AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾಲಿ ಧನಂಜಯ್ ಮದುವೆ ಸೆಟ್ ಎಷ್ಟು ಬೃಹತ್ ಎಂಬುದು ಗೊತ್ತೆ?

Daali Dhananjay marriage: ಡಾಲಿ ಧನಂಜಯ್ ಮದುವೆ ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ನಡೆಯುತ್ತಿದೆ. ಮದುವೆಗೆ ಎರಡು ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ. ಸೆಟ್ ನಿರ್ಮಾಣ ಮಾಡಿರುವ ಅರುಣ್ ಸಾಗರ್ ಅವರು ಸೆಟ್​ಗಳ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ವೆಡ್ಡಿಂಗ್ ಪ್ಲ್ಯಾನರ್ ಧನು ಸಹ ಡಾಲಿ ಮದುವೆ ಎಷ್ಟು ಅದ್ಧೂರಿ ಎಂಬುದನ್ನು ಹೇಳಿದ್ದಾರೆ.

ಡಾಲಿ ಧನಂಜಯ್ ಮದುವೆ ಸೆಟ್ ಎಷ್ಟು ಬೃಹತ್ ಎಂಬುದು ಗೊತ್ತೆ?
Daali Dhananjay Wedding
ಮಂಜುನಾಥ ಸಿ.
|

Updated on: Feb 15, 2025 | 4:07 PM

Share

ಡಾಲಿ ಧನಂಜಯ್ ಹಾಗೂ ಧನ್ಯತಾ ವಿವಾಹ ಬಲು ಅದ್ಧೂರಿಯಾಗಿ ಮೈಸೂರು ನಗರಿಯಲ್ಲಿ ನಡೆಯುತ್ತಿದೆ. ಮೈಸೂರು ಅರಮನೆ ಮುಂಭಾಗದ ಎಕ್ಸಿಬಿಷನ್ ಗ್ರೌಂಡ್​ನಲ್ಲಿ ಡಾಲಿ ಹಾಗೂ ಧನ್ಯತಾ ವಿವಾಹ ಕಾರ್ಯ ಜರುಗುತ್ತಿವೆ. ಡಾಲಿ ಧನಂಜಯ್​ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದ್ದು, ಅವರ ಜೊತೆಗೆ ಚಿತ್ರರಂಗದ ಗಣ್ಯರು, ರಾಜ್ಯದ ಪ್ರಮುಖ ರಾಜಕಾರಣಿಗಳು ಸಹ ಇಂದು (ಫೆಬ್ರವರಿ 15) ಆರತಕ್ಷತೆ ಮತ್ತು ನಾಳೆ (ಫೆಬ್ರವರಿ 16) ಮದುವೆಗೆ ಆಗಮಿಸಲಿದ್ದಾರೆ. ಇದಕ್ಕಾಗಿಯೇ ಡಾಲಿ ಮದುವೆಗೆಂದು ಬೃಹತ್ ಗಾತ್ರದ ಸೆಟ್ ಅನ್ನು ಹಾಕಲಾಗಿದೆ.

ಖ್ಯಾತ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ಮದುವೆಗೆ ಎರಡು ಬೃಹತ್ ಸೆಟ್ ಹಾಕಿದ್ದಾರೆ. ಹಾಕಿರುವ ಸೆಟ್​ ಬಗ್ಗೆ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿರುವ ಅರುಣ್ ಸಾಗರ್, ‘ಡಾಲಿ ಧನಂಜಯ್ ಅವರ ಮದುವೆಗೆ ಎರಡು ರೀತಿಯ ಸೆಟ್ ನಿರ್ಮಾಣ ಮಾಡಲಾಗಿದೆ. ಮೈಸೂರಿನಲ್ಲಿ ಮದುವೆ ನಡೆಯುತ್ತಿದ್ದು, ಸ್ವತಃ ಡಾಲಿ ಧನಂಜಯ್​ಗೆ ಮೈಸೂರು ಮೆಚ್ಚಿನ ನಗರವಾದ್ದರಿಂದ ಮೈಸೂರನ್ನೇ ಥೀಮ್ ಆಗಿ ಇಟ್ಟುಕೊಂಡು ಸೆಟ್ ಡಿಸೈನ್ ಮಾಡಲಾಗಿದೆ’ ಎಂದಿದ್ದಾರೆ.

ಆರತಕ್ಷತೆಗೆ ಮೈಸೂರು ಅರಮನೆ, ಅರಮನೆಯ ಆರ್ಚ್ ಹಾಗೂ ಮೈಸೂರಿನ ಕಲೋನಿಯಲ್​ ಬಿಲ್ಡಿಂಗ್​ಗಳಿಂದ ಸ್ಪೂರ್ತಿ ಪಡೆದುಕೊಂಡು ಈ ಸೆಟ್ ನಿರ್ಮಾಣ ಮಾಡಲಾಗಿದೆ. ಒಟ್ಟಾರೆಯಾಗಿ ಆರತಕ್ಷತೆಯ ಸೆಟ್​ಗೆ ಮೈಸೂರಿನ ಆರ್ಕಿಟೆಕ್ಚರ್ ಸ್ಪೂರ್ತಿ ನೀಡಿದೆ’ ಎಂದಿದ್ದಾರೆ ಅರುಣ್ ಸಾಗರ್. ಇನ್ನು ಮದುವೆಯ ಮಂಟಪಕ್ಕೂ ಭಿನ್ನವಾದ ಸೆಟ್ ಹಾಕಿದ್ದು, ದೇಗುಲಗಳ ಗೋಪುರಗಳ ಸೆಟ್ ಅನ್ನು ಅದಕ್ಕಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ಮಾತನಾಡಿದ ಅರುಣ್ ಸಾಗರ್, ‘ಮೈಸೂರು, ದೇವನಗರಿಯೂ ಹೌದು. ಹಾಗಾಗಿ ಮಾಂಗಲ್ಯಧಾರಣೆಯಂಥಹಾ ಪ್ರಮುಖ ಕಾರ್ಯಕ್ಕೆ ಮೈಸೂರಿನ ದೇವಾಲಯಗಳ ಮಾದರಿಯಲ್ಲಿ ಗೋಪುರಗಳ ಸೆಟ್​ಗಳನ್ನು ಅನ್ನು ನಿರ್ಮಾಣ ಮಾಡಲಾಗಿದೆ’ ಎಂದರು.

ಇದನ್ನೂ ಓದಿ:ಡಾಲಿ ಧನಂಜಯ್ ಮದುವೆಗೆ ಸಿದ್ಧವಾಗ್ತಿದೆ ಬಗೆ ಬಗೆಯ ಖಾದ್ಯ: ಇಲ್ಲಿದೆ ವಿಡಿಯೋ

ಡಾಲಿಯ ಮದುವೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಧನು ವೆಡ್ಡಿಂಗ್ ಪ್ಲ್ಯಾನರ್​ನ ಧನು ಮಾತನಾಡಿ, ‘ಡಾಲಿಯ ಮದುವೆಗೆ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಹೆಚ್ಚಾಗಿ ಬರುತ್ತಾರೆ ಎಂಬುದು ಗೊತ್ತಿದ್ದ ಕಾರಣ ದೊಡ್ಡ ಜಾಗದಲ್ಲಿ ಮದುವೆ ಮಾಡಲು ನಿರ್ಧರಿಸಿದ್ದೆವು. ಮದುವೆ ಆಗುತ್ತಿರುವ ಎಕ್ಸಿಬಿಷನ್ ಗ್ರೌಂಡ್​ 23 ಎಕರೆ ಇದೆ. ಅಷ್ಟೂ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಆರತಕ್ಷತೆ ಮಾಡುತ್ತಿರುವ ಜಾಗ ಒಂದು ಎಕರೆ ಇದೆ. ಮುಹೂರ್ತ ನಡೆಯುವ ಜಾಗ 43 ಸಾವಿರ ಚದರ ಅಡಿ ಇದೆ. ಊಟದ ಹಾಲ್ ಅನ್ನು ಮೂರು ಏಕರೆ ಜಾಗದಲ್ಲಿ ನಿರ್ಮಾಣ ಮಾಡಿದ್ದೀವಿ. ಪಾರ್ಕಿಂಗ್​ಗಾಗಿ ದೊಡ್ಡ ಜಾಗವನ್ನು ಮೀಸಲಿಟ್ಟಿದ್ದೀವಿ. ವಿಐಪಿ ಪಾರ್ಕಿಂಗ್, ಅಭಿಮಾನಿಗಳಿಗೆ ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್