AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.ಕೆ. ಶಿವಕುಮಾರ್​​ ಕೈ ಬಿಡದ ಆಂದ್ಲೆ ಶ್ರೀ ಜಗದೀಶ್ವರಿ: ಸತ್ಯವಾಯ್ತು ದೇವಿ ನೀಡಿದ್ದ ಶುಭ ಸೂಚನೆ!

ಡಿ.ಕೆ. ಶಿವಕುಮಾರ್​​ ಕೈ ಬಿಡದ ಆಂದ್ಲೆ ಶ್ರೀ ಜಗದೀಶ್ವರಿ: ಸತ್ಯವಾಯ್ತು ದೇವಿ ನೀಡಿದ್ದ ಶುಭ ಸೂಚನೆ!

ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: May 29, 2026 | 11:37 AM

Share

ಉತ್ತರ ಕನ್ನಡದ ಅಂಕೋಲಾದ ಆಂದ್ಲೆ ಜಗದೀಶ್ವರಿ ದೇವಾಲಯದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ದೇವಿಯು ಅವರ ಇಷ್ಟಾರ್ಥವನ್ನು ಈಡೇರಿಸುವ ಶುಭ ಸೂಚನೆ ನೀಡಿದ್ದು, ಅದರಂತೆ ಅರ್ಚಕರು ಪ್ರತಿದಿನ ಪೂಜೆ ಮುಂದುವರಿಸಿದ್ದರು. ಈ ಕುರಿತು ದೇವಸ್ಥಾನದ ಅರ್ಚಕ ಗಣೇಶ್ ನಾಯ್ಕ್ ಮಾಹಿತಿ ನೀಡಿದ್ದು, ದೇವಿಯ ಅನುಗ್ರಹದಿಂದ ಡಿ.ಕೆ. ಶಿವಕುಮಾರ್‌ಗೆ ಯಶಸ್ಸು ಖಚಿತ ಎಂದು ಅವರು ತಿಳಿಸಿದ್ದಾರೆ.

ಕಾರವಾರ, ಮೇ 29: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಈ ಹಿಂದೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್​​ ಭೇಟಿ ನೀಡಿದ್ದರು. ದೇವಿಯ ಅನುಗ್ರಹದಿಂದಲೇ ಅವರೀಗ ಕರ್ನಾಟಕದ ನೂತನ ಸಿಎಂ ಆಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಅರ್ಚಕ ಗಣೇಶ್ ನಾಯ್ಕ್, ಡಿಸೆಂಬರ್ ತಿಂಗಳಲ್ಲಿ ಡಿ‌.ಕೆ‌.ಶಿವಕುಮಾರ್ ದೇಗುಲಕ್ಕೆ ಬಂದಿದ್ದರು. ಅಂದು ಅವರು ಕೇಳಿದ್ದಕ್ಕೆ ದೇವಿ ಒಳ್ಳೆಯ ಸೂಚನೆ ಕೊಟ್ಟಿದ್ದಳು. ಎರಡು ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಮುನ್ಸೂಚನೆಯೂ ಅವರಿಗೆ ಹೈಕಮಾಂಡ್​​​​​ನಿಂದ ಸಿಕ್ಕಿತ್ತು. ನಿತ್ಯ ಬೆಳಗ್ಗೆ ಪೂಜೆ ಸಲ್ಲಿಸುವಂತೆ ಅವರ ಕಡೆಯವರು ತಿಳಿಸಿದ್ದು, ತಾಯಿ ಪ್ರಸಾದ ಕೊಡುತ್ತಿರುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಇಲ್ಲಿ ತಾಯಿ ಪ್ರಸಾದ ಕೊಟ್ಟ ಪ್ರಕಾರವೇ ಅವರಿಗೆ ಅಲ್ಲಿ ಆಗುತ್ತಿತ್ತು. ಸಿಎಂ ಆಗುವವರೆಗೆ ನಿತ್ಯ ಸಂಕಲ್ಪ ಮಾಡಲು ತೀರ್ಮಾನಿಸಲಾಗಿದ್ದು, ಸಿಎಂ ಆದ ಬಳಿಕವೂ ದೇವಿಯ ಅನುಗ್ರಹ ಅವರಿಗೆ ಇರುತ್ತೆ. ಡಿ.ಕೆ.ಶಿವಕುಮಾರ್ ಹೆಸರಲ್ಲಿ 2 ತಿಂಗಳಿನಿಂದ ಸಂಕಲ್ಪ ಮಾಡಲಾಗ್ತಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Suraj Mahaveer Utture
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More