AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟ್ರಾಫಿಕ್ ಜಾಮ್ ಬಿಸಿ ರೈಲಿಗೂ ತಟ್ಟಿತಾ? ಪೊಲೀಸರು ಹೇಳುವುದೇ ಬೇರೆ!

ಬೆಂಗಳೂರಿನಲ್ಲಿ ರೈಲು ಬರುವ ವೇಳೆ ಟ್ರಾಫಿಕ್ ಜಾಮ್ ಉಂಟಾದ ವಿಚಾರವಾಗಿ ವಿಡಿಯೋ ವೈರಲ್ ಆಗಿರುವ ಬಗ್ಗೆ ಪೊಲೀಸರು ಮತ್ತು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಹಾಗಾದರೆ, ನಿಜಕ್ಕೂ ಅಲ್ಲಿ ನಡೆದಿದ್ದೇನು? ರೈಲಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದ್ದು ನಿಜವಾ? ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬೆಂಗಳೂರು ಟ್ರಾಫಿಕ್ ಜಾಮ್ ಬಿಸಿ ರೈಲಿಗೂ ತಟ್ಟಿತಾ? ಪೊಲೀಸರು ಹೇಳುವುದೇ ಬೇರೆ!
ಬೆಂಗಳೂರು ಟ್ರಾಫಿಕ್ ಜಾಮ್ ಬಿಸಿ ರೈಲಿಗೂ ತಟ್ಟಿತಾ? ಪೊಲೀಸರು ಹೇಳುವುದೇ ಬೇರೆ!
Ganapathi Sharma
|

Updated on: Sep 26, 2024 | 12:52 PM

Share

ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನ ಮುನೇನಕೊಳಲು ರೈಲ್ವೆ ಕ್ರಾಸಿಂಗ್ ಬಳಿ ರೈಲಿಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಸಂಚಾರ ದಟ್ಟಣೆಯ ಪರಿಣಾಮ ರೈಲು ಪ್ರಯಾಣದ ಮೇಲೂ ಬೀರಿದೆ ಎಂಬ ಸುದ್ದಿಗಳ ಜತೆಗೆ ವಿಡಿಯೋ ಕೂಡ ವೈರಲ್ ಆಗಿ ದೊಡ್ಡ ಸದ್ದು ಮಾಡಿತ್ತು. ಈ ಬಗ್ಗೆ ಇದೀಗ ರೈಲ್ವೆ ಇಲಾಖೆ ಮತ್ತು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ನಿಜಕ್ಕೂ ನಡೆದಿದ್ದೇನು? ಪೊಲೀಸರು, ರೈಲ್ವೆ ಇಲಾಖೆ ಹೇಳಿದ್ದೇನು?

ರೈಲ್ವೆ ಇಲಾಖೆ ಮತ್ತು ಪೊಲೀಸರು ಹೇಳಿರುವ ಪ್ರಕಾರ, ಸಂಚಾರ ದಟ್ಟಣೆಯಿಂದ ರೈಲು ನಿಂತಿದೆ ಎಂಬುದು ಸುಳ್ಳು ಸುದ್ದಿಯಾಗಿದೆ. ರೇಕ್ ಪರಿಶೀಲನೆಗಾಗಿ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದರು. ಈ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರಿಗೆ ತೊಂದರೆ ಆಗಬಾರದೆಂದು ರೈಲ್ವೆ ಗೇಟ್ ಓಪನ್ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಅದರ ಬದಲಾಗಿ, ಟ್ರಾಫಿಕ್ ಜಾಮ್​ನಿಂದಾಗಿ ರೈಲು ನಿಂತಿರುವುದಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ವೈರಲ್ ಆಗಿತ್ತು ವಿಡಿಯೋ

‘ನಾನು ಅಥವಾ ನೀವು ಮಾತ್ರವಲ್ಲ, ಬೆಂಗಳೂರು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ರೈಲುಗಳಿಗೂ ಸಾಧ್ಯವಾಗುತ್ತಿಲ್ಲ’ ಎಂಬ ಶೀರ್ಷಿಕೆಯೊಂದಿಗೆ ರೈಲ್ವೆ ಕ್ರಾಸಿಂಗ್ ಬಳಿ ಸಂಚಾರ ದಟ್ಟಣ ಇರುವ ಮತ್ತು ರೈಲು ನಿಂತಿರುವ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮ ಇನ್​​ಸ್ಟಾಗ್ರಾಂನಲ್ಲಿ ಸುಧೀರ್‌ ಚಕ್ರವರ್ತಿ (sudhirchakravarthi4142) ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.

ಇದನ್ನೂ ಓದಿ: ಈ ಬೆಂಗ್ಳೂರು ಟ್ರಾಫಿಕ್‌ ಜಾಮ್‌ನಿಂದ ಟ್ರೈನ್‌ಗೂ ಕೂಡಾ ತಪ್ಪಿಸಿಕೊಳ್ಳೋಕೆ ಆಗ್ಲಿಲ್ಲ ನೋಡಿ

ವೈರಲ್‌ ಆದ ಈ ವಿಡಿಯೋದಲ್ಲಿ ಕಾಣಿಸಿದ್ದು, ಮಾರತಹಳ್ಳಿ ಸಮೀಪದ ಮುನೇನಕೊಳಲು ರೈಲ್ವೆ ಕ್ರಾಸಿಂಗ್‌ ಬಳಿಯ ವಿಡಿಯೋ ಆಗಿತ್ತು. ಮೇಲ್ನೋಟಕ್ಕೆ ರೈಲ್ವೆ ಕ್ರಾಸಿಂಗ್​ನಲ್ಲಿ ಸಂಚಾರ ದಟ್ಟಣೆಯ ಕಾರಣ ರೈಲು ನಿಂತಿರುವಂತೆ ಕಾಣಿಸುತ್ತಿರುದು ನಿಜ. ಆದರೆ, ಅಸಲಿ ಸತ್ಯ ಈಗ ಬಯಲಾಗಿದೆ.

ವರದಿ: ಪ್ರದೀಪ್ ‘ಟಿವಿ9’

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್