Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಸರದಲ್ಲಿ ತಮ್ಮ ಶಾಸಕರೊಂದಿಗೆ ಸಭೆ ನಡೆಸುವ ಸ್ಥಿತಿ ಕುಮಾರಸ್ವಾಮಿಗೆ ಯಾಕೆ ನಿರ್ಮಾಣವಾಯಿತು?

ಅವಸರದಲ್ಲಿ ತಮ್ಮ ಶಾಸಕರೊಂದಿಗೆ ಸಭೆ ನಡೆಸುವ ಸ್ಥಿತಿ ಕುಮಾರಸ್ವಾಮಿಗೆ ಯಾಕೆ ನಿರ್ಮಾಣವಾಯಿತು?

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 16, 2024 | 6:17 PM

ಕುಪೇಂದ್ರ ರೆಡ್ಡಿ ರಾಜ್ಯಸಭೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಬಗ್ಗೆ ಮಾತಾಡಿದ ಕುಮಾರಸ್ವಾಮಿ, ಅವರು ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಥವಾ ಎನ್ ಡಿ ಎ ಒಕ್ಕೂಟದ ಒಮ್ಮತದ ಅಭ್ಯರ್ಥಿಯಾಗಿದ್ದಾರೆ, ಜೆಡಿಎಸ್ ಶಾಸಕರೆಲ್ಲ ಈಗಾಗಲೇ ಅವರಿಗೆ ಆತ್ಮಸಾಕ್ಷಿ ವೋಟು ನೀಡಿಬಿಟ್ಟಿದ್ದಾರೆ ಮತ್ತು ಮತದಾನ ನಡೆಯುವ ಸಂದರ್ಭದಲ್ಲೂ ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸುವಂತೆ ತಮ್ಮ ಎಲ್ಲ ಶಾಸಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಮುಖದಲ್ಲ ಇವತ್ತು ಎಂದಿನ ಕಳೆಯಿರಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಜೆಟ್ ಮಂಡನೆ ಮಾಡುವಾಗ ಜೆಡಿಸ್ ನಾಯಕನ ಮುಖದಲ್ಲಿ ಕಂಡ ಅನ್ಯಮನಸ್ಕತೆ ಅವರು ಲಂಚ್ ಅವರ್ ನಂತರ ತಮ್ಮ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕವೂ ಮುಂದುವರಿದಿತ್ತು. ಅದು ಸರಿ, ಇವತ್ಯಾಕೆ ಸಾರ್ ಅವಸವರದಲ್ಲಿ ಸಭೆ ನಡೆಸಿದ್ದು ಅಂತ ಕೇಳಿದಾಗ, ಸೋಮವಾರದಿಂದ ಪುನರಾರಂಭಗೊಳ್ಳುವ ವಿಧಾನ ಸಭಾ ಅಧಿವೇಶನದಲ್ಲಿ (Assembly session) ತಮ್ಮ ಶಾಸಕರ ನಡಾವಳಿ ಹೇಗಿರಬೇಕು ಮತ್ತು ರಾಜ್ಯ ಸಭಾ ಚುನಾವಣೆಯ ಬಗ್ಗೆ ಚರ್ಚೆ ಮಾಡಲು ಸಭೆ ಸೇರಿದ್ದೆವು ಎಂದು ಕುಮಾರಸ್ವಾಮಿ ಹೇಳಿದರು. ಕುಪೇಂದ್ರ ರೆಡ್ಡಿ ರಾಜ್ಯಸಭೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಬಗ್ಗೆ ಮಾತಾಡಿದ ಕುಮಾರಸ್ವಾಮಿ, ಅವರು ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಥವಾ ಎನ್ ಡಿ ಎ ಒಕ್ಕೂಟದ ಒಮ್ಮತದ ಅಭ್ಯರ್ಥಿಯಾಗಿದ್ದಾರೆ, ಜೆಡಿಎಸ್ ಶಾಸಕರೆಲ್ಲ ಈಗಾಗಲೇ ಅವರಿಗೆ ಆತ್ಮಸಾಕ್ಷಿ ವೋಟು ನೀಡಿಬಿಟ್ಟಿದ್ದಾರೆ ಮತ್ತು ಮತದಾನ ನಡೆಯುವ ಸಂದರ್ಭದಲ್ಲೂ ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸುವಂತೆ ತಮ್ಮ ಎಲ್ಲ ಶಾಸಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ