ಪ್ರಕೃತಿಯ ಮಡಿಲಲ್ಲಿ ಅಕುಲ್ ಬಾಲಾಜಿ ಕನಸಿನ ಮನೆ; ಎಷ್ಟು ಸುಂದರವಾಗಿದೆ ನೋಡಿ

Updated on: Jul 07, 2026 | 8:35 AM

ಖ್ಯಾತ ನಿರೂಪಕ ಮತ್ತು ನಟ ಅಕುಲ್ ಬಾಲಾಜಿ ಅವರು ಪ್ರಕೃತಿಯ ಮಡಿಲಿನಲ್ಲಿ ತಮ್ಮ ಹೊಚ್ಚಹೊಸ ಕನಸಿನ ಮನೆಯನ್ನು ನಿರ್ಮಿಸಿದ್ದಾರೆ. ಈ ಸುಂದರವಾದ ಮನೆಯ ಗೃಹಪ್ರವೇಶದ ಝಲಕ್ ಒಳಗೊಂಡ ವಿಡಿಯೋವೊಂದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಕುಲ್ ಬಾಲಾಜಿ ತಮ್ಮ ಕನಸಿನ ಮನೆ ನಿರ್ಮಿಸಿದ್ದಾರೆ. ತಮ್ಮ ಹೊಸ ನಿವಾಸದ ವಿಡಿಯೋವನ್ನು ಹಂಚಿಕೊಂಡಿರುವ ಅಕುಲ್ ಬಾಲಾಜಿ, ಅತ್ಯಂತ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಪ್ರಕೃತಿಯ ಸೌಂದರ್ಯದ ನಡುವೆ ಇರುವ ಈ ಮನೆಗೆ ಅಭಿಮಾನಿಗಳಿಂದಲೂ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಪ್ರಕೃತಿಯ ಮಡಿಲಲ್ಲಿ ನಮ್ಮ ಪುಟ್ಟ, ಮುದ್ದಾದ ಮನೆ. ಮನಸ್ಸು ಮತ್ತೆ ಮತ್ತೆ ಮರಳಿಬರಲು ಬಯಸುವ ನೆಮ್ಮದಿಯ ತಾಣ’ ಎಂದು ಅಕುಲ್ ಬಾಲಾಜಿ ಬರೆದುಕೊಂಡಿದ್ದಾರೆ.

ಈ ಮನೆಯು ಹಸಿರು ಹಾಗೂ ಬೆಟ್ಟ-ಗುಡ್ಡಗಳ ಸುಂದರ ಪರಿಸರದ ನಡುವೆ ತಲೆಎತ್ತಿ ನಿಂತಿದೆ. ಅತ್ಯಾಧುನಿಕ ವಿನ್ಯಾಸದೊಂದಿಗೆ ನಿರ್ಮಾಣವಾಗಿದೆ. ಒಳಾಂಗಣ ವಿನ್ಯಾಸ ಕೂಡ ಅಷ್ಟೇ ಆಕರ್ಷಕವಾಗಿದ್ದು, ಪೂಜಾ ಕೋಣೆಯಲ್ಲಿ ಸಾಯಿಬಾಬಾ ಹಾಗೂ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More