿ ಮುಳುಗಿದ್ದ ಒಬ್ಬರನ್ನು ರಕ್ಷಿಸಲಾಗಿದೆ.

ಪ್ರವಾಸ ಹೊರಟಿದ್ದಾಗ ವಾಹನ ಧೇಲಾ ನದಿಯಲ್ಲಿ ಮುಳುಗಿದ್ದು, ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ. ಐವರ ಶವ ಇನ್ನೂ ಕಾರಿನಲ್ಲಿ ಉಳಿದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇಂದು ಮುಂಜಾನೆ ಮಳೆಯಿಂದಾಗಿ ಭಾರೀ ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಕುಮಾವೂನ್ ರೇಂಜ್‌ನ ಡಿಐಜಿ ಆನಂದ್ ಭರನ್ ANIಗೆ ತಿಳಿಸಿದ್ದಾರೆ.

ಇದನ್ನೂ ಓದಿ: Kerala Rain: ಕೇರಳದಲ್ಲಿ ಐದು ದಿನ ಭಾರೀ ಮಳೆ: ಮುಖ್ಯಮಂತ್ರಿ ಕಚೇರಿಯಿಂದ ಸಿದ್ಧತೆಗೆ ಸೂಚನೆ

ಉತ್ತರಾಖಂಡದ ರಾಮನಗರದ ಧೇಲಾ ನದಿಗೆ ಕಾರು ಬಿದ್ದಿದ್ದರಿಂದ ಪಂಜಾಬ್‌ನ ಒಂಬತ್ತು ಪ್ರವಾಸಿಗರು ಇಂದು ಬೆಳಿಗ್ಗೆ ನೀರಿನಲ್ಲಿ ಮುಳುಗಿ, ಬಲವಾದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಐವರ ಶವ ಇನ್ನೂ ಕಾರಿನೊಳಗೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ

ನಾಜಿಯಾ ಎಂಬ 22 ವರ್ಷದ ಮಹಿಳೆಯನ್ನು ಆ ವಾಹನದಿಂದ ಜೀವಂತವಾಗಿ ರಕ್ಷಿಸಲಾಗಿದೆ. ಆಕೆಯನ್ನು ರಾಮನಗರ ಆಸ್ಪತ್ರೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada