ಬೆಳಗಾವಿ ನಗರದಲ್ಲಿ ಮಾನಸಿಕ ಅಸ್ವಸ್ಥನೊಬ್ಬನಿಂದ ದೇವಸ್ಥಾನದ ಮೇಲೆ ಕಲ್ಲೆಸತ, ಏರಿಯಾದಲ್ಲಿ ಬಿಗುವಿನ ವಾತಾವರಣ
ಯಾಸೆರ್ ಒಬ್ಬ ಮಾನಸಿಕ ಅಸ್ಚಸ್ಥನೆಂದು ಹೇಳಲಾಗುತ್ತಿದೆ. ಮಾನಸಿಕ ಸ್ವಸ್ಥರು ಸಮಾಜದ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಕದಡುವುದಿಲ್ಲ, ಆ ಪ್ರಶ್ನೆ ಬೇರೆ. ಅದರೆ ಒಬ್ಬನ ದುಷ್ಕೃತ್ಯದಿಂದ ಇಡೀ ಊರಿನ ಮಾನಸಿಕ ಸ್ವಾಸ್ಥ್ಯ ಹಾಳಾಗೋದು ಸರಿಯಲ್ಲ. ಬೆಳಗಾವಿ ಒಂದು ಶಾಂತಿಪ್ರಿಯ ನಗರ ಮತ್ತು ಜಿಲ್ಲೆ. ಬೇರೆ ಕಾರಣಗಳಿಗಾಗಿ ಇಲ್ಲಿ ಗಲಾಟೆಗಳು ನಡೆಯುತ್ತವೆ, ಮತೀಯ ಕಾರಣಗಳಿಗಾಗಿ ಅಲ್ಲ.
ಬೆಳಗಾವಿ, ಏಪ್ರಿಲ್ 8: ಯಾಸೆರ್ ಹೆಸರಿನ ಯುವಕನೊಬ್ಬ ನಗರದ ಪ್ರಾಂಗುಳ ಗಲ್ಲಿಯಲ್ಲಿರುವ ದೇವಸ್ಥಾನವೊಂದರ ಮೇಲೆ ನಿನ್ನೆ ರಾತ್ರಿ ಕಲ್ಲೆಸೆದ ಕಾರಣ ಏರಿಯಾದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರಿಂದ ಗಲಾಟೆಗಳು ಸಂಭವಿಸಲಿಲ್ಲ. ಏರಿಯಾದಲ್ಲಿರುವ ಅಶ್ವತ್ಥಾಮ ದೇಗುಲದ ಮೇಲೆ ಕಲ್ಲೆಸೆದ ಮಾನಸಿಕ ಅಸ್ವಸ್ಥ ಯಾಸೆರ್ನನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ದಾರೆ. ರಾತ್ರಿಯಿಡೀ ಪ್ರಾಂಗುಳ ಗಲ್ಲಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.
ಇದನ್ನೂ ಓದಿ: ಮೈಸೂರು: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ, ಗಲಭೆಗೆ ಪ್ರಚೋದನೆ ನೀಡಿದ ಮೌಲ್ವಿ ಮುಫ್ತಿ ಮುಸ್ತಾಕ್ ಬಂಧನ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 08, 2025 10:45 AM