ಚಲಿಸುತ್ತಿದ್ದ ಮತ್ತೊಂದು ಕಾರು ಹೊತ್ತಿ ಉರಿಯಿತು, ಈ ಬಾರಿ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರದ ಹೊರವಲಯದಲ್ಲಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 07, 2022 | 4:47 PM

ಬೆಂಕಿ ಹೊತ್ತಿಕೊಳ್ಳುವ ಸುಳಿವು ಸಿಕ್ಕ ಕೂಡಲೇ ಅವರೆಲ್ಲ ಕಾರಿನಿಂದ ಕೆಳಗಿಳಿದು ದೂರ ಸರಿದಿದ್ದಾರೆ ಮತ್ತು ತಮ್ಮೆದಿರು ಕಾರು ಬೆಂಕಿಗಾಹುತಿ ಆಗುವುದನ್ನು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ. ವಿಷಯ ಸುತ್ತಮುತ್ತ ವಾಸವಾಗಿರುವ ಜನರಿಗೂ ಗೊತ್ತಾಗಿ ಅವರೂ ಅಲ್ಲಿ ನೆರೆದುಬಿಟ್ಟಿದ್ದಾರೆ.

ಚಲಿಸುವ ಕಾರು (moving car) ಮತ್ತು ಬೇರೆ ವಾಜನಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಅವು ಹೊತ್ತಿ ಉರಿಯುವ ಬಗ್ಗೆ ನಾವು ಅನೇಕ ಬಾರಿ ಚರ್ಚೆ ಮಾಡಿದ್ದೇವೆ. ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವುದು ತಾಂತ್ರಿಕ ಅಥವಾ (technical or mechanical) ಕಾರಣಗಳಿರಬಹುದು. ಅದರೆ ಸಮಸ್ಯೆಯೇನೆಂದರೆ, ವಾಹನ ತಯಾರಿಸುವ ಕಂಪನಿಗಳು ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ ಮಾರಾಯ್ರೇ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ಒಂದು ಪುಟ್ಟ ಗ್ರಾಮದಲ್ಲಿ ಬೆಂಕಿಯಲ್ಲಿ ಉರಿದು ಹೋಗುತ್ತಿರುವ ಕಾರಿನ ವಿಡಿಯೋ ನಮಗೆ ಲಭ್ಯವಾಗಿದೆ. ಈ ಬೆಂಕಿ ಆಕಸ್ಮಿಕದ ಸಮಾಧಾನಕರ ಸಂಗತಿಯೇನೆಂದರೆ, ಯಾರಿಗೂ ಇದರಿಂದ ಅಪಾಯವಾಗಿಲ್ಲ. ನಮಗೆ ದೊರೆತಿರುವ ಮಾಹಿತಿ ಪ್ರಕಾರ ಕಾರು ಕೃಷ್ಣಪ್ಪ ಅನ್ನುವವರಿಗೆ ಸೇರಿದ್ದು ಮತ್ತು ಅದರಲ್ಲಿ ಒಟ್ಟು 6 ಜನ ಪ್ರಯಾಣಿಸುತ್ತಿದ್ದರು. ಬೆಂಕಿ ಹೊತ್ತಿಕೊಳ್ಳುವ ಸುಳಿವು ಸಿಕ್ಕ ಕೂಡಲೇ ಅವರೆಲ್ಲ ಕಾರಿನಿಂದ ಕೆಳಗಿಳಿದು ದೂರ ಸರಿದಿದ್ದಾರೆ ಮತ್ತು ತಮ್ಮೆದಿರು ಕಾರು ಬೆಂಕಿಗಾಹುತಿ ಆಗುವುದನ್ನು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ. ವಿಷಯ ಸುತ್ತಮುತ್ತ ವಾಸವಾಗಿರುವ ಜನರಿಗೂ ಗೊತ್ತಾಗಿ ಅವರೂ ಅಲ್ಲಿ ನೆರೆದುಬಿಟ್ಟಿದ್ದಾರೆ.

ಊರಿನವರ ಪೈಕಿ ಒಬ್ಬ ವ್ಯಕ್ತಿ ನೀರಿನ ಟ್ಯಾಂಕರ್ ಘಟನಾ ಸ್ಥಳಕ್ಕೆ ತಂದ ಬಳಿಕ ಬೆಂಕಿ ಆರಿಸುವ ಕೆಲಸ ಆರಂಭವಾಗಿದೆ. ಬೆಂಕಿ ಪೂರ್ತಿಯಾಗಿ ನಂದಿಹೋಗುವ ಹೊತ್ತಿಗೆ ಕಾರಿನ ಬಹುಭಾಗ ಸುಟ್ಟು ಹೋಗಿದೆ. ಅದರ ಒಳಭಾಗವಂತೂ ಸುಟ್ಟು ಕರಕಲಾಗಿರುವುದು ನಿಮಗೆ ವಿಡಿಯೋನಲ್ಲಿ ಕಾಣಿಸುತ್ತದೆ.

ಆಗಲೇ ಹೇಳಿದಂತೆ ವಾಹನಗಳಲ್ಲಿ ಹೀಗೆ ಏಕಾಏಕಿ ಬೆಂಕಿ ಹೊತ್ತಿಕೊಳ್ಳುವ ಅಪಾಯಕಾರಿ ಆಯಾಮದ ಬಗ್ಗೆ ತಯಾರಕಾ ಕಂಪನಿಗಳು ಗಮನ ಹರಿಸಬೇಕು ಮಾರಾಯ್ರೇ. ಜನರ ಜೀವ ಹೀಗೆ ಅಪಾಯಕ್ಕೆ ಸಿಕ್ಕುವುದನ್ನು ಅವರು ತಪ್ಪಿಸುವೆಡೆ ಪ್ರಯತ್ನಿಸಬೇಕು.

ಇದನ್ನೂ ಓದಿ:  ಮೈಸೂರಲ್ಲಿ ಚಲಿಸುತ್ತಿದ್ದ ಕಾರು ಹೊತ್ತಿ ಉರಿದು ಕರಕಲಾಯಿತು, ಡ್ರೈವ್ ಮಾಡುತ್ತಿದ್ದ ವೈದ್ಯರು ಅಪಾಯದಿಂದ ಪಾರು