ಡಾಲಿ ಧನಂಜಯ ಮದುವೆ ಆರತಕ್ಷತೆಯಲ್ಲೇ ಶಾಸಕ ಶಿವಲಿಂಗೇಗೌಡರಿಗೆ ಸನ್ಮಾನ ಮಾಡಿದ ನಟನ ಕುಟುಂಬ

ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2025 | 8:48 PM

ಡಾಲಿ ಧನಂಜಯ ಅರಸೀಕೆರೆ ಕ್ಷೇತ್ರದವರೇ ಆಗರಿರುವುದರಿಂದ ಅಲ್ಲಿನ ಶಾಸಕ ಶಿವಲಿಂಗೇಗೌಡರ ಜೊತೆ ಅವರ ಕುಟುಂಬಕ್ಕೆ ಉತ್ತಮ ಒಡನಾಟ ಇರಬಹುದು. ಹಾಗಾಗೇ ಜನಪ್ರತಿನಿಧಿಯನ್ನು ಅವರು ರಿಷಪ್ಷನ್ ನಡೆಯುತ್ತಿರುವ ಜಾಗದಲ್ಲಿ ಸನ್ಮಾನ ಮಾಡುತ್ತಿದ್ದಾರೆ. ಶಾಸಕರೊಂದಿಗೆ ಬೇರೆ ಜನರನ್ನೂ ಶಾಲು ಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಲಾಗುತ್ತಿದೆ. ಮದುವೆಯ ಸಡಗರ ಮತ್ತು ಗಡಿಬಿಡಿಯಲ್ಲಿ ಧನಂಜಯ ಫ್ಯಾಮಿಲಿ ಇದನ್ನೆಲ್ಲ ನೆನಪಿಟ್ಟಿರೋದು ಶ್ಲಾಘನೀಯ.

ಮೈಸೂರು: ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಹಾಕಲಾಗಿರುವ ಅದ್ದೂರಿ ಮತ್ತು ನಯನಮನೋಹರ ಸೆಟ್ ನಲ್ಲಿ ಒಂದೆಡೆ ಡಾಲಿ ಧನಂಜಯ್ ಮತ್ತು ಧನ್ಯತಾ ಅವರ ಮದುವೆಯ ಅರತಕ್ಷತೆ ಭರ್ಜರಿಯಾಗಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಸ್ಥಳೀಯ ಶಾಸಕ ಕೆಎಂ ಶಿವಲಿಂಗೇಗೌಡರ ಸನ್ಮಾನವೂ ಜೋರಾಗಿ ನಡೆಯಿತು. ಮದುವೆಗೆ ಬಂದಿರುವ ಅಭಿಮಾನಿಗಳಲ್ಲಿ ನಟನೊಂದಿಗೆ ಸೆಲ್ಫೀ ತೆಗೆದುಕೊಳ್ಳುವ ಉಮ್ಮೇದಿ. ವೇದಿಕೆ ಮೇಲಿರುವ ವಲಂಟೀರ್​ಗಳು ಅದಕ್ಕೆ ಅವಕಾಶ ನೀಡದಿದ್ದರೂ ಜನ ಪ್ರಯತ್ನಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಮದುವೆಗೇನೇ ಬಂದಿದ್ದೇವೆ ಸೆಲ್ಫೀ ಇಲ್ಲಾಂದ್ರೆ ಹೆಂಗೆ ಸ್ವಾಮಿ ಅನ್ನೋದು ಅವರ ಧೋರಣೆ ಆಗಿರಬಹುದು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಾಲಿ ಧನಂಜಯ್ ಮದುವೆ ಸೆಟ್ ಎಷ್ಟು ಬೃಹತ್ ಎಂಬುದು ಗೊತ್ತೆ?

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.