Loading video

ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯತ್ತಿದ್ದ ಕೆಡಿಪಿ ಸಭೆಯಿಂದ ಕೋಪ ಕಾರುತ್ತಾ ಹೊರನಡೆದ ಬಿಜೆಪಿ ಶಾಸಕ ಸುರೇಶ್ ಗೌಡ

|

Updated on: Feb 24, 2025 | 1:51 PM

ಮೂರು ತಿಂಗಳಿಗೊಮ್ಮೆ ನಡೆಸಬೇಕಿರುವ ಸಭೆಯನ್ನು ಆರು ತಿಂಗಳ ನಂತರ ನಡೆಸುತ್ತಿರುವಿರೆಂದು ಸುರೇಶ್ ಗೌಡ ಅತೃಪ್ತಿ ವ್ಯಕ್ತಪಡಿಸಿದ್ದು ಸಹ ವರದಿಯಾಗಿದೆ. ಅಸಲು ವಿಷಯವೇನೆಂದರೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ, ಸುರೇಶ್ ಗೌಡ ಪತ್ರಿಕಾ ಗೋಷ್ಠಿಗಳಲೆಲ್ಲ ಅನುದಾನ ಸಿಗದಿರುವ ವಿಷಯವನ್ನು ಹೇಳುತ್ತಿದ್ದರರೂ ಸರ್ಕಾರ ಕ್ಯಾರೆ ಅಂದಿಲ್ಲ.

ತುಮಕೂರು: ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಇಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಿಂದ ಹೊರನಡೆದು ತಮ್ಮ ಅಸಮಾಧಾನ ಹೊರಹಾಕಿದರು. ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಅವರು ಹೇಮಾವತಿ ನದಿ ನೀರಿನ ವಿಷಯ ಪ್ರಸ್ತಾಪಿಸಿದ್ದರು. ಆದರೆ ಚರ್ಚೆ ಗ್ಯಾರಂಟಿ ಯೋಜನೆಗಳ ಮೇಲೆ ಹೆಚ್ಚು ಕೇಂದ್ರೀಕೃತಗೊಂಡಿದ್ದರಿಂದ ಅವರು ಕೋಪಗೊಂಡು ಸಭೆಯಿಂದ ಹೊರನಡೆದರು. ಕೂತ್ಕೊಳ್ಳಿ ಅಂತ ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್ ಹೇಳುತ್ತಿದ್ದರೂ ಸುರೇಶ್ ಗೌಡ ದುರುದುರುಮ ಅಂತ ಹೊರನಡೆದು ಹೋದರು. ಅವರ ಮತ್ತು ಸಹಕಾರ ಸಚಿವ ಕೆಎನ್ ರಾಜಣ್ಣ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಕೂಡ ನಡೆಯುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯಾಧ್ಯಕ್ಷನಾಗುವ ಆಸೆ ನನಗಿಲ್ಲ, ಬಸನಗೌಡ ಯತ್ನಾಳ್​ಗೆ ಪಟ್ಟ ಕಟ್ಟಿದರೆ ತಕರಾರಿಲ್ಲ: ಸುರೇಶ್ ಗೌಡ, ಬಿಜೆಪಿ ಶಾಸಕ