Puneeth Rajkumar: ಮೌಂಟ್ ಎವರೆಸ್ಟ್ನಲ್ಲಿ ಪುನೀತ್ ಜನ್ಮದಿನ ಆಚರಿಸಿದ ಬೆಂಗಳೂರಿನ ಸಾಹಸಿ ಅಭಿಮಾನಿಗಳು
Mount Everest | Puneeth Birth Anniversary: ವಿಶ್ವಾದ್ಯಂತ ಪುನೀತ್ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಬೆಂಗಳೂರಿನ ಸಾಹಸಿ ಯುವಕರು ಮೌಂಟ್ ಎವರೆಸ್ಟ್ನಲ್ಲು ಪುನೀತ್ ಜನ್ಮದಿನವನ್ನು ಆಚರಿಸಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಜನ್ಮದಿನವಿಂದು. ಅವರಿಲ್ಲ ಎಂಬ ನೋವಿನಲ್ಲೂ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಹಲವೆಡೆ ಸಾಮಾಜಿಕ ಕಾರ್ಯಗಳ ಮೂಲಕ ಪುನೀತ್ ಜನ್ಮದಿನವನ್ನು ಆಚರಿಸಿದರೆ, ಸಾಹಸೀ ಯುವಕರು ಮೌಂಟ್ ಎವರೆಸ್ಟ್ನಲ್ಲಿ (Mount Everest) ಅಪ್ಪು ಜನ್ಮದಿನವನ್ನು ಆಚರಿಸಿದ್ದಾರೆ. ಹೀಗೆ ವಿಶೇಷ ರೂಪದಲ್ಲಿ ಪುನೀತ್ ಜನ್ಮದಿನ ಆಚರಿಸಿದವರು ಬೆಂಗಳೂರಿನ ಯುವಕರು. ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ನಿಂದ ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ಪುನೀತ್ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಪುನೀತ್ ಜನ್ಮದಿನದ ಪ್ರಯುಕ್ತ ಇಂದು ವಿಶ್ವದೆಲ್ಲೆಡೆ ‘ಜೇಮ್ಸ್’ ಚಿತ್ರ ರಿಲೀಸ್ ಆಗಿದೆ. ಎಲ್ಲೆಡೆಯಿಂದ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಫ್ಯಾನ್ಸ್ ಭಾವುಕರಾಗಿ ಸಿನಿಮಾ ನೋಡುತ್ತಿದ್ದಾರೆ. ವಿಶ್ವದ ಸುಮಾರು 4,000 ಸ್ಕ್ರೀನ್ಗಳಲ್ಲಿ ಜೇಮ್ಸ್ ತೆರೆಕಂಡಿದೆ.
ಇದನ್ನೂ ಓದಿ:
Puneeth Rajkumar: ರಾಜರತ್ನ ಪುನೀತ್; ಅಪ್ಪು ನೆನಪಿನ ಅಪರೂಪದ ಫೋಟೋ ಆಲ್ಬಂ ಇಲ್ಲಿದೆ
James Movie Review: ಜೇಮ್ಸ್ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್ಫುಲ್’ ಶೋ