ಸುಗ್ರೀವಾಜ್ಞೆ ಜಾರಿಗೆ ಬಂದರೂ ನಿಲ್ಲದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ, ಹುಬ್ಬಳ್ಳಿಯಲ್ಲಿ ಒಬ್ಬ ವ್ಯಕ್ತಿ ಬಲಿ
ಮೈಕ್ರೋ ಫೈನಾನ್ಸ್ ಸಿಬ್ಬಂದಿ ತನಗೆ ಮಾನಸಿಕ ನೀಡಿರುವ ಬಗ್ಗೆ ಶಿವಾನಂದ ಡೆತ್ ನೋಟೊಂದನ್ನು ಬರೆದಿಟ್ಟಿದ್ದಾರೆ. ಶಿವಾನಂದ ದೇಹ ಕೆರೆಯಲ್ಲಿ ಇವತ್ತು ಪತ್ತೆಯಾಗಿದ್ದು ಕೊಳೆತ ವಾಸನೆ ಬರುತ್ತಿದೆ. ದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ತಂದ ಬಳಿಕ ಮರವೊಂದರ ಕೆಳಗೆ ಕೂತು ರೋದಿಸುತ್ತಿರುವ ತಾಯಿ ಮತ್ತು ಸಂಬಂಧಿಕರು ಅಲ್ಲಿ ಜಮಾಯಿಸಿದ್ದಾರೆ.
ಹುಬ್ಬಳ್ಳಿ: ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದರ ಸಿಬ್ಬಂದಿ ನೀಡುತ್ತಿದ್ದ ಕಾಟ ತಾಳಲಾಗದೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಯಲಿವಾಳ ಗ್ರಾಮದ ನಿವಾಸಿಯೊಬ್ಬರು ಹುಬ್ಬಳ್ಳಿಯಲ್ಲಿರುವ ಉಣ್ಕಲ್ ಕೆರೆಗೆ ಹಾರಿ ಜೀವ ಬಿಟ್ಟಿದ್ದಾರೆ. ಮೃತ ವ್ಯಕ್ತಿಯನ್ನು 36-ವರ್ಷ ವಯಸ್ಸಿನ ಶಿವಾನಂದ ಕಳ್ಳೀಮನಿ ಎಂದು ಗುರುತಿಸಲಾಗಿದೆ. ನಮ್ಮ ಹುಬ್ಬಳ್ಳಿ ವರದಿಗಾರ ನೀಡುವ ಮಾಹಿತಿ ಪ್ರಕಾರ ಶಿವಾನಂದ, ಮೈಕ್ರೋ ಫೈನಾನ್ಸ್ ಸಂಸ್ಥೆ ನಡೆಸುವ ಕಾರ್ತೀಕ್ ಬಳ್ಳಾರಿ ಹೆಸರಿನ ವ್ಯಕ್ತಿಯಿಂದ 4 ಲಕ್ಷ ರೂ. ಸಾಲ ಪಡೆದು ಅದನ್ನು ಹಿಂತಿರುಗಿಸಿಯೂ ಆಗಿತ್ತು. ಅದರೆ ಕಾರ್ತೀಕ್ ಪ್ರತಿದಿನ ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಅವನ ಕಿರುಕುಳ ತಾಳಲಾರದೆ ಶಿವಾನಂದ ನಾಲ್ಕು ದಿನಗಳ ಹಿಂದೆ ಕೆರೆಗೆ ಹಾರಿದ್ದಾರೆಂಬ ಅರೋಪವಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ