‘ಮುದ್ದು ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ’ ಎಂದ ರಮ್ಯಾ ವಿರುದ್ಧ ಅಸಮಾಧಾನ
ಹಲವು ವರ್ಷಗಳ ಬಳಿಕ ‘ವೀಕೆಂಡ್ ವಿತ್ ರಮೇಶ್’ ಹೊಸ ಸೀಸನ್ ಆರಂಭ ಆಗಿದ್ದಕ್ಕೆ ವೀಕ್ಷಕರಿಗೆ ಖುಷಿ ಇತ್ತು. ಆದರೆ, ರಮ್ಯಾ ಅವರು ಕನ್ನಡದಲ್ಲಿ ಮಾತನಾಡದೆ ಇಂಗ್ಲಿಷ್ನಲ್ಲಿ ಮಾತನಾಡಿದ್ದು ಅನೇಕರಿಗೆ ಬೇಸರ ಮೂಡಿಸಿತ್ತು.
ನಟಿ ರಮ್ಯಾ ಅವರು ದೊಡ್ಡ ಬ್ರೇಕ್ನ ಬಳಿಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ (Uttarakaanda Movie) ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ಕಿರುತೆರೆ ಶೋ ‘ವೀಕೆಂಡ್ ವಿತ್ ರಮೇಶ್’ಗೆ ಅಥಿತಿಯಾಗಿ ಬಂದಿದ್ದರು. ಈ ಶೋನಲ್ಲಿ ಅವರು ಮಾತನಾಡಿದ್ದು ಬಹುತೇಕ ಇಂಗ್ಲಿಷ್ನಲ್ಲೇ ಆಗಿತ್ತು. ಇದರಿಂದ ಅವರು ಟೀಕೆಗೆ ಒಳಗಾದರು. ಅನೇಕರು ರಮ್ಯಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ವಿಚಾರದಲ್ಲಿ ರಮ್ಯಾ (Ramya) ಇಷ್ಟು ದಿನ ಮೌನವಹಿಸಿದ್ದರು. ಈಗ ಅವರು ತಿರುಗೇಟು ನೀಡಿದ್ದಾರೆ. ತಾವು ಇಂಗ್ಲಿಷ್ ಮಾತನಾಡಿದ್ದು ಏಕೆ? ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹಲವು ವರ್ಷಗಳ ಬಳಿಕ ‘ವೀಕೆಂಡ್ ವಿತ್ ರಮೇಶ್’ ಹೊಸ ಸೀಸನ್ ಆರಂಭ ಆಗಿದ್ದಕ್ಕೆ ವೀಕ್ಷಕರಿಗೆ ಖುಷಿ ಇತ್ತು. ಆದರೆ, ರಮ್ಯಾ ಅವರು ಕನ್ನಡದಲ್ಲಿ ಮಾತನಾಡದೆ ಇಂಗ್ಲಿಷ್ನಲ್ಲಿ ಮಾತನಾಡಿದ್ದು ಅನೇಕರಿಗೆ ಬೇಸರ ಮೂಡಿಸಿತ್ತು. ಈ ವಿಚಾರದಲ್ಲಿ ರಮ್ಯಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೀಮ್ ಒಂದಕ್ಕೆ ರಮ್ಯಾ ಅವರು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವ ಎಲ್ಲರಿಗೂ ತಿರುಗೇಟು ನೀಡಿದ್ದಾರೆ. ‘ಶೋನ ಹೆಸರು ವೀಕೆಂಡ್ ವಿತ್ ರಮೇಶ್. ಶೋಗೆ ಬಂದ ಅತಿಥಿಗಳು ಕನ್ನಡದವರು ಆಗಿರಲಿಲ್ಲ. ಮುದ್ದು ಅಜ್ಜಿಯರಿಗಾಗಿ ಮುಂದಿನ ಶೋನಲ್ಲಿ ಕನ್ನಡ ಮಾತಾಡ್ತೀನಿ’ ಎಂದು ರಮ್ಯಾ ಹೇಳಿದ್ದಾರೆ.
View this post on Instagram
ಇದನ್ನೂ ಓದಿ: ನನ್ನದು ಸಾರ್ಥಕ ಜೀವನ, ಆದರೂ…: ರಾಜಕೀಯ, ಸಿನಿಮಾ ಹಾಗೂ ಭವಿಷ್ಯದ ಬಗ್ಗೆ ರಮ್ಯಾ ಮಾತು
ಸದ್ಯ ರಮ್ಯಾ ಕಮೆಂಟ್ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ‘ಇದು ಕೇವಲ ಶೋ. ಇದನ್ನು ಶೋ ರೀತಿಯಲ್ಲೇ ನೋಡಿ. ಇಂಗ್ಲಿಷ್ನಲ್ಲಿ ಮಾತಾನಾಡಿದರು ಎಂದ ಮಾತ್ರಕ್ಕೆ ಅವರ ವಿರುದ್ಧ ದ್ವೇಷ ಕಾರೋದು ಸರಿ ಅಲ್ಲ’ ಎಂದು ಹೇಳಿದ್ದಾರೆ. ಇನ್ನೂ ಕೆಲವರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ. ‘ತಪ್ಪಿದ್ದಾಗ ಒಪ್ಪಿಕೊಳ್ಳಿ. ಅದರ ಬದಲು ಈ ರೀತಿ ಹೇಳೋದು ಸರಿ ಅಲ್ಲ’ ಎಂದಿದ್ದಾರೆ. ಇನ್ನೂ ಕೆಲವರು ‘ನೀವು ಕನ್ನಡ ಮಾತನಾಡುವವರೆಗೆ ಆ ಅಜ್ಜಿಯಂದಿರು ಇರಬೇಕಲ್ಲ’ ಎಂದು ಟೀಕೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ