ಕುನೂರ್ ಹೆಲಿಕಾಪ್ಟರ್ ದುರಂತದಲ್ಲಿ ಮರಣಿಸಿದವರ ಪಾರ್ಥೀವ ಶರೀರ ಸಾಗಿಸುವಾಗಲೂ ಅಪಘಾತ, ಪೊಲೀಸರಿಗೆ ಗಾಯ
ಪುಣ್ಯಕ್ಕೆ ಅಂಬ್ಯುಲೆನ್ಸ್ಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳು, ಔಷಧಿಯ ಜೊತೆಗೆ ಒಂದಷ್ಟು ಪ್ಯಾರಾ ಮೆಡಿಕಲ್ ವರ್ಕರ್ಗಳಿದ್ದರು. ಅವರು ಕೂಡಲೇ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ್ದಾರೆ
ಇದು ಆಗಬಾರದಿತ್ತು ನಿಜ, ಆದರೆ ಆಗಲಿರುವುದನ್ನು ಯಾರಿಂದ ತಪ್ಪಿಸಲಾಗುತ್ತದೆ? ಬುಧವಾರದಂದು ನಡೆದ ಘೋರ ಸೇನಾ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಭಾರತೀಯ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಧರ್ಮಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 13 ಜನ ದಾರುರ ಮರಣವನ್ನಪ್ಪಿದ್ದು ಭಾರತೀಯರಿಗೆ ಯಾವತ್ತೂ ಮರೆಯಲಾಗದ ಸಂಗತಿ. ನಿಮಗೆ ಗೊತ್ತಿರುವ ಹಾಗೆ ಮೃತರ ದೇಹಗಳನ್ನು ಗುರುವಾರದಂದು ದೆಹಲಿಗೆ ಕಳಿಸುವ ವ್ಯವಸ್ಥೆ ಮಾಡಲಾಯಿತು. ಆದರೆ ದೇಹಗಳನ್ನು ಅಂಬ್ಯುಲೆನ್ಸ್ನಲ್ಲಿ ಸಾಗಿಸುವಾಗ ಮತ್ತೊಂದು ಅವಘಡ ತಮಿಳುನಾಡಿನಲ್ಲಿ ಸಂಭವಿಸಿತು.
ರಸ್ತೆಯ ಬದಿಯ ಬೆಟ್ಟಕ್ಕೆ ಈ ಅಂಬ್ಯುಲೆನ್ಸ್ ಗುದ್ದಿದೆ. ಅಪಘಾತ ಯಾಕೆ ಸಂಭವಿಸಿತು ಅನ್ನೋದು ನಮಗೆ ಗೊತ್ತಾಗಿಲ್ಲ. ಆದರೆ ವಿಡಿಯೋ ನೋಡಿದ ನಂತರ ನಮಗೆ ಗೊತ್ತಾಗುವ ಸಂಗತಿಯೇನೆಂದರೆ, ಅಂಬ್ಯುಲೆನ್ಸ್ನಲ್ಲಿ ಒಬ್ಬರ ಪಾರ್ಥೀವ ಶರೀರವಿತ್ತು. ಅದು ಯಾರದು ಅಂತ ಖಚಿತವಾಗಿಲ್ಲ. ಅದೇ ವಾಹನದಲ್ಲಿ 7-8 ಪೊಲೀಸರು ಇದ್ದಾರೆ. ವಾಹನ ಬೆಟ್ಟಕ್ಕೆ ಜೋರಾಗಿಯೇ ಗುದ್ದಿದಂತಿದೆ. ಜರ್ಕ್ನಿಂದಾಗಿ ಅದರೊಳಗಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪುಣ್ಯಕ್ಕೆ ಅಂಬ್ಯುಲೆನ್ಸ್ಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆಗಳು, ಔಷಧಿಯ ಜೊತೆಗೆ ಒಂದಷ್ಟು ಪ್ಯಾರಾ ಮೆಡಿಕಲ್ ವರ್ಕರ್ಗಳಿದ್ದರು. ಅವರು ಕೂಡಲೇ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ್ದಾರೆ. ಅದಾದ ಮೇಲೆ ಸ್ಥಳಕ್ಕೆ ಇನ್ನೊಂದು ಅಂಬ್ಯುಲೆನ್ಸ್ ತರಿಸಿಕೊಂಡು ಪಾರ್ಥೀವ ಶರೀರವನ್ನು ಅದರಲ್ಲಿ ಇರಿಸಲಾಗಿದೆ. ಚೇತರಿಸಿಕೊಂಡ ಪೊಲೀಸರು ಹೊಸ ಅಂಬ್ಯುಲೆನ್ಸ್ಗೆ ಶಿಫ್ಟ್ ಆಗಿದ್ದಾರೆ.