ಅಭಿಮಾನ್ ಸ್ಟುಡಿಯೋದಲ್ಲಿ ಮತ್ತೆ ವಿಷ್ಣು ಮಂಟಪ ನಿರ್ಮಾಣ ಮಾಡುತ್ತೇವೆ: ಅನಿರುದ್ಧ್
ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿರುವುದು ಖುಷಿಯ ವಿಷಯ. ಆದರೆ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣು ಸಮಾಧಿಯನ್ನು ನೆಲಸಮ ಆಗಿದ್ದು ನೋವಿನ ಸಂಗತಿ. ಆ ಜಾಗದಲ್ಲಿ ಮತ್ತೆ ಸಮಾಧಿ ನಿರ್ಮಾಣ ಮಾಡಲು ಅವರ ಕುಟುಂಬದವರು ಆಲೋಚಿಸಿದ್ದಾರೆ.
ನಟ ವಿಷ್ಣುವರ್ಧನ್ (Vishnuvardhan) ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಘೋಷಣೆ ಮಾಡಿರುವುದು ಖುಷಿಯ ವಿಷಯ. ಆದರೆ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣು ಸಮಾಧಿ ನೆಲಸಮ ಆಗಿದ್ದು ನೋವಿನ ಸಂಗತಿ. ಆ ಜಾಗದಲ್ಲಿ ಮತ್ತೆ ಸಮಾಧಿ ನಿರ್ಮಾಣ ಮಾಡಲು ಅವರ ಕುಟುಂಬದವರು ಆಲೋಚಿಸಿದ್ದಾರೆ. ‘ಅಭಿಮಾನ್ ಸ್ಟುಡಿಯೋದಲ್ಲಿ ಅದೇ ರೀತಿಯ ಮಂಟಪ ಮತ್ತೆ ನಿರ್ಮಾಣ ಆಗಬೇಕು. ಅದಕ್ಕೆ ಅವಕಾಶ ನೀಡಿ ಎಂದು ಮುಖ್ಯಮಂತ್ರಿಗಳ ಬಳಿ ನಾವು ಕೇಳಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಂಟಪ ನಿರ್ಮಾಣ ಮಾಡುವ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆ’ ಎಂದು ಅನಿರುದ್ಧ್ (Anirudh Jatkar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

