AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag: ಉತ್ಖನನದ ವೇಳೆ ಲಕ್ಕುಂಡಿಯಲ್ಲಿ ಪತ್ತೆಯಾಯ್ತು ಪುರಾತನ ಶಿವಲಿಂಗ!

Gadag: ಉತ್ಖನನದ ವೇಳೆ ಲಕ್ಕುಂಡಿಯಲ್ಲಿ ಪತ್ತೆಯಾಯ್ತು ಪುರಾತನ ಶಿವಲಿಂಗ!

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Jan 18, 2026 | 1:09 PM

Share

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ ಪಕ್ಕದಲ್ಲಿ ಶಾಲೆಯ ಕಟ್ಟಡ ಕೆಡವುವಾಗ ಪುರಾತನ ಶಿವಲಿಂಗವೊಂದು ಪತ್ತೆಯಾಗಿದೆ. ಕೋಟೆ ಗೋಡೆಯಲ್ಲಿ ಕಂಡುಬಂದ ಈ ಲಿಂಗವನ್ನು ಗ್ರಾಮಸ್ಥರು ಮೊದಲು ಗುರುತಿಸಿದ್ದು, ಪುರಾತತ್ವ ಇಲಾಖೆ ಇದರ ಕಾಲಮಾನವನ್ನು ನಿರ್ಧರಿಸಲು ಪರಿಶೀಲನೆ ನಡೆಸುತ್ತಿದೆ. ಇದು ರಾಜ ಮಹಾರಾಜರ ಕಾಲದ್ದಾಗಿರಬಹುದು ಎಂದು ಸ್ಥಳೀಯರು ನಂಬಿದ್ದಾರೆ.

ಗದಗ, ಜನವರಿ 18: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ಈ ಸಂದರ್ಭದಲ್ಲಿಯೇ ಲಕ್ಕುಂಡಿಯಲ್ಲಿನ ಕೋಟೆ ಗೋಡೆಯ ಪಕ್ಕದಲ್ಲಿದ್ದ ಶಾಲಾ ಕಟ್ಟಡವನ್ನು ಕೆಡವುವಾಗ ಅಲ್ಲಿ ಪುರಾತನ ಕಾಲದ ಶಿವಲಿಂಗವೊಂದು ಪತ್ತೆಯಾಗಿದೆ. ನಿಧಿ ಶೋಧದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಜಾಗಕ್ಕೆ ಸಮೀಪದಲ್ಲಿಯೇ ಈ ಲಿಂಗ ಕಂಡುಬಂದಿದೆ. ಸಂಪೂರ್ಣವಾಗಿ ಡೆಮಾಲಿಶ್ ಮಾಡಿದ ಶಾಲೆಯ ಗೋಡೆಯ ಭಾಗದಲ್ಲಿ ಗ್ರಾಮಸ್ಥರ ಕಣ್ಣಿಗೆ ಈ ಶಿವಲಿಂಗ ಮೊದಲು ಬಿದ್ದಿದೆ. ಈ ಲಿಂಗವು ಬಹಳ ಹಳೆಯ ಕಾಲದ್ದಾಗಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ಪುರಾತತ್ವ ಇಲಾಖೆಯು ಈ ಲಿಂಗದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಇದು ಯಾವ ಕಾಲಮಾನಕ್ಕೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟಪಡಿಸಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jan 18, 2026 01:07 PM