ತಮ್ಮನ ಭಾವಚಿತ್ರಕ್ಕೆ ಪೂಜೆ ಮಾಡಲು ಮೊದಲು ನಿರಾಕರಿಸಿ ಆಮೇಲೆ ಒಪ್ಪಿಕೊಂಡರು ದುಃಖತಪ್ತ ಹರ್ಷ
ಕಿರಿಯ ಸಹೋದರನನ್ನು ಕಳೆದುಕೊಂಡು ಅಪಾರ ದುಃಖದಲ್ಲಿರುವ ಹರ್ಷ ತಮ್ಮನ ಭಾವಚಿತ್ರಕ್ಕೆ ಪೂಜೆ ಮಾಡಲು ನಿರಾಕರಿಸಿದರು. ಅವರು ಮತ್ತು ತಂದೆತಾಯಿಗಳು ಅನುಭವಿಸುತ್ತಿರುವ ನೋವು ಸಂಕಟ ಸಾಮಾನ್ಯವಾದುದಲ್ಲ.
ಯುದ್ಧಗ್ರಸ್ಥ ಉಕ್ರೇನಲ್ಲಿ ಬಲಿಯಾದ ಕನ್ನಡದ ಹುಡುಗ ನವೀನ್ ಶೇಖರಪ್ಪ (Naveen Shekharappa) ಅವರ ಪಾರ್ಥೀವ ಶರೀರ ಇನ್ನೂ ಭಾರತಕ್ಕೆ ಬಂದಿಲ್ಲ. ಅಸಲಿಗೆ ಅಲ್ಲಿರುವ ಭಾರತೀಯ ರಾಯಭರಿ ಕಚೇರಿ (Indian Embassy) ಸಿಬ್ಬಂದಿಗೆ ದೇಹ ಎಲ್ಲಿದೆ ಅಂತ ಕಂಡುಕೊಳ್ಳುವುದು ಇದುವರೆಗೆ ಸಾಧ್ಯವಾಗಿಲ್ಲ. ಇತ್ತ ಹಾವೇರಿ ಜಿಲ್ಲೆ ಚಳಗೇರಿಯ (Chalageri) ನವೀನ್ ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಅವರ ತಂದೆ-ತಾಯಿ, ಅಣ್ಣ ಮತ್ತು ಕುಟುಂಬದ ಆಪ್ತರು ಕಳೇಬರದ ಆಗಮನಕ್ಕಾಗಿ ಕಾಯುತ್ತಿದ್ದಾರೆ. ನವೀನ್ ಸಾವಿನ ಮೂರನೇ ದಿನವಾಗಿದ್ದ ಗುರುವಾರ ಶೇಖರಪ್ಪನವರ ಕುಟಂಬ ಮೃತರ ಪೋಟೋಗೆ ಪೂಜೆ ಸಲ್ಲಿಸಿದರು. ಪೂಜೆ ಮಾಡುವಾಗ ಒಂದು ಮನಕಲಕುವ ಸನ್ನಿವೇಶ ಅಲ್ಲಿ ಸೃಷ್ಟಿಯಾಗುತ್ತದೆ.
ಕಿರಿಯ ಸಹೋದರನನ್ನು ಕಳೆದುಕೊಂಡು ಅಪಾರ ದುಃಖದಲ್ಲಿರುವ ಹರ್ಷ ತಮ್ಮನ ಭಾವಚಿತ್ರಕ್ಕೆ ಪೂಜೆ ಮಾಡಲು ನಿರಾಕರಿಸಿದರು. ಅವರು ಮತ್ತು ತಂದೆತಾಯಿಗಳು ಅನುಭವಿಸುತ್ತಿರುವ ನೋವು ಸಂಕಟ ಸಾಮಾನ್ಯವಾದುದಲ್ಲ. ನವೀನ್ ಸಾವಿನ ಆಘಾತದಿಂದ ಚೇತರಿಸಿಕೊಂಡಿರದ ಹರ್ಷನಿಗೆ ಪೂಜೆ ಮಾಡುವುದು ಅಸಾಧ್ಯವೆನಿಸಿದೆ. ಹಾಗಾಗೇ ಅವರು ತಮ್ಮನ ಭಾವಚಿತ್ರಕ್ಕೆ ನಮಸ್ಕರಿಸಿ ಹಿಂದೆ ಸರಿಯುತ್ತಾರೆ.
ನೆರೆದಿರುವ ಜನ ಹರ್ಷನ ನೋವನ್ನು ಅರ್ಥಮಾಡಿಕೊಂಡು ಪೂಜೆ ಮಾಡುವಂತೆ ಮನವೊಲಿಸುತ್ತಾರೆ. ತಂದೆತಾಯಿಗಳು ಸಹ ಅವರನ್ನು ಒತ್ತಾಯಿಸುತ್ತಾರೆ. ಎಲ್ಲರೂ ಭಾವುಕರಾಗಿದ್ದಾರೆ. ಅವರ ಒತ್ತಡಕ್ಕೆ ಮಣಿವ ಹರ್ಷ ಅವರು ಒಲ್ಲದ ಮನಸ್ಸಿನಿಂದ, ಅಳುತ್ತಲೇ ಪೂಜೆ ಮಾಡುತ್ತಾರೆ.
ಇದನ್ನೂ ಓದಿ: ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮಾತುಕತೆ