ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ? ಅಕ್ರಮ ಸಂಬಂಧಕ್ಕೆ ಕೊಲೆಯಾದ ರಂಜಿತ್ ತಾಯಿ ಅಳಲು
ಆನೇಕಲ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣದಲ್ಲಿ, ಅಕ್ರಮ ಸಂಬಂಧದ ವಿಚಾರದಲ್ಲಿ ಭಾವನಿಂದ ಬಾಮೈದ ಹತ್ಯೆಗೀಡಾಗಿದ್ದಾನೆ. ಕೌಟುಂಬಿಕ ಕಲಹ, ಅಕ್ರಮ ಸಂಬಂಧ, ಮನೆಗೆ ಬೆಂಕಿ ಹಚ್ಚಿದ ಘಟನೆಗಳ ಬಳಿಕ ಈ ಕೊಲೆ ನಡೆದಿದೆ. ಹತ್ಯೆ ಮಾಡಿದ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇದೀಗ ಘಟನೆ ಬಗ್ಗೆ ಮೃತ ರಂಜಿತ್ ತಾಯಿ ಮಾತನಾಡಿದ್ದಾರೆ. ಅವರು ಹೇಳಿದ್ದೇನೆಂದು ನೋಡಿ.
ಆನೇಕಲ್, ಮಾರ್ಚ್ 27: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯಲ್ಲಿ ಭಾವನೇ ಬಾಮೈದನ ಕೊಲೆ ಮಾಡಿರುವ ಘಟನೆ ಸಂಬಂಧ ಇದೀಗ ಮೃತ ರಂಜಿತ್ ತಾಯಿ ಪ್ರತಿಕ್ರಿಯಿಸಿದ್ದಾರೆ. ಅಳಿಯ ಶ್ರೀನಿವಾಸನೇ ಮಗ ರಂಜಿತ್ನನ್ನು ಕೊಲೆ ಮಾಡಿದ್ದಾನೆ ಎಂದಿರುವ ಅವರು, ‘ನಮ್ಮ ಮಗ 24 ವರ್ಷದವನು, ಅವನಿಗೆ ಜ್ಞಾನ ಇರಲಿಲ್ಲ. ಆದರೆ ಆಕೆಗೆ (ಶ್ರೀನಿವಾಸ್ ತಂಗಿ) ಇಬ್ಬರು ಮಕ್ಕಳಿದ್ದರೂ ಆಕೆ ಆತನ ಹಿಂದೆ ಓಡಿಬಂದಳು. ಬುದ್ಧಿಹೇಳಿದರೂ ಕೇಳಲಿಲ್ಲ. ಅವರು ಅವರ ಹುಡುಗಿಯನ್ನು ಹುಷಾರಾಗಿ ಇಟ್ಟುಕೊಳ್ಳಬೇಕಿತ್ತು’ ಎಂದು ಅಳಲು ತೋಡಿಕೊಂಡಿದ್ದಾರೆ.
ರಂಜಿತ್ನ ಅಕ್ಕ ಪವಿತ್ರಾಳನ್ನು ಶ್ರೀನಿವಾಸ್ಗೆ ಮದುವೆ ಮಾಡಿಕೊಡಲಾಗಿತ್ತು. ಆ ಬಳಿಕ ಶ್ರೀನಿವಾಸ್ ತಂಗಿ ಕೋಮಲ್ ಜೊತೆಗೆ ರಂಜಿತ್ ಸಂಬಂಧ ಹೊಂದಿದ್ದ. ಕೋಮಲ್ ಬೇರೊಬ್ಬರೊಂದಿಗೆ ಮದುವೆಯಾಗಿ ಮಕ್ಕಳಿದ್ದರೂ, ಗಂಡನನ್ನು ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಅದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ.
ಪೂರ್ಣ ವಿವರಗಳಿಗೆ ಓದಿ: ಬಾಮೈದನೊಂದಿಗೆ ತಂಗಿ ಪರಾರಿ: ಕೋಪದಲ್ಲಿ ಬಾವ ಮಾಡಿದ್ದೇನು ಗೊತ್ತಾ?
