‘ಸಾರಾ ವಜ್ರ’ ಟ್ರೇಲರ್ ನೋಡಿ ಬೆಂಬಲ ನೀಡಿದ ಶಿವಣ್ಣ; ಮುಖ್ಯ ಪಾತ್ರ ಮಾಡಿದ ಖುಷಿಯಲ್ಲಿ ಅನು ಪ್ರಭಾಕರ್
ಮೇ 20ರಂದು ‘ಸಾರಾ ವಜ್ರ’ ಚಿತ್ರ ಬಿಡುಗಡೆ ಆಗುತ್ತಿದೆ. ಆ ಸಿನಿಮಾ ಕುರಿತು ನಟಿ ಅನು ಪ್ರಭಾಕರ್ ಮಾತನಾಡಿದ್ದಾರೆ.
ಖ್ಯಾತ ನಟಿ ಅನು ಪ್ರಭಾಕರ್ (Anu Prabhakar) ಅವರು ‘ಸಾರಾ ವಜ್ರ’ (Sara Vajra Movie) ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸಾರಾ ಅಬೂಬಕ್ಕರ್ ಅವರು ಬರೆದ ಕಾದಂಬರಿ ಆಧರಿಸಿ ಈ ಸಿನಿಮಾ ತಯಾರಾಗಿದೆ. ‘ಈ ಸಿನಿಮಾ ಮಾಡಿದ್ದಕ್ಕೆ ತುಂಬ ಖುಷಿ ಇದೆ. ಒಳ್ಳೆಯ ಕಥೆ ಇದರಲ್ಲಿ ಇದೆ. ಜನರಿಗೆ ಈ ಸಿನಿಮಾ ಇಷ್ಟ ಆಗುತ್ತದೆ ಎಂಬ ನಂಬಿಕೆ ಇದೆ. ‘ವಜ್ರಗಳು’ ಕಾದಂಬರಿಯ ನಫೀಸಾ ಪಾತ್ರವನ್ನು ನಾನು ನಿಭಾಯಿಸಿದ್ದೇನೆ. ನಿರ್ದೇಶಕಿ ಶ್ವೇತಾ ಶೆಟ್ಟಿ (ಆರ್ನಾ ಸಾಧ್ಯ) ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದ ಟ್ರೇಲರ್ ಅನ್ನು ನೋಡಿ ಶಿವಣ್ಣ (Shivarajkumar) ಬೆಂಬಲ ನೀಡಿದರು. ಡಾ. ರಾಜ್ಕುಮಾರ್ ಅವರು ಕಾದಂಬರಿ ಆಧಾರಿತ ಹಲವು ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ ಈಗ ಅಂಥ ಚಿತ್ರಗಳು ಕಡಿಮೆ ಆಗಿವೆ. ಜನರು ನಮ್ಮ ಸಿನಿಮಾವನ್ನು ನೋಡಿ, ನಮಗೆ ಪ್ರೀತಿ ತೋರಿಸುತ್ತಾರೆ ಅಂತ ನಾವೆಲ್ಲರೂ ನಂಬಿದ್ದೇವೆ’ ಎಂದಿದ್ದಾರೆ ಅನು ಪ್ರಭಾಕರ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.