ಇಕ್ಕಟ್ಟಾದ ರಸ್ತೆಯಲ್ಲಿ ಓವರ್ಟೇಕ್ ಮಾಡುವ ಪ್ರಯತ್ನದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಗುದ್ದಿದ ಅಂಬ್ಯುಲೆನ್ಸ್ ಡ್ರೈವರ್, ಯಾರಿಗೂ ಗಾಯಗಳಿಲ್ಲ
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಂಬ್ಯುಲೆನ್ಸ್ ಡ್ರೈವರ್ ಮದ್ಯಪಾನ ಮಾಡಿದ್ದ. ಸಾಮಾನ್ಯವಾಗಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸಿ ವಾಪಸ್ಸು ಹೋಗುವಾಗ ಡ್ರೈವರ್ಗಳಲ್ಲಿ ಸ್ವಲ್ಪ ಅಜಾಗರೂಕತೆ ಮನೆ ಮಡಿರುತ್ತದೆ.
ಈ ಬಗೆಯ ಅಂದರೆ ಅಂಬ್ಯುಲೆನ್ಸ್ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ ಎಸ್ ಆರ್ ಟಿ ಸಿ) ನಡುವೆ ಆಕ್ಸಿಡೆಂಟ್ಗಳು ಸಂಭವಿಸುವುದು ಅಪರೂಪ. ಅಲ್ಲದೆ ಈ ಅಪಘಾತ ನಗರ ಪ್ರಮುಖ ರಸ್ತೆಯೊಂದರಲ್ಲಿ ಆಗಿದೆ. ನಮಗೆ ಗೊತ್ತಿದೆ, ಕೆ ಎಸ್ ಆರ್ ಟಿ ಸಿ ನಗರದ ರಸ್ತೆಗಳಲ್ಲಿ ಜಾಸ್ತಿ ಓಡಾಡುವುದಿಲ್ಲ. ಸಿಟಿಯಿಂದ ಹೊರಬೀಳಬೇಕಾದರೆ ಮತ್ತು ಸಿಟಿಗೆ ಅಗಮಿಸಿ ಬಸ್ ಟರ್ಮಿನಲ್ ಸೇರುವ ಮೊದಲು ಮಾತ್ರ ಅವು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಂಬ್ಯುಲೆನ್ಸ್ ಗಳು ನಗರದ ರಸ್ತೆಗಳಲ್ಲೇ ಓಡಾಡೋದು. ಅಂಬ್ಯುಲೆನ್ಸ್ ಮತ್ತು ಬಿಎಮ್ ಟಿಸಿ ಬಸ್ ಮಧ್ಯೆ ಅಪಘಾತ ಸಂಭವಿಸುವ ಅವಕಾಶ ಜಾಸ್ತಿ ಇರುತ್ತದೆ. ಹಾಗಾಗೇ, ಅಂಬ್ಯುಲೆನ್ಸ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ನಡೆದಿರುವ ಸ್ವಲ್ಪ ಆಶ್ಚರ್ಯ ಹುಟ್ಟಿಸುತ್ತದೆ.
ಓಕೆ, ವಿಡಿಯೋನಲ್ಲಿ ನೀವು ಗಮನಿಸುತ್ತಿರುವ ಅಪಘಾತದ ಬಗ್ಗೆ ಮಾತಾಡೋಣ ಮಾರಾಯ್ರೇ. ಇದು ಗುರುವಾರ ರಾತ್ರಿ ಬೆಂಗಳೂರು ನಗರದ ಲ್ಯಾಂಡ್ ಮಾರ್ಕ್ ಲಾಲ್ಬಾಗ್ ಮುಖ್ಯದ್ವಾರದ ಬಳಿ ಸಂಭವಿಸಿದೆ. ಬಸ್ಸಿನ ಡ್ರೈವರ್ ಮತ್ತು ಅಂಬ್ಯುಲೆನ್ಸ್ ಡ್ರೈವರ್ ನಡುವೆ ವಾಗ್ವಾದ ನಡೆಯುತ್ತಿರುವುದು ನಿಮಗೆ ಕಾಣುತ್ತಿದೆ. ತಪ್ಪು ಯಾರದು ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಬಸ್ಸನ್ನು ಓವರ್ಟೇಕ್ ಮಾಡುವ ಭರದಲ್ಲಿ ಅಂಬ್ಯುಲೆನ್ಸ್ ಬಸ್ಸಿಗೆ ಗುದ್ದಿದ್ದಾನೆ. ಪುಣ್ಯಕ್ಕೆ ಅಂಬ್ಯುಲೆನ್ಸ್ನಲ್ಲಿ ರೋಗಿ, ಅಥವಾ ಗಾಯಾಳು ಇರಲಿಲ್ಲ.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಂಬ್ಯುಲೆನ್ಸ್ ಡ್ರೈವರ್ ಮದ್ಯಪಾನ ಮಾಡಿದ್ದ. ಸಾಮಾನ್ಯವಾಗಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸಿ ವಾಪಸ್ಸು ಹೋಗುವಾಗ ಡ್ರೈವರ್ಗಳಲ್ಲಿ ಸ್ವಲ್ಪ ಅಜಾಗರೂಕತೆ ಮನೆ ಮಡಿರುತ್ತದೆ. ಕೆಲವು ಸಲ ರೋಗಿ ಕುಟುಂಬದವರು ಭಕ್ಷೀಸು ಕೊಟ್ಟಿರುತ್ತಾರೆ. ಅಂಥ ಸಂದರ್ಭಗಳಲ್ಲಿ ಒಂದಷ್ಟು ಎಣ್ಣೆಯನ್ನು ಹೊಟ್ಟೆಗಿಳಿಸುವ ಡ್ರೈವರ್ ಗಳೂ ಇರೋದುಂಟು, ಎಲ್ಲರೂ ಹಾಗಂತಲ್ಲ. ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದರೆ ಅನಾಹುತಗಳು ಸಹಜ ತಾನೆ?
ಸಂಬಂಧಪಟ್ಟ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರ್ ಮಾಡಿಕೊಂಡು ಹೋಗಿರುವುದು ವಿಡಿಯೋನಲ್ಲಿ ಕಾಣಿಸುತ್ತದೆ. ಯಾರಿಗೂ ಗಾಯಗಳಾಗಿಲ್ಲ ಅನ್ನೋದೇ ಸಮಾಧಾನಕರ ಸಂಗತಿ.