‘ಅಬ್ಬಬ್ಬ’ ಸಿನಿಮಾ ಬಿಡುಗಡೆ ಖುಷಿಯಲ್ಲಿ ನಾಯಕಿ ಅಮೃತಾ ಐಯ್ಯಂಗಾರ್
Amrutha Iyengar: ಅಮೃತಾ ಐಯ್ಯಂಗಾರ್, ಲಿಖಿತ್ ಶೆಟ್ಟಿ ನಟಿಸಿ ‘ಆ ದಿನಗಳು’ ಖ್ಯಾತಿಯ ಚೈತನ್ಯ ನಿರ್ದೇಶಿಸಿರುವ ‘ಅಬ್ಬಬ್ಬ’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಬಗ್ಗೆ ಅಮೃತಾ ಐಯ್ಯಂಗಾರ್ ಹೀಗೆಂದಿದ್ದಾರೆ.
ನಟಿ ಅಮೃತಾ ಐಯ್ಯಂಗಾರ್ (amrutha iyengar), ನಟ ಲಿಖಿತ್ ಶೆಟ್ಟಿ ನಟಿಸಿ ಕೆಎಂ ಚೈತನ್ಯ ನಿರ್ದೇಶನ ಮಾಡಿರುವ ‘ಅಬ್ಬಬ್ಬ’ ಸಿನಿಮಾ ಇಂದು (ಫೆಬ್ರವರಿ 16) ಬಿಡುಗಡೆ ಆಗಿದೆ. ಹಾಸ್ಯಮಯ ಕತೆಯುಳ್ಳ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ನಾಯಕಿ ಬಾಯ್ಸ್ ಹಾಸ್ಟೆಲ್ಗೆ ಹೋಗಿ ಅಲ್ಲಿಂದ ಹೊರಬರಲಾಗದೆ ಪರದಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಮೊದಲ ದಿನ ತಮ್ಮದೇ ಸಿನಿಮಾ ನೋಡಿದ ನಟಿ ಅಮೃತಾ ಐಯ್ಯಂಗಾರ್ ಮಾತನಾಡಿ, ‘ಮಾಸ್ ಸಿನಿಮಾಗಳ ನಡುವೆ ಇದೊಂದು ರಿಫ್ರೆಶಿಂಗ್ ಸಿನಿಮಾ. ಮೊದಲ ದಿನ ಸಿನಿಮಾ ನೋಡಿದ ಜನ ನಗುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ನೋಡಿದ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಆ ದಿನಗಳು’ ಸಿನಿಮಾ ಮಾಡಿರುವ ಕೆಎಂ ಚೈತನ್ಯ ಇಂಥಹಾ ಸಿನಿಮಾವನ್ನೂ ತೆಗೆಯಬಲ್ಲರಾ ಎಂದು ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ನನಗೆ ನಟಿಸಲು ಹೆಚ್ಚು ಅವಕಾಶ ಇತ್ತು, ಅದನ್ನು ಸದುಪಯೋಗ ಪಡಿಸಿಕೊಂಡಿದ್ದೀನಿ ಎನಿಸುತ್ತಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ