ತಮ್ಮ ಕ್ಷೇತ್ರದ ಅನುದಾನವನ್ನು ಕಸಿದುಕೊಳ್ಳಬೇಡಿ ಎಂದು ಕಾಂಗ್ರೆಸ್ ಶಾಸಕರಿಗೆ ಹೇಳಿದ ಅರವಿಂದ್ ಬೆಲ್ಲದ್
ಅನುದಾನ ಹಂಚಿಕೆಯಲ್ಲಿ ತಾರತಮ್ಯ ಉಂಟಾಗುತ್ತಿದೆಯೇ? ಹೌದೆನ್ನುತ್ತಾರೆ ವಿರೋಧ ಪಕ್ಷದ ಶಾಸಕರು. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳುವ ಪ್ರಕಾರ, ಆರ್ಥಿಕ ಸಲಹೆಗಾರನಾಗಿರುವ ಕಾರಣಕ್ಕೆ ಅವರ ಯಲಬುರ್ಗಾ ಕ್ಷೇತ್ರಕ್ಕೆ ಅನುದಾನ ನಿಡುಗಡೆಯಾಗಿದೆಯಂತೆ!
ಬೆಂಗಳೂರು: ವಿಧಾನಸಭಾ ಕಾರ್ಯಕಲಾಪದಲ್ಲಿ ಇಂದು ಬಂಗಾರಪೇಟೆ ಶಾಸಕ ನಾರಾಯಣಗೌಡ ಮತ್ತು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ನಡುವೆ ಬಂಗಾರಪೇಟೆ ಕ್ಷೇತ್ರಕ್ಕೆ ಆಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು. ಬಂಗಾರಪೇಟೆ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಬೆಲ್ಲದ್, ಬಿಡುಗಡೆಯಾಗಿರುವ ಹಿಂದಿನ ತರ್ಕದ ಬಗ್ಗೆ ಪ್ರಶ್ನಿಸಿದರು. ಅವರ ಪ್ರಶ್ನೆಯಿಂದ ಅಸಮಾಧಾನಗೊಂಡ ನಾರಾಯಣ ಗೌಡ, ಬಂಗಾರುಪೇಟೆಗೆ ಅನುದಾನ ಬಿಡುಗಡೆಯಾದರೆ ನಿಮಗ್ಯಾಕೆ ಕಣ್ಣುರಿ? ಬಂಗಾರುಪೇಟೆಯೇನೂ ಪಾಕಿಸ್ತಾನದಲ್ಲಿದೆಯೇ ಅಂತ ಕೇಳಿದರು. ಅದಕ್ಕೆ ಉತ್ತರಿಸಿದ ಬೆಲ್ಲದ್, ನಿಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾದರೆ ನಮಗ್ಯಾವ ಸಮಸ್ಯೆಯೂ ಇಲ್ಲ, ಅದರೆ ಧಾರವಾಡ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅನುದಾನವನ್ನು ನೀವು ಎಳೆದುಕೊಂಡು ಹೋಗಬೇಡಿ ಅನ್ನುತ್ತಾರೆ. ಬೆಲ್ಲದ್ ಮಾತಿಗೆ ನಾರಾಯಣಗೌಡ ಉತ್ತರಿಸಲು ಎದ್ದುನಿಂತಾಗ ಸ್ಪೀಕರ್ ಖಾದರ್ ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ಸುಮ್ಮನಾಗಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಧಿಕಾರಿಗಳನ್ನು ಬಲಿಪಶು ಮಾಡಿ ತಮ್ಮವರನ್ನು ರಕ್ಷಿಸುವ ಪ್ರಯತ್ನ ಸಿದ್ದರಾಮಯ್ಯ ಮಾಡುತ್ತಿದ್ದಾರೆ: ವಿಜಯೇಂದ್ರ