ದಾವಣಗೆರೆ ಆನೆಕೊಂಡ ಬಸವೇಶ್ವರ ಕಾರ್ಣೀಕ: ಭವಿಷ್ಯದ ಸಂಕಷ್ಟದ ಕುರಿತು ಎಚ್ಚರಿಕೆ ನುಡಿ!

Edited By:

Updated on: Sep 08, 2026 | 8:15 AM

ದಾವಣಗೆರೆ ನಗರದ ಐತಿಹಾಸಿಕ ಆನೆಕೊಂಡ ಬಸವೇಶ್ವರ ಸ್ವಾಮಿಯ ಕಾರ್ಣೀಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದಿದ್ದು, ಪೂಜಾರಿಯವರು ದೈವವಾಣಿ ನುಡಿದರು. "ಕೆಂಪಗೊಂದೀಹಾವಳಿ ಹೆಚ್ಚಾದೀತಲೇ ಎಚ್ಚರ" ಎಂಬ ಕಾರ್ಣೀಕವು ಬರುವ ದಿನಗಳಲ್ಲಿ ನಾಡಿಗೆ ದೊಡ್ಡ ಮಟ್ಟದ ಸಂಕಷ್ಟ ಹಾಗೂ ಆಪತ್ತು ಎದುರಾಗುವ ಸೂಚನೆಯಾಗಿದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ, ಸೆಪ್ಟೆಂಬರ್ 08: ನಗರದ ಐತಿಹಾಸಿಕ ಆನೆಕೊಂಡ ಬಸವೇಶ್ವರ ಸ್ವಾಮಿಯ ಕಾರ್ಣೀಕೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. “ರಾಮ ರಾಮ ಎಂದು ನುಡಿದೀತಲೇ, ಶೃಂಗಾರದ ವನಕೆ ಮುತ್ತೈದೆಯರು ಸರಗ ಹೊಡೆದಿತಲೇ, ನರಲೋಕದ ಜನತೆಗೆ ಆನೆ ಆಶೀರ್ವಾದ ಮಾಡಿತಲೇ, ಕೆಂಪಗೊಂದೀಹಾವಳಿ ಹೆಚ್ಚಾದೀತಲೇ ಎಚ್ಚರ” ಎಂದು ಪೂಜಾರಿಯವರು ಕಾರ್ಣೀಕ ನುಡಿದರು.

ಈ ದೈವವಾಣಿಯು ಮುಂಬರುವ ದಿನಗಳಲ್ಲಿ ನಾಡಿಗೆ ಹಾಗೂ ಜನತೆಗೆ ದೊಡ್ಡ ಮಟ್ಟದ ಸಂಕಷ್ಟ ಎದುರಾಗುವ ಸೂಚನೆಯಾಗಿದೆ ಎಂದು ಭಕ್ತರು ವಿಶ್ಲೇಷಿಸಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಾವಿರಾರು ಭಕ್ತರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More