‘ನಮ್ಮ ಸಿನಿಮಾಗೆ ಒಂದು ಸಾಂಗ್ ಬರೆದುಕೊಟ್ಟ ಡಾಲಿಗೆ ಥ್ಯಾಂಕ್ಸ್’: ಅಮೃತಾ ಅಯ್ಯಂಗಾರ್

Updated on: Feb 06, 2024 | 11:32 AM

‘ಅಬ್ಬಬ್ಬ’ ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇದನ್ನು ಬಿಡುಗಡೆ ಮಾಡಿದ್ದು ಡಾಲಿ ಧನಂಜಯ್. ಇಡೀ ತಂಡಕ್ಕೆ ಅವರು ಶುಭಕೋರಿದ್ದಾರೆ. ಈ ಚಿತ್ರಕ್ಕೆ ಅವರು ಒಂದು ಸಾಂಗ್ ಬರೆದುಕೊಟ್ಟಿದ್ದಾರೆ.

ಲಿಖಿತ್ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar) ನಟನೆಯ ‘ಅಬ್ಬಬ್ಬ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಇದನ್ನು ಬಿಡುಗಡೆ ಮಾಡಿದ್ದು ಡಾಲಿ ಧನಂಜಯ್ ಅವರು. ಇಡೀ ತಂಡಕ್ಕೆ ಧನಂಜಯ್ ಶುಭಕೋರಿದ್ದಾರೆ. ಈ ಸಿನಿಮಾಗೆ ಕೆಎಂ ಚೈತನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಅಮೃತಾ ಮಾತನಾಡಿದ್ದಾರೆ. ‘ಇದೊಂದು ಕಾಮಿಡಿ ಸಿನಿಮಾ. ಎಲ್ಲರೂ ಬಂದು ನೋಡಬೇಕು’ ಎಂದು ಕೋರಿದರು ಅಮೃತಾ. ಇದರ ಜೊತೆಗೆ ಅವರು ಡಾಲಿಗೆ ಧನ್ಯವಾದ ಹೇಳಿದ್ದಾರೆ. ಈ ಚಿತ್ರಕ್ಕೆ ಅವರು ಒಂದು ಸಾಂಗ್ ಬರೆದು ಕೊಟ್ಟಿದ್ದಾರೆ ಧನಂಜಯ್. ಈ ವಿಚಾರದಲ್ಲಿ ಅವರಿಗೆ ಖುಷಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More