ಬೀಡಾ ಅಂಗಡಿಯಲ್ಲಿ ಅಂಗನವಾಡಿ! ಇದು ಸೆಷನ್​​ನಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತುರ್ತು ಗಮನಕ್ಕೆ…

| Updated By: ಸಾಧು ಶ್ರೀನಾಥ್​

Updated on: Dec 13, 2023 | 12:54 PM

ಬೀಡಾ ಅಂಗಡಿಯಲ್ಲಿ ಅಂಗನವಾಡಿ! ಇದು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯ ಮುರಗೋಡ ಗ್ರಾಮದಲ್ಲಿನ ದು:ಸ್ಥಿತಿ. ಸೆಷನ್​​ನಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಏನು ಉತ್ತರ ಕೊಡ್ತಾರೋ ಕಾದು ನೋಡಬೇಕಿದೆ.

ಬೆಳಗಾವಿ, ಡಿಸೆಂಬರ್​​ 13: ಇದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲಿನ ದು:ಸ್ಥಿತಿ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ತವರು ಜಿಲ್ಲೆಯಲ್ಲಿಯೇ ಇದೆಂಥಾ ಅಧ್ವಾನ. ಸೂಕ್ತ ಕಟ್ಟಡವಿಲ್ಲದೆ ಬೀಡಾ ( Beeda) ಅಂಗಡಿಯಲ್ಲಿ ಅಂಗನವಾಡಿ (Anganwadi) ಶಾಲೆ ನಡೆಸುತ್ತಿದ್ದಾರೆ ಅಲ್ಲಿನ ಸಿಬ್ಬಂದಿ. ಮುಂದೆ ಚರಂಡಿ ನೀರು, ದೊಡ್ಡ ಗುಂಡಿ ಇದ್ದರೂ ಸಹ ಅಲ್ಲಿಯೇ ಮಕ್ಕಳ ಕಲಿಕೆ ಮುಂದುವರಿದಿದೆ. ಇದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ (Muragoda, Savadatti) ಗ್ರಾಮದ ಅಂಗನವಾಡಿ ಸಂಖ್ಯೆ 3ರ ಮಕ್ಕಳ ಪರಿಸ್ಥಿತಿ.

ಅಂಗನವಾಡಿ ಕಟ್ಟಡವಿಲ್ಲದೇ ಪಾನ್ ಬೀಡಾ ಅಂಗಡಿಯಲ್ಲಿ ಕುಳಿತಿದ್ದಾರೆ ಮಕ್ಕಳು. ಇದ್ದ ಕಟ್ಟಡ ಸಂಪೂರ್ಣವಾಗಿ ಹಾಳಾಗಿ ಹೋದರು ಇಲಾಖೆ ಅಧಿಕಾರಿಗಳು ಡೊಂಟ್ ಕೇರ್ ಅಂದಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕೇರ್ ಮಾಡದಷ್ಟು ಧಾರ್ಷ್ಟ್ಯ/ ದರ್ಪ ಅವರದ್ದು.

ಅನಿವಾರ್ಯವಾಗಿ ಬೀಡಾ ಅಂಗಡಿಯಲ್ಲೇ ಮಕ್ಕಳಿಗೆ ಕಲಿಕೆ ನಡೆದಿದೆ. ಜೀವ ಕೈಯಲ್ಲಿ ಹಿಡಿದು ಮಕ್ಕಳು ಅಂಗನವಾಡಿಗೆ ಹೋಗುವ ಸ್ಥಿತಿ ಎದುರಿಗೇ ಇದ್ದರೂ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅತ್ತ ಸೆಷನ್ ನಡೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಏನು ಉತ್ತರ ಕೊಡ್ತಾರೋ ಕಾದು ನೋಡಬೇಕಿದೆ.

ಈ ಮಧ್ಯೆ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದಿರುವ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಉತ್ರಿಸಿಇದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರಾಜ್ಯದಲ್ಲಿ ಸಾಧ್ಯವಾದಷ್ಟು ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. 4 ಸಾವಿರ ಸರ್ಕಾರಿ ನಿವೇಶನಗಳಿಗೆ ಅಂಗನವಾಡಿ ಹೆಸರು ಹಾಕಿಸಲಾಗಿದೆ. ನಿವೇಶನ ಸಿಕ್ಕ ತಕ್ಷಣ ಅಗತ್ಯವಿರುವ ಎಲ್ಲ ಕಡೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಸಾರ್ವಜನಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿರುವ ಸೈಟ್ ಗಳನ್ನು ಅಂಗನವಾಡಿ ಕಟ್ಟಡಕ್ಕೆ ಬಳಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಪಟೂರು ಶಾಸಕ ಕೆ. ಷಡಕ್ಷರಿ ಪ್ರಶ್ನೆಗೆ ಸಚಿವೆ ಹೆಬ್ಬಾಳ್ಕರ್ ಉತ್ತರ ನೀಡಿದರು.

Also Read: ಮೈಸೂರು ತಾಲೂಕಿನ ಬನ್ನಿಮಂಟಪದಲ್ಲಿ ಮುರಿದ ಗುಡಿಸಿಲಿನಲ್ಲಿದ್ದ ಅಂಗನವಾಡಿ ಬಗ್ಗೆ ಟಿವಿ9 ಬೆಳಕು ಚೆಲ್ಲಿದಾಗ ಅಂದು ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 am, Wed, 13 December 23

Follow us on