ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ಲವರ್ ಗೋಸ್ಕರ ಮೂರು ಮಕ್ಕಳ ಸೇರಿದಂತೆ ಗಂಡನನ್ನು ಬಿಟ್ಟು ಹೆಂಡತಿ ಓಡಿ ಹೋಗಿರುವಂತಹ ಘಟನೆ ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ. ಸದ್ಯ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನನಗೆ ಹೆಂಡತಿ ಬೇಕೆಂದು ಪತಿ ಕಣ್ಣೀರು ಹಾಕಿದ್ದಾರೆ. ವಿಡಿಯೋ ನೋಡಿ.
ಆನೇಕಲ್, ಸೆಪ್ಟೆಂಬರ್ 05: ಮದುವೆ ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದ ಘಟ್ಟ. ದಾಂಪತ್ಯ ಎನ್ನುವುದು ಏಳೇಳು ಜನ್ಮದ ಬಂಧ. ನೀ ನನಗೆ, ನಾ ನಿನಗೆ ಎಂದು ಸುಖ-ದುಃಖದಲ್ಲಿ ಒಂದಾಗುವ ಕ್ಷಣ. ಆದರೆ ಇದು ಎಲ್ಲರ ಜೀವನದಲ್ಲಿ ಹೀಗೆಯೇ ಇರುತ್ತದೆ ಎಂದು ಹೇಳಲಾಗದು. ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಜೀವನಪೂರ್ತಿ ಜೊತೆಗಿರುತ್ತೇನೆ ಎಂದು ಬಂದವಳು ಲವರ್ ಗೋಸ್ಕರ ಮೂರು ಮಕ್ಕಳು ಸೇರಿ ಗಂಡನನ್ನು ಬಿಟ್ಟು ಓಡಿ ಹೋಗಿರುವಂತಹ ಘಟನೆ ಬನ್ನೇರುಘಟ್ಟ (Bannerughatta) ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ. ನನಗೆ ಪ್ರಿಯಕರನೇ ಬೇಕೆಂದು ಓಡಿಹೋದ ಹೆಂಡತಿಗಾಗಿ ಗಂಡ ಕಣ್ಣೀರು ಹಾಕಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 05, 2025 11:35 AM
