‘ಸಿಂಹ ಗುಹೆ’ ಸಿನಿಮಾದ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ ಅನಿರುದ್ಧ್ ಜತ್ಕರ್
‘ಈ ಗೀತೆಯನ್ನು ನೋಡಿ ಬಹಳ ಖುಷಿ ಆಯಿತು. ವಿಷ್ಣುವರ್ಧನ್ ಅವರ ಮೇಲೆ ಚಿತ್ರತಂಡದವರು ಹೊಂದಿರುವ ಅಭಿಮಾನದಿಂದ ನಾನು ಈ ಹೊಸ ತಂಡದವರಿಗೆ ಹಾರೈಸಲು ಬಂದಿದ್ದೇನೆ. ಹಾಡಿನ ಶೂಟಿಂಗ್ ಸ್ಥಳ ತುಂಬ ಚೆನ್ನಾಗಿದೆ. ಚಿತ್ರೀಕರಣದ ಶೈಲಿ ಬಹಳ ಚೆನ್ನಾಗಿದೆ. ಸಿಂಹ ಗುಹೆ ಚಿತ್ರ ನೋಡಲು ನಾನು ಬರುತ್ತೇನೆ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ನಟ ಅನಿರುದ್ಧ್ ಜತ್ಕರ್ ಶುಭ ಕೋರಿದ್ದಾರೆ.
ಈ ಮೊದಲು ‘ಸಮರ್ಥ’, ‘ತಾಜಾ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್‌ಜಿಆರ್ ಅವರು ಈಗ ‘ಸಿಂಹ ಗುಹೆ’ (Simha Guhe) ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಅವರ 3ನೇ ಸಿನಿಮಾ. ನಿವಿಶ್ಕಾ ಪಾಟೀಲ್, ರವಿ ಶಿರೂರು ಅವರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಯಿತು. ಆ ಕಾರ್ಯಕ್ರಮಕ್ಕೆ ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಿರ್ದೇಶಕ ಎಸ್‌ಜಿಆರ್ ಅವರು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಆ ಕಾರಣಕ್ಕೆ ಸಿನಿಮಾದ ಶೀರ್ಷಿಕೆಯನ್ನು ‘ಸಿಂಹ ಗುಹೆ’ ಎಂದು ಇಡಲಾಗಿದೆ. ವಿಷ್ಣುವರ್ಧನ್ (Vishnuvardhan) ಅವರ ಅಳಿಯ ಅನಿರುದ್ಧ್ ಅವರಿಂದ ಸಾಂಗ್ ಬಿಡುಗಡೆ ಮಾಡಿಸಿ ಅವರು ಖುಷಿಪಟ್ಟಿದ್ದಾರೆ. ಈ ಸಿನಿಮಾಗೆ ಎ.ಸಿ. ಮಹೇಂದರ್ ಛಾಯಾಗ್ರಹಣ ಹಾಗೂ ಸತೀಶ್ ಆರ್ಯನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಈ ಹಾಡನ್ನು ನೋಡಿ ಬಹಳ ಸಂತೋಷ ಆಯಿತು. ವಿಷ್ಣುವರ್ಧನ್ ಮೇಲೆ ತಂಡದವರು ಇಟ್ಟಿರುವ ಅಭಿಮಾನದ ಕಾರಣದಿಂದ ಹೊಸ ತಂಡದವರಿಗೆ ಮನಸಾರೆ ಹಾರೈಸಲು ಬಂದಿದ್ದೇನೆ. ಹಾಡಿನ ಚಿತ್ರೀಕರಣ ಸ್ಥಳ ತುಂಬಾ ಚೆನ್ನಾಗಿದೆ. ಮೇಕಿಂಗ್ ಶೈಲಿ ಬಹಳ ಚೆನ್ನಾಗಿದೆ. ಸಿನಿಮಾ ನೋಡಲು ಕೂಡ ಬರುತ್ತೇನೆ. ಈ ತಂಡದ ಪ್ರಯತ್ನ ನನಗೆ ಇಷ್ಟ ಆಯಿತು. ಇವರಿಗೆ ಯಶಸ್ಸು ಸಿಗಲಿ’ ಎಂದು ಅನಿರುದ್ಧ್ ಜತ್ಕರ್ ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.