ಹುಬ್ಳಳ್ಳಿ ಯುವತಿಯರ ಹತ್ಯೆಯಂಥ ಘಟನೆ ಬೆಳಗಾವಿಯಲ್ಲೂ ನಡೆಯಲು ಪೊಲೀಸ್ ಕಾಯುತ್ತಿದ್ದೆಯೇ?

|

Updated on: May 25, 2024 | 10:41 AM

ಹುಬ್ಬಳ್ಳಿ ಯುವತಿಯರಿಗೆ ಆದ ಗತಿ ನಿನಗೂ ಆಗುತ್ತದೆ, ಪೊಲೀಸರು ನನ್ನ ಕಿಸೆಯಲ್ಲಿದ್ದಾರೆ ಎಂದು ತಿಪ್ಪಣ್ಣ ಬೆದರಿಕೆ ಕೂಡ ಹಾಕಿದ್ದಾನಂತೆ. ಹುಬ್ಬಳ್ಳಿಯಂಥ ಘಟನೆಗಳು ಪುನರಾವರ್ತನೆಯಾಗಬಾರದು ಅಂತಾದ್ರೆ ಪರಮೇಶ್ವರ್ ಅವರು ಕೂಡಲೇ ಬೆಳಗಾವಿ ಪೊಲೀಸ್ ವರಿಷ್ಠರೊಂದಿಗೆ ಮಾತಾಡಬೇಕು.

ಬೆಳಗಾವಿ: ನಮ್ಮ ರಾಜ್ಯದ ಪೊಲೀಸರಿಗೆ ಏನಾಗಿದೆ ಅಂತ ಗೃಹ ಸಚಿವ ಜಿ ಪರಮೇಶ್ವರ್ ಅವರೇ ಹೇಳಬೇಕು. ಅವರ ನಿರ್ಲಿಪ್ತತೆ ಮತ್ತು ಬೇಜವಾಬ್ದಾರಿಯಿಂದಾಗಿ ಪ್ರೀತಿ ಪ್ರೇಮ ವಿಷಯದಲ್ಲಿ ಹುಚ್ಚು ಯುವಕರಿಂದ ಕೇವಲ ಒಂದು ತಿಂಗಳ ಅವಧಿಯಲ್ಲಿ ಹುಬ್ಳಳ್ಳಿಯ ಇಬ್ಬರು ಯುವತಿಯರ ಹತ್ಯೆಯಾಗಿದೆ. ಬೆಳಗಾವಿಯ ಕಿಣ್ಣೈ ಗ್ರಾಮದಲ್ಲಿ ಇಂಥದ್ದೇ ಪ್ರಕರಣ ನಡೆಯುತ್ತಿದೆ. ಗ್ರಾಮಮ ತಿಪ್ಪಣ್ಣ ಡೋಕ್ರೆ ಹೆಸರಿನ ಯುವಕನೊಬ್ಬ ಯುವತಿಯೊಬ್ಳಳನ್ನು ನನ್ನನ್ನು ಪ್ರೀತಿಸು, ಮದುವೆಯಾಗೋಣ ಅಂತ ಮೂರು ವರ್ಷದಿಂದ ದುಂಬಾಲು ಬಿದ್ದಿದ್ದಾನೆ ಮತ್ತು ಅಕೆಯನ್ನು ಮಾನಸಿಕ ಮತ್ತು ದೈಹಿಕ ಹಿಂಸೆಗೆ ಗುರಿಮಾಡಿದ್ದಾನೆ. ನಿನ್ನೆ ಪಾನಮತ್ತನಾಗಿ ಬಂದು ಯುವತಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಅವನ ದಾಂಧಲೆಯಿಂದ ಕಿಟಕಿ ಗಾಜುಗಳು ಚೂರಾಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ನಮ್ಮ ಬೆಳಗಾವಿ ವರದಿಗಾರ ಯುವತಿಯ ಮನೆಗೆ ಭೇಟಿ ನೀಡಿ ಆಕೆಯ ಸಂಬಂಧಿಯೊಬ್ಬರ ಜೊತೆ ಮಾತಾಡಿದ್ದಾರೆ. ಹುಬ್ಬಳ್ಳಿ ಯುವತಿಯರಿಗೆ ಆದ ಗತಿ ನಿನಗೂ ಆಗುತ್ತದೆ, ಪೊಲೀಸರು ನನ್ನ ಕಿಸೆಯಲ್ಲಿದ್ದಾರೆ ಎಂದು ತಿಪ್ಪಣ್ಣ ಬೆದರಿಕೆ ಕೂಡ ಹಾಕಿದ್ದಾನಂತೆ. ಹುಬ್ಬಳ್ಳಿಯಂಥ ಘಟನೆಗಳು ಪುನರಾವರ್ತನೆಯಾಗಬಾರದು ಅಂತಾದ್ರೆ ಪರಮೇಶ್ವರ್ ಅವರು ಕೂಡಲೇ ಬೆಳಗಾವಿ ಪೊಲೀಸ್ ವರಿಷ್ಠರೊಂದಿಗೆ ಮಾತಾಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಇದೆ: ಜಿ ಪರಮೇಶ್ವರ್​