AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆ ಬಾರಿನಲ್ಲಿ ಕೊಚ್ಚೆಯಲ್ಲಿ ಕೂತಿದ್ದ ಡಾಲಿ, ಮೊದಲ ಭೇಟಿ ನೆನಪಿಸಿಕೊಂಡ ಅಮೃತಾ ಐಯ್ಯಂಗಾರ್

ಡಾಲಿ ಧನಂಜಯ್ ಅನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭ ನೆನಪಿಸಿಕೊಂಡಿದ್ದಾರೆ ನಟಿ ಅಮೃತಾ ಐಯ್ಯಂಗಾರ್. ಹಳೆಯ ಬಾರಿನಲ್ಲಿ, ಕೊಳತೆಯಲ್ಲಿ ಕೂತಿದ್ದ ಡಾಲಿ....

ಹಳೆ ಬಾರಿನಲ್ಲಿ ಕೊಚ್ಚೆಯಲ್ಲಿ ಕೂತಿದ್ದ ಡಾಲಿ, ಮೊದಲ ಭೇಟಿ ನೆನಪಿಸಿಕೊಂಡ ಅಮೃತಾ ಐಯ್ಯಂಗಾರ್
ಡಾಲಿ-ಅಮೃತಾ
Follow us
ಮಂಜುನಾಥ ಸಿ.
|

Updated on: Mar 30, 2023 | 8:52 PM

ಡಾಲಿ ಧನಂಜಯ್ (Daali Dhananjay) ನಟನೆಯ ಹೊಯ್ಸಳ (Hoysala) ಸಿನಿಮಾ ಇಂದಷ್ಟೆ (ಮಾರ್ಚ್ 30) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿಯಾಗಿ ನಟಿಸಿದ್ದು, ಡಾಲಿ ಹಾಗೂ ಅಮೃತಾ ಅವರಿಗೆ ಇದು ಮೂರನೇ ಸಿನಿಮಾ. ಈ ಜೋಡಿಯನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿದ್ದಾರೆ. ತೆರೆಯ ಮೇಲೆ ಒಳ್ಳೆಯ ಕೆಮಿಸ್ಟ್ರಿ ಹೊಂದಿರುವ ಡಾಲಿ ಹಾಗೂ ಅಮೃತಾ ನಿಜ ಜೀವನದಲ್ಲಿಯೂ ಒಳ್ಳೆಯ ಗೆಳೆಯರು. ಹೊಯ್ಸಳ ಸಿನಿಮಾದ ಪ್ರಚಾರಕ್ಕೆ ನೀಡಿದ ಸಂದರ್ಶನದಲ್ಲಿ ಅಮೃತಾ ಐಯ್ಯಂಗಾರ್ ಮೊದಲ ಬಾರಿ ಡಾಲಿ ಧನಂಜಯ್ ಅವರನ್ನು ಭೇಟಿಯಾದ ಸಂದರ್ಭ ನೆನಪಿಸಿಕೊಂಡಿದ್ದಾರೆ. ಡಾಲಿಯನ್ನು ತಾವು ಒಂದು ಹಳೆಯ ಬಾರಿನಲ್ಲಿ ಭೇಟಿಯಾಗಿದ್ದಾಗಿ ಹೇಳಿದ್ದಾರೆ!

ಅದಾಗಲೇ ಲವ್ ಮಾಕ್ಟೆಲ್ ಸೇರಿದಂತೆ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಅಮೃತಾ ಐಯ್ಯಂಗಾರ್ ಮೊದಲ ಬಾರಿಗೆ ಡಾಲಿ ಜೊತೆ ನಟಿಸಿದ್ದು ಪಾಪ್​ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ. ಆ ಸಿನಿಮಾದ ಸೆಟ್​ನಲ್ಲಿಯೇ ಅಂತೆ ಮೊದಲು ಅಮೃತಾ, ಡಾಲಿಯವರನ್ನು ಭೇಟಿಯಾಗಿದ್ದು. ”ಅದೊಂದು ಬಹಳ ಹಳೆಯ ಬಾರು, ಅದರ ಒಳಕ್ಕೆ ನನ್ನನ್ನು ಸೂರಿ ಅವರು ಕರೆದುಕೊಂಡು ಹೋದರು. ಅಲ್ಲಿ ಕೊಳಚೆ ಮಧ್ಯೆ, ರಕ್ತ ಮೆತ್ತಿಕೊಂಡು ಡಾಲಿ ಕೂತಿದ್ದರು. ನನಗೆ ನೋಡಿದಾಗ ಇವರೇನಾ ಧನಂಜಯ್ ಎಂದು ಆಶ್ಚರ್ಯವಾಯಿತು. ಆದರೆ ಅಂದು ಭಯಾನಕವಾಗಿ ಡಾಲಿ ಕಾಣುತ್ತಿದ್ದರು. ಕೈ ಕೊಡಲು ಸಹ ನನಗೆ ಭಯವಾಗಿತ್ತು” ಎಂದು ಅಮೃತಾ ಐಯ್ಯಂಗಾರ್ ನೆನಪಿಸಿಕೊಂಡಿದ್ದಾರೆ.

ಆದರೆ ತಾವು ಸದಾ ಡಾಲಿಯ ಅಭಿಮಾನಿ ಎಂದಿರುವ ಅಮೃತಾ, ಅವರನ್ನು ಭೇಟಿಯಾಗುವ ಮುಂಚೆಯೂ ನಾನು ಅವರ ಅಭಿಮಾನಿ ಆಗಿದ್ದೆ. ಈಗಲೂ ನಾನು ಅವರ ಅಭಿಮಾನಿಯೇ. ಅವರೊಟ್ಟಿಗೆ ಹಲವು ನಟಿಯರು ಹೇಳುತ್ತಿರುತ್ತಾರೆ, ಡಾಲಿ ಬಹಳ ಬೆಂಬಲಿಸುತ್ತಾರೆ, ಚೆನ್ನಾಗಿ ಮಾತನಾಡುತ್ತಾರೆ, ನಟಿಸಲು ಸ್ಪೂರ್ತಿ ತುಂಬುತ್ತಾರೆ ಎಂದೆಲ್ಲ. ನಾನು ಮೂರನೇ ಬಾರಿ ಅವರೊಟ್ಟಿಗೆ ನಟಿಸುತ್ತಿದ್ದೇನೆ ಎಂಬುದು ನನಗೆ ಖುಷಿ ಎಂದಿದ್ದಾರೆ ಅಮೃತಾ.

ಇದನ್ನೂ ಓದಿ: Hoysala Review: ಹೆಚ್ಚಿಗೆ ಸುತ್ತಾಡಿದರೂ ಮೆಚ್ಚುಗೆ ಗಳಿಸುವ ಹೊಯ್ಸಳ; ಆ್ಯಕ್ಷನ್​ ಜೊತೆ ಜಾತಿ, ಪ್ರೀತಿ, ನೀತಿ ಇತ್ಯಾದಿ..

ನಟ ಡಾಲಿ ಸಹ ಅದೇ ಸಂದರ್ಶನದಲ್ಲಿ, ಅಮೃತಾ ಅವರನ್ನು ಮೊದಲು ಭೇಟಿಯಾಗಿದ್ದು ಆಗ ಅವರ ಮನದಲ್ಲಿ ಮೂಡಿದ ವಿಷಯ ಹೇಳಿಕೊಂಡಿದ್ದು, ಅಮೃತಾ ಅವರನ್ನು ಪಾಪ್​ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಭೇಟಿಯಾದೆ. ಮೊದಲು ಭೇಟಿಯಾದಾಗ ಅವರು ಗರ್ಭಿಣಿಯ ವೇಷ ತೊಟ್ಟಿದ್ದರು. ಆದರೆ ಮೊದಲ ಬಾರಿಗೆ ಅವರೊಟ್ಟಿಗೆ ಕೆಲಸ ಮಾಡಿದಾಗಲೇ ಈ ಹುಡುಗಿಯಲ್ಲಿ ಟ್ಯಾಲೆಂಟ್ ಇದೆ, ಇವರಲ್ಲಿ ಹಠ ಇದೆ ಎನಿಸಿತ್ತು. ಅದ್ಭುತವಾಗಿ ನಟಿಸುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದಿದ್ದಾರೆ.

ಧನಂಜಯ್ ಹಾಗೂ ಅಮೃತಾ, ಪಾಪ್​ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಹಾಗೂ ಇದೀಗ ಹೊಯ್ಸಳ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮೊದಲೆರಡು ಸಿನಿಮಾಗಳಲ್ಲಿ ಗರ್ಲ್​ಫ್ರೆಂಡ್ ಆಗಿ ನಟಿಸಿದ್ದ ಡಾಲಿ-ಅಮೃತಾ ಈ ಸಿನಿಮಾದಲ್ಲಿ ದಂಪತಿಯಾಗಿ ನಟಿಸಿದ್ದಾರೆ. ಹೊಯ್ಸಳ ಸಿನಿಮಾವು ಮಾರ್ಚ್ 30 ರಂದು ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಗುಲ್ಟು ನವೀನ್ ವಿಲನ್ ಆಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಕೆಜಿಎಫ್ ಖ್ಯಾತಿಯ ಆಂಡ್ರೊ, ನಾಗಭೂಷಣ್ ಇನ್ನೂ ಹಲವು ನಟರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ