ಅನಂತಕುಮಾರ ಹೆಗಡೆ ನಾಲ್ಕು ವರ್ಷ ನಾಪತ್ತೆಯಾಗಿ ಕ್ಷೇತ್ರದ ಮತದಾರನಿಗೆ ದ್ರೋಹವೆಸಗಿದ್ದಾರೆ: ಮಧು ಬಂಗಾರಪ್ಪ, ಸಚಿವ

ಅನಂತಕುಮಾರ ಹೆಗಡೆ ನಾಲ್ಕು ವರ್ಷ ನಾಪತ್ತೆಯಾಗಿ ಕ್ಷೇತ್ರದ ಮತದಾರನಿಗೆ ದ್ರೋಹವೆಸಗಿದ್ದಾರೆ: ಮಧು ಬಂಗಾರಪ್ಪ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 20, 2024 | 1:32 PM

ಬಿಜೆಪಿ ವರಿಷ್ಠರು ಹೆಗಡೆಯವರಿಗೇ ಟಿಕೆಟ್ ಕೊಡಲಿ ಅಂತ ನಾವು ಆಶಿಸುತ್ತೇವೆ, ಈ ಬಾರಿ ಅವರ ಕ್ಷೇತ್ರದಲ್ಲೇ ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಹೇಳುತ್ತೇವೆ ಎಂದು ಬಂಗಾರಪ್ಪ ಹೇಳಿದರು. ಅವರ ವಿರುದ್ಧ ಕೇಸ್ ಹಾಕಲೇಬೇಕು ಎಂದು ಸಚಿವ ಒತ್ತಿ ಹೇಳಿದರು.

ಕಾರವಾರ: ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ (Anantkumar Hegde) ಒಬ್ಬ ಸಂಸ್ಕೃತಿಯಿಲ್ಲದ, ಮನುಷ್ಯತ್ವ ಇರದ ವ್ಯಕ್ತಿ, ಹುಚ್ಚರ ಸಹವಾಸ, ಅಂಥವರ ಬಗ್ಗೆ ಮಾತಾಡಲು ತನ್ನ ತಲೆ ಕೆಟ್ಟಿಲ್ಲ ಅಂತ ಹೇಳುತ್ತಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangrappa) 2-3 ನಿಮಿಷ ಮಾತಾಡಿದರು. ಕಳೆದ ನಾಲ್ಕು ವರ್ಷಗಳ ಕಾಲ ಅವರು ತನ್ನನ್ನು ಸಂಸತ್ತಿಗೆ ಆರಿಸಿ ಕಳಿಸಿದ ಮತದಾರರನ್ನು (voters) ಮರೆತು ಅವರಿಗೆ ದ್ರೋಹ ಬಗೆದಿದ್ದರು, ಈಗ ಚುನಾವಣೆ ಹತ್ತಿರ ಬಂದಿರುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನಂತಕುಮಾರ ಹೆಗಡೆ ಅವಮಾನ ಮಾಡಿದ್ದಾರೆ, ಎಲ್ಲ ಧರ್ಮ, ಜಾತಿ ಮತ್ತು ವರ್ಗದ ಜನ ಒಟ್ಟಾಗಿ ಬಾಳುವ ಅವಕಾಶ ಕಲ್ಪಿಸುವ ಡಾ ಬಿಅರ್ ಅಂಬೇಡ್ಕರ್ ಪರಿಕಲ್ಪನೆಯ ಪ್ರಜಾಪ್ರಭುತ್ವದ ಬಗ್ಗೆ ಅವರಿಗೆ ವಿರೋಧವಿದೆ. ಬಿಜೆಪಿ ವರಿಷ್ಠರು ಹೆಗಡೆಯವರಿಗೇ ಟಿಕೆಟ್ ಕೊಡಲಿ ಅಂತ ನಾವು ಆಶಿಸುತ್ತೇವೆ, ಈ ಬಾರಿ ಅವರ ಕ್ಷೇತ್ರದಲ್ಲೇ ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಹೇಳುತ್ತೇವೆ ಎಂದು ಬಂಗಾರಪ್ಪ ಹೇಳಿದರು. ಅವರ ವಿರುದ್ಧ ಕೇಸ್ ಹಾಕಲೇಬೇಕು ಎಂದು ಸಚಿವ ಒತ್ತಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ