Shocking News: ಊಟ ಕೊಡಲು ಬಂದ ಮಾವುತನ ಕೈ ಬೆರಳು ಕಚ್ಚಿ, ತುಂಡರಿಸಿದ ಆನೆ ಮರಿ!

ಪುಷ್ಕರನ್ ಪಿಳ್ಳೈ ಎಂಬ ವ್ಯಕ್ತಿ ಅರಣ್ಯ ಎಂಬ ಕರುವಿಗೆ ಆಹಾರ ಮತ್ತು ಔಷಧಿಗಳನ್ನು ನೀಡುತ್ತಿದ್ದಾಗ ಆ ಆನೆಮರಿ ಆತನ ಬೆರಳುಗಳಿಗೆ ಕಚ್ಚಿ, ಗಂಭೀರವಾದ ಗಾಯಗಳಾಗಿವೆ.

Shocking News: ಊಟ ಕೊಡಲು ಬಂದ ಮಾವುತನ ಕೈ ಬೆರಳು ಕಚ್ಚಿ, ತುಂಡರಿಸಿದ ಆನೆ ಮರಿ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 01, 2022 | 9:24 AM

ತಿರುವನಂತಪುರಂ: ಕೇರಳದ ತಿರುವನಂತಪುರಂ (Tiruvanantapuram) ಜಿಲ್ಲೆಯ ಕೊಟ್ಟೂರು ಆನೆಧಾಮ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆನೆ ಮರಿಯೊಂದು (Elephant) ಮಾವುತನ ಬೆರಳನ್ನು ಕಚ್ಚಿ ತುಂಡು ಮಾಡಿದೆ. ಮಂಗಳವಾರ ಸಂಜೆ ಮಾವುತ ಆನೆ ಮರಿಗೆ ಊಟ ಕೊಡಲು ಹೋದಾಗ ಪಕ್ಕದಲ್ಲೇ ಜೆಸಿಬಿ ಕೆಲಸ ನಡೆಯುತ್ತಿತ್ತು. ಇದರಿಂದ ಹೆದರಿದ ಆನೆ ಮರಿ ಊಟ ತಿನ್ನಿಸಲು ಬಂದ ಮಾವುತನ ಕೈ ಬೆರಳನ್ನು ಕಚ್ಚಿದೆ.

ಪುಷ್ಕರನ್ ಪಿಳ್ಳೈ ಎಂಬ ವ್ಯಕ್ತಿ ಅರಣ್ಯ ಎಂಬ ಕರುವಿಗೆ ಆಹಾರ ಮತ್ತು ಔಷಧಿಗಳನ್ನು ನೀಡುತ್ತಿದ್ದಾಗ ಆ ಆನೆಮರಿ ಆತನ ಬೆರಳುಗಳಿಗೆ ಕಚ್ಚಿ, ಗಂಭೀರವಾದ ಗಾಯಗಳಾಗಿವೆ. 2 ತಿಂಗಳ ಹಿಂದೆ ತಾಯಿ ಆನೆ ಸತ್ತ ನಂತರ ಅರಣ್ಯ ಎಂಬ ಮರಿಯಾನೆಯನ್ನು ಕೊಟ್ಟೂರು ಅರಣ್ಯದಿಂದ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು ಎಂದು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್

ಪುಷ್ಕರನ್ ಪಿಳ್ಳೆ ಆ ಕರುವಿಗೆ ಊಟವನ್ನು ನೀಡುತ್ತಿರುವಾಗ ಆಸುಪಾಸಿನಲ್ಲಿ ಜೆಸಿಬಿ ಯಂತ್ರಗಳು ಕೆಲಸ ಮಾಡುತ್ತಿತ್ತು. ಆ ಯಂತ್ರದ ದೊಡ್ಡ ಶಬ್ದದಿಂದ ಮರಿ ಆನೆ ಹೆದರಿ, ಪುಷ್ಕರನ್ ಪಿಳ್ಳೈ ಅವರ ಬೆರಳನ್ನು ಕಚ್ಚಿದೆ ಎಂದು ರಿಪೋರ್ಟರ್ ಲೈವ್ ವರದಿಯಲ್ಲಿ ತಿಳಿಸಿದೆ.

ಮಾವುತನ ಎರಡು ಬೆರಳುಗಳು ಆನೆ ಮರಿಯ ಬಾಯಿಯೊಳಗೆ ಸಿಕ್ಕಿಹಾಕಿಕೊಂಡವು. ಕೂಡಲೇ ಆತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ, ಬೇರ್ಪಡಿಸಿದ ಬೆರಳನ್ನು ಮತ್ತೆ ಹೊಲಿಯಲು ವೈದ್ಯಕೀಯ ತಂಡವು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: Puducherry: ಪುದುಚೇರಿಯ ಪ್ರಸಿದ್ಧ ಮನಕುಲ ವಿನಾಯಕ ದೇವಾಲಯದ ಲಕ್ಷ್ಮೀ ಆನೆ ಹೃದಯಾಘಾತದಿಂದ ಸಾವು

ಕೊಟ್ಟೂರು ಆನೆಧಾಮ ಮತ್ತು ಪುನರ್ವಸತಿ ಕೇಂದ್ರದ ಪಶುವೈದ್ಯರು ಮತ್ತು ಸಹಾಯಕರ ಅಸಮರ್ಥ ವರ್ತನೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಕೊಟ್ಟೂರಿನಲ್ಲಿರುವ ಆನೆ ಪುನರ್ವಸತಿ ಕೇಂದ್ರವು 56 ಹೆಕ್ಟೇರ್‌ಗಳಲ್ಲಿ ಹರಡಿಕೊಂಡಿದೆ. ಅಲ್ಲಿ ದೈತ್ಯ ಸಸ್ತನಿಗಳು ಯಾವುದೇ ನಿರ್ಬಂಧವಿಲ್ಲದೆ ಮುಕ್ತವಾಗಿ ತಿರುಗಾಡಲು ಅವಕಾಶವಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ