AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆಲುವಿನಲ್ಲಿ ಅಮ್ಮ ಐಶ್ವರ್ಯಗೆ ಸರಿಸಾಟಿಯಾಗಿರುವ ಆರಾಧ್ಯ ಪಾರ್ಟಿಗಳಲ್ಲಿ ಅಮ್ಮನಂತೆಯೇ ಉಡುಗೆ ಧರಿಸಿ ಮಿಂಚುತ್ತಾಳೆ

ಚೆಲುವಿನಲ್ಲಿ ಅಮ್ಮ ಐಶ್ವರ್ಯಗೆ ಸರಿಸಾಟಿಯಾಗಿರುವ ಆರಾಧ್ಯ ಪಾರ್ಟಿಗಳಲ್ಲಿ ಅಮ್ಮನಂತೆಯೇ ಉಡುಗೆ ಧರಿಸಿ ಮಿಂಚುತ್ತಾಳೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Nov 15, 2021 | 6:37 PM

Share

ಐಶ್ವರ್ಯ ಮತ್ತು ಆರಾಧ್ಯಳನ್ನು ಜೊತೆಯಾಗಿ ನೀವು ಸಾಕಷ್ಟು ಸಲ ನೋಡಿರಬಹುದು. ಯಾವುದೇ ಪಾರ್ಟಿಗೆ ಹೋದರೂ ಐಶ್ವರ್ಯ ಮಗಳನ್ನು ಜೊತೆಗೆ ಕರೆದೊಯ್ಯುತ್ತಾರೆ.

ವಯಸ್ಸು 50 ಸಮೀಪಿಸುತ್ತಿದ್ದರೂ ಬಚ್ಚನ್ ಮನೆತನದ ಸೊಸೆ ಐಶ್ವರ್ಯ ರೈ ಬಚ್ಚನ್ ಈಗಲೂ ಸುರಸುಂದರಿ. ವಯಸ್ಸು ಒಂದು ನಂಬರ್ ಮಾತ್ರ ಅಂತ ಹೇಳ್ತಾರಲ್ವಾ? ಐಶ್ವರ್ಯ ವಿಷಯದಲ್ಲಿ ಅದು ನಿಜವಾಗಿದೆ. ಅಂದಹಾಗೆ, ಅವರು ಸದ್ಯಕ್ಕೆ ತಮ್ಮ ಮುದ್ದಿನ ಮಗಳು ಆರಾಧ್ಯಳ 10 ನೇ ಜನ್ಮದಿನೋತ್ಸವ ಆಚರಿಸಲು ಪತಿ ಅಭಿಷೇಕ್ ಬಚ್ಚನ್ ಜೊತೆ ಮಾಲ್ಟೀವ್ಸ್ ನ ಒಂದು ಲಕ್ಸುರಿ ರೆಸಾರ್ಟ್ ನ ವಿಲ್ಲಾವೊಂದರಲ್ಲಿ ತಂಗಿದ್ದಾರೆ. ಆರಾಧ್ಯ ಮತ್ತು ಐಶ್ವರ್ಯ ಕುರಿತು ಮಾತಾಡುವ ಮೊದಲು ಅವರು ತಂಗಿರುವ ವಿಲ್ಲಾದ ಒಂದು ದಿನದ ಬಾಡಿಗೆ ನಿಮಗೆ ತಿಳಿಸಬೇಕು, ಅದು10 ಲಕ್ಷ ರೂಪಾಯಿ!

ಐಶ್ವರ್ಯ ಮತ್ತು ಆರಾಧ್ಯಳನ್ನು ಜೊತೆಯಾಗಿ ನೀವು ಸಾಕಷ್ಟು ಸಲ ನೋಡಿರಬಹುದು. ಯಾವುದೇ ಪಾರ್ಟಿಗೆ ಹೋದರೂ ಐಶ್ವರ್ಯ ಮಗಳನ್ನು ಜೊತೆಗೆ ಕರೆದೊಯ್ಯುತ್ತಾರೆ. ಒಂದ್ಹೊತ್ತಿಗೆ ನೀವು ಅಭಿಷೇಕ್ ರನ್ನು ಅವರೊಂದಿಗೆ ಕಾಣದಿರಬಹುದು. ಆದರೆ, ಮುದ್ದುಮೊಗದ ಆರಾಧ್ಯ ಮಾತ್ರ ಅಮ್ಮನ ಕೈಹಿಡಿದು ನಿಂತಿರುವುದು, ನಡೆಯುವುದು ಇಲ್ಲವೇ ಅಮ್ಮನ ಪಕ್ಕ ಕೂತು ಊಟ ಮಾಡುತ್ತಿರುವುದು ಗೋಚರಿಸುತ್ತದೆ.

ಅಂದಹಾಗೆ, ಅಮ್ಮ ಮಗಳ ಉಡುಗೆಯನ್ನು ಸಹ ನೀವು ಗಮನಿಸಿರಬಹುದು. ಬಹಳಷ್ಟು ಸಂದರ್ಭಗಳಲ್ಲಿ ಅವರಿಬ್ಬರು ಒಂದೇ ಬಗೆಯ ಬಟ್ಟೆ ತೊಟ್ಟಿರುತ್ತಾರೆ. ಅದೇ ಬಟ್ಟೆ, ಅದೇ ಸ್ಟೈಲ್! ಆರಾಧ್ಯ ಅಪ್ಪನನ್ನು ಜಾಸ್ತಿ ಹೋಲುತ್ತಾಳಾದರೂ ಬಹಳ ಮುದ್ದಾದ ಮಗು. ಇನ್ನು ತನ್ನಮ್ಮನಂತೆ ಡ್ರೆಸ್ ಮಾಡಿಕೊಂಡು ವಿಶ್ವಸುಂದರಿ ಜೊತೆ ನಡೆದು ಬರುತ್ತಿದ್ದರೆ ಕೇಳಬೇಕೆ? ಎಲ್ಲರ ದೃಷ್ಟಿ ಆರಾಧ್ಯ-ಐಶ್ವರ್ಯ ಅವರ ಮೇಲೆ ನೆಟ್ಟಿದ್ದು ನೆಟ್ಟಂಗಿರುತ್ತದೆ.

ಐಶ್ವರ್ಯ ಡಿಸೈನರ್ ಉಡುಗೆ ತೊಡುವಾಗಲೂ ಮಗಳಿಗೆ ಅಂಥದನ್ನೇ ಹೊಲಿಸುತ್ತಾರೆ. ಅಂಥ ಹಲವಾರು ಡ್ರೆಸ್ಗಳಲ್ಲಿ ಅವರಿಬ್ಬರು ಈ ವಿಡಿಯೋನಲ್ಲಿ ಕಾಣಸಿಗುತ್ತಾರೆ.

ಇದನ್ನೂ ಓದಿ:  Shilpa Shetty: ಜಿಮ್​ನಲ್ಲಿ ಬೆವರಿಳಿಸಿದ ಶಿಲ್ಪಾ ಶೆಟ್ಟಿ; ಹೇಗಿದೆ ನೋಡಿ ವರ್ಕೌಟ್​ ವಿಡಿಯೋ