AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗ ಕೊಡಿಸಲು ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಉದ್ಯೋಗ ಕೊಡಿಸಲು ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Nov 20, 2024 | 10:58 PM

Share

ಉದ್ಯೋಗ ಕೊಡಿಸಲು ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಶಿವಾಜಿ ಚೌಕ್ ಬಳಿ‌ ನಡೆದಿದೆ.

ಕಾರವಾರ, (ನವೆಂಬರ್ 20): ಉದ್ಯೋಗ ಕೊಡಿಸಲು ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಿವಾಜಿ ಚೌಕ್ ಬಳಿ‌ ನಡೆದಿದೆ. ಓರ್ವ ಮುಸ್ಲಿಂ ಯುವತಿಯನ್ನು ಕೆಲಸ ಕೊಡಿಸಲು ಶಿರಸಿ ರೋಟರಿ ಆಸ್ಪತ್ರಗೆ ಕರೆದುಕೊಂಡು ಬಂದಿದ್ದ ಶಿರಸಿ ತಾಲೂಕಿನ ಕೊರ್ಲಕಟ್ಟಾ ಗೌಡಕೊಪ್ಪದ ವೀರೇಂದ್ರ ಜೀನದತ್ತ ಜೈನ್ (21) ಮೇಲೆ ಶಕೀಲ್ ಅಹ್ಮದ್ (24), ಮಹಮ್ಮದ್ ಮಾಜ್ (26) ಹಾಗೂ ಶಿರಸಿ ಗೋಲಗೇರಿ ಓಣಿಯ ಉಬೇದ್ ಸವಣೂರ್ (25) ಹಲ್ಲೆ ನಡೆಸಿದ್ದಾರೆ.

ಚನ್ನಾಪುರ ನಿವಾಸಿ ಉಸ್ಮಾ ಬಾನು ಹಾಗೂ ವೀರೇಂದ್ರ ಜಿನದತ್ತ ಜೈನ್ ಹತ್ತಿರದ ಊರಿನವರಾಗಿದ್ದರಿಂದ ಇಬ್ಬರ ಪರಿಚಯವಿತ್ತು. ಉಸ್ಮಾ ಬಾನು ಈ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿದ್ದು, ಬಳಿಕ ಬಿಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಆಕೆಗೆ ಉದ್ಯೋಗ ಕೊಡಿಸಲು ವೀರೇಂದ್ರ ಜಿನದತ್ತ ಜೈನ್, ತಾನು ಸೆಕ್ಯೂರಿಟಿ ಕೆಲಸ ಮಾಡ್ತಿದ್ದ ಆಸ್ಪತ್ರೆಗೆ ಇಂಟರ್‌ವ್ಯೂಗೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಶಿವಾಜಿ ಚೌಕ ಬಳಿ ಐಸ್ ಕ್ರೀಂ ಅಂಗಡಿಯಲ್ಲಿ ಐಸ್ ಕ್ರೀಂ ತಿನ್ನುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು, ಮುಸ್ಲಿಂ ಹುಡುಗಿಯನ್ನು ಪ್ರೀತಿ ಮಾಡುತ್ತೀಯಾ ಎಂದು ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ತುಳಿದು, ಕಲ್ಲಿನಿಂದ ಬೆನ್ನಿಗೆ ಹೊಡಿದಿದ್ದಾರೆ. ಈ ಸಂಬಂಧ ಸಂಬಂಧ ಶಿರಸಿ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

Follow Us
Suraj Mahaveer Utture
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More