ಸಿದ್ದರಾಮಯ್ಯ ಜೈಲಿಗೆ ಹೋಗೋದು ಶತಸಿದ್ಧ, ಕಾಂಗ್ರೆಸ್ ಸರ್ಕಾರ ಇಷ್ಟರಲ್ಲೇ ಪತನಗೊಳ್ಳಲಿದೆ: ಕೆಎಸ್ ಈಶ್ವರಪ್ಪ

ತಮ್ಮ ಪ್ರಕರಣದಲ್ಲಿ ತನಿಖೆ ನಡೆದು ನಿರ್ದೋಷಿ ಅಂತ ಕ್ಲೀನ್ ಚಿಟ್ ಸಿಕ್ಕರೂ ಬಿಜೆಪಿಯವರೇ ತನಗೆ ಮೋಸ ಮಾಡಿದರು, ಪುನಃ ಕ್ಯಾಬಿನೆಟ್ ಗೆ ವಾಪಸ್ಸು ಸೇರಿಸಿಕೊಳ್ಳುತ್ತೇವೆ ಅಂತ ಹೇಳಿದವರು ಕೊನೆವರೆಗೂ ಆ ಕೆಲಸ ಮಾಡದೆ ದ್ರೋಹ ಬಗೆದರು ಎಂದು ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಜೈಲಿಗೆ ಹೋಗೋದು ಶತಸಿದ್ಧ, ಕಾಂಗ್ರೆಸ್ ಸರ್ಕಾರ ಇಷ್ಟರಲ್ಲೇ ಪತನಗೊಳ್ಳಲಿದೆ: ಕೆಎಸ್ ಈಶ್ವರಪ್ಪ
|

Updated on: Jul 22, 2024 | 10:26 PM

ವಿಜಯಪುರ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಕಾಂಗ್ರೆಸ್ ನಾಯಕರ ಕಣಕಣದಕಲ್ಲಿ ಭಂಡತನ ತುಂಬಿದೆ, ಭ್ರಷ್ಟಾಚಾರ ನಡೆಸಿದರೂ ಭಂಡತನ ಪ್ರದರ್ಶಿಸಿ ತಮ್ಮದು ಸಚ್ಛಾರಿತ್ರ್ಯ ಅಂತ ಹೇಳಿಕೊಳ್ಳುತ್ತಾರೆ, ಮೊದಲಿಂದಲೂ ಅವರು ದೇಶವನ್ನು ಲೂಟಿ ಮಾಡೋದು ಬಿಟ್ಟರೆ ಮತ್ತೇನೂ ಮಾಡಿಲ್ಲ, ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವರ ಇನ್ನೂ ನಾಲ್ಕು ವರ್ಷ ಅಧಿಕಾರದಲ್ಲಿರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ, ಸರ್ಕಾರ ಪತನಗೊಳ್ಳುವ ದಿನಗಳು ಹತ್ತಿರ ಬಂದಿವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗೋದು ಶತಸಿದ್ಧ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಅನಮಾನವೇ ಬೇಡ ಎಂದು ಈಶ್ವರಪ್ಪ ಹೇಳಿದರು. ತನ್ನ ಮೇಲೆ ಆರೋಪ ಬಂದಾಗ ಕೂಡಲೇ ಕೇಂದ್ರದ ನಾಯಕರನ್ನು ಸಂಪರ್ಕಿಸಿ ರಾಜೀನಾಮೆ ಸಲ್ಲಿಸುತ್ತೇನೆ ಅನುಮತಿ ನೀಡಿ ಅಂತ ಹೇಳಿದ್ದೆ, ಅದರೆ ಅವರೇ ಅವಸರ ಬೇಡ, ತಾಳ್ಮೆಯಿರಲಿ ಅಂತ ಹೇಳಿದ್ದರು ಎಂದು ಅವರು ಹೇಳಿದರು. ಆದರೆ, ಇಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ನಾನು ರಾಜೀನಾಮೆ ನೀಡಬೇಕು ಅಂತ ಆಕಾಶ ಪಾತಾಳ ಒಂದು ಮಾಡಿದ್ದರು ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪಕ್ಷಕ್ಕೆ ವಾಪಸ್ಸಾಗುವಂತೆ ಬಿಜೆಪಿ ನಾಯಕರು ಕರೆ ಮಾಡುತ್ತಿದ್ದಾರೆ ಅಂತ ಮತ್ತೊಮ್ಮೆ ಹೇಳಿದ ಈಶ್ವರಪ್ಪ

Follow us
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ
ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!
ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!
ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಹಿಂದಿನ ಬಿಜೆಪಿ ಸರ್ಕಾರಕ್ಕೆ ಗುಮ್ಮಿದ ಪ್ರತಾಪ್‌ ಸಿಂಹ: ವಿಡಿಯೋ ವೈರಲ್
ಹಿಂದಿನ ಬಿಜೆಪಿ ಸರ್ಕಾರಕ್ಕೆ ಗುಮ್ಮಿದ ಪ್ರತಾಪ್‌ ಸಿಂಹ: ವಿಡಿಯೋ ವೈರಲ್