ದೇವನಹಳ್ಳಿಯಲ್ಲಿ ನೂತನ ಕೆಂಪೇಗೌಡ ಪ್ರತಿಮೆಯನ್ನು ಅನಾವರಣಗೊಳಿಸಿದ ಡಿಸಿಎಂ ಡಿಕೆ ಶಿವಕುಮಾರ್
ಸ್ಮಾರಕ ನಿರ್ಮಾಣದ ವಿಷಯವಾಗಿ ಮಾತಾಡಿದ ಡಿಕೆ ಶಿವಕುಮಾರ್, ಆ ಕೆಲಸವೂ ಆದಷ್ಟು ಬೇಗ ಆರಂಭಗೊಳ್ಳಲಿದೆ, ಈಗಾಗಲೇ 5 ಎಕರೆ ಜಮೀನನ್ನು ನೀಡಲಾಗಿದೆ, ಸಚಿವ ಕೆ ಹೆಚ್ ಮುನಿಯಪ್ಪನವರು ಇನ್ನೂ 10 ಎಕರೆ ಜಮೀನನ್ನು ಮಂಜೂರು ಮಾಡಿದ್ದಾರೆ , ಇಷ್ಟರಲ್ಲೇ ಭೂಮಿ ಪೂಜೆಯಾಗಲಿದೆ, ಮಿಕ್ಕ ವಿಷಯಗಳನ್ನು ಬೆಂಗಳೂರಲ್ಲಿ ಮಾತಾಡುತ್ತೇನೆ ಎಂದು ಹೇಳಿದರು.
ದೇವನಹಳ್ಳಿ, ಜೂನ್ 27: ಇಂದು ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿಯಾಗಿದ್ದು (Kempegowda Jayanti) ದೇವನಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೆಂಪೇಗೌಡ ಪ್ರತಿಮೆಯನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅನಾವರಣ ಮಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿದ್ದು ಬಹಳ ಸಂತೋಷವಾಗುತ್ತಿದೆ, ಪ್ರತಿವರ್ಷ ಇವತ್ತಿನ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಮತ್ತು ಯೋಜನಾ ಆಯೋಗದ ಪದಾಧಿಕಾರಿಗಳು ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆಂದು ಹೇಳಿದರು.
ಇದನ್ನೂ ಓದಿ: ಬಿಆರ್ ಪಾಟೀಲ್ ಅವರೊಂದಿಗೆ ಮಾತಾಡಿದ್ದೇನೆ, ಪಕ್ಷದ ಅಧ್ಯಕ್ಷನಾಗಿ ವಿಷಯ ತಿಳಿದುಕೊಳ್ಳಬೇಕಿತ್ತು: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos