ಹೆಬ್ಬಾಳದಲ್ಲಿ ಬಂಪರ್ ಟು ಬಂಪರ್ ಜಾಮ್ ಇದ್ದರೂ ಚಾಕ್ಯಚಕ್ಯತೆಯಿಂದ ಅಂಬ್ಯುಲನ್ಸ್ ದಾಟಿಸಿದ ಚಾಲಕ

|

Updated on: Oct 14, 2024 | 1:40 PM

ಹೆಬ್ಬಾಳ ರಸ್ತೆಯಲ್ಲಿ ಹೆಚ್ಚುಕಡಿಮೆ ಪ್ರತಿದಿನ ಟ್ರಾಫಿಕ್ ಜಾಮ್ ಆಗುತ್ತಿದೆ ಮತ್ತು ವಾಹನ ಸವಾರರು ಸಂಬಂಧಪಟ್ಟವರಿಗೆ ಶಾಪ ಹಾಕುತ್ತಿರುವ ದೃಶ್ಯ ಅತ್ಯಂತ ಸಾಮಾನ್ಯವಾಗಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಮೊದಲು ಬಾಟಲ್ ನೆಕ್ ರಸ್ತೆ ಇರುವುದರಿಂದ ಟ್ರಾಫಿಕ್ ಜಾಮ್ ನಿತ್ಯದ ಸಮಸ್ಯೆಯಾಗಿರಬಹುದು.

ಬೆಂಗಳೂರು: ಹೆಬ್ಬಾಳದಲ್ಲಿ ಬಂಪರ್ ಟು ಬಂಪರ್ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿರುವ ಅಂಬ್ಯುಲನ್ಸ್ ಚಾಲಕನ ಕರ್ತವ್ಯ ಪ್ರಜ್ಞೆ ಮತ್ತು ಡ್ರೈವಿಂಗ್ ಸ್ಕಿಲ್ಸ್ ಮೆಚ್ಚಲೇಬೇಕು. ಒಂದು ಸ್ಕೂಟರ್ ಸಹ ತೂರಲು ಸಾಧ್ಯವಿಲ್ಲದ ಜಾಮ್ ನಲ್ಲಿ ಚಾಲಕ ತನ್ನ ಚಾಕ್ಯಚಕ್ಯತೆಯಿಂದ ವಾಹನವನ್ನು ಕಾರು ಮತ್ತು ಬೇರೆ ವಾಹನಗಳನ್ನು ಕ್ರಮೇಣ ನಿಧಾನವಾಗಿಯಾದರೂ ಖಚಿತವಾಗಿ ಹಿಂದಟ್ಟಿ ಮುಂದೆ ಸಾಗುತ್ತಾ ಜಾಮ್ ನಿಂದ ಹೊರಬಿದ್ದು ಆಸ್ಪತ್ರೆಯತ್ತ ಸಾಗುತ್ತಾನೆ. ಅಂಬ್ಯುಲೆನ್ಸ್ ನಲ್ಲಿದ್ದ ರೋಗಿ ಮತ್ತು ಅವರೊಂದಿಗಿದ್ದ ಕುಟುಂಬಸ್ಥರು ಚಾಲಕನಿಗೆ ಕೋಟಿ ವಂದನೆ ಹೇಳಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬೆಂಗಳೂರು ಟ್ರಾಫಿಕ್ ಜಾಮ್ ಬಿಸಿ ರೈಲಿಗೂ ತಟ್ಟಿತಾ? ಪೊಲೀಸರು ಹೇಳುವುದೇ ಬೇರೆ!