ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ

|

Updated on: Nov 20, 2024 | 9:26 PM

ಅನಂತಪುರ ಜಿಲ್ಲೆಯ ಉರವಕೊಂಡ ಪಟ್ಟಣದ ಸಾಯಿಬಾಬಾ ದೇವಸ್ಥಾನಕ್ಕೆ ಕಳ್ಳನೊಬ್ಬ ಭಕ್ತನಂತೆ ಪ್ರವೇಶಿಸಿ ಅಲ್ಲಿದ್ದ ಸಾಯಿಬಾಬಾ ವಿಗ್ರಹ, ಬೆಳ್ಳಿಯ ಬಟ್ಟಲು, ಗಂಟೆಯನ್ನು ಕದ್ದುಕೊಂಡು, ಅವುಗಳನ್ನು ಬ್ಯಾಗ್​ನಲ್ಲಿ ತುಂಬಿಕೊಂಡು ಹೋಗಿದ್ದಾನೆ. ಈ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿರುವುದರಿಂದ ಆ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉರವಕೊಂಡ ಪಟ್ಟಣದಲ್ಲಿರುವ ಸಾಯಿಬಾಬಾ ದೇವಸ್ಥಾನಕ್ಕೆ ಕಳ್ಳನೊಬ್ಬ ಭಕ್ತನಂತೆ ಪ್ರವೇಶಿಸಿ ಅಲ್ಲಿದ್ದ ಸಾಯಿಬಾಬಾ ವಿಗ್ರಹ, ಬೆಳ್ಳಿಯ ಬಟ್ಟಲು, ಗಂಟೆಯನ್ನು ಕದ್ದುಕೊಂಡು, ಅವುಗಳನ್ನು ಬ್ಯಾಗ್​ನಲ್ಲಿ ತುಂಬಿಕೊಂಡು ಹೋಗಿದ್ದಾನೆ. ಈ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿರುವುದರಿಂದ ಆ ಕಳ್ಳ ಸಿಕ್ಕಿಬಿದ್ದಿದ್ದಾನೆ. ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಸಾಯಿ ಬಾಬಾರ ಮುಂದೆ ಕುಳಿತಿದ್ದ ಆತ ಭಕ್ತರು ಇಲ್ಲದ ಸಮಯಕ್ಕಾಗಿ ಕಾಯುತ್ತಿದ್ದ. ಯಾರೂ ಇಲ್ಲದಿದ್ದಾಗ ದೇವರೆದುರು ಕುಳಿತು ಸಾಯಿಬಾಬಾರ ಪಂಚಲೋಹದ ವಿಗ್ರಹ, ಬೆಳ್ಳಿಯ ಬಟ್ಟಲು ಹಾಗೂ ಗಂಟೆಯನ್ನು ಕದ್ದಿದ್ದಾನೆ.

ದೇವಸ್ಥಾನದಲ್ಲಿ ಕಳ್ಳತನವಾಗಿರುವ ಬಗ್ಗೆ ಅರ್ಚಕರಿಗೆ ತಿಳಿದು ದೇವಸ್ಥಾನದ ಟ್ರಸ್ಟಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ದೇವಸ್ಥಾನದ ಧರ್ಮಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಗ್ರಹ, ಬೆಳ್ಳಿ ಪಾತ್ರೆ, ದೇವಸ್ಥಾನದ ಗಂಟೆಗಳನ್ನು ಕದ್ದ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ