Viral Video: ಭತ್ತದ ಗದ್ದೆಯಿಂದ ಓಡಿಸಿದ ಜನರ ಮೇಲೆ ಕೋಪಗೊಂಡು ಅಟ್ಟಾಡಿಸಿದ ಕಾಡಾನೆ; ವಿಡಿಯೋ ವೈರಲ್

Edited By:

Updated on: Dec 01, 2022 | 9:59 AM

2 ದಿನಗಳ ಹಿಂದೆ ಗೋಲ್ಪಾರಾದಲ್ಲಿನ ಜನವಸತಿ ಪ್ರದೇಶದಿಂದ ಜನರು ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಿದಾಗ ಕಾಡಾನೆಯೊಂದು ಕೋಪಗೊಂಡು, ಜನರ ಮೇಲೆ ದಾಳಿ ಮಾಡಲು ಮುಂದಾಗಿದೆ.

ಅಸ್ಸಾಂನ (Assam) ಗೋಲ್ಪಾರಾ ಜಿಲ್ಲೆಯ ಬ್ರೋಗ್ಜುಲಿ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಊರಿನೊಳಗೆ ನುಗ್ಗುವುದು ಸಾಮಾನ್ಯವಾಗಿದೆ. 2 ದಿನಗಳ ಹಿಂದೆ ಗೋಲ್ಪಾರಾದಲ್ಲಿನ ಜನವಸತಿ ಪ್ರದೇಶದಿಂದ ಜನರು ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಿದಾಗ ಕಾಡಾನೆಯೊಂದು ಕೋಪಗೊಂಡು, ಜನರ ಮೇಲೆ ದಾಳಿ ಮಾಡಲು ಮುಂದಾಗಿದೆ. ಸಮೀಪದ ಕಾಡಿನಿಂದ ಸುಮಾರು 40 ಕಾಡು ಆನೆಗಳ ಹಿಂಡು ಆಹಾರ ಹುಡುಕಲು ಬಂದಿದ್ದವು. ಊರಿನೊಳಗೆ ನುಗ್ಗಿ ಭತ್ತದ ಬೆಳೆಗಳನ್ನು ಹಾನಿಗೊಳಿಸಿದ್ದವು. ಗದ್ದೆಗೆ ನುಗ್ಗಿದ್ದ ಆನೆಗಳನ್ನು ಓಡಿಸಲು ಜನರು ಗುಂಪು ಕಟ್ಟಿಕೊಂಡು ಹೋದಾಗ ಆ ಆನೆ ವಾಪಾಸ್​ ಜನರನ್ನು ಓಡಿಸಿಕೊಂಡು ಬಂದಿರುವ ವಿಡಿಯೋ ವೈರಲ್ (Video Viral) ಆಗಿದೆ.