ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವವರೆಗೆ ದಲಿತ ಸಿಎಂ ಕೂಗು ಏಳುವುದಿಲ್ಲ: ಅರ್ ಬಿ ತಿಮ್ಮಾಪುರ, ಸಚಿವ
ಒಂದು ಪಕ್ಷ ಹೈಕಮಾಂಡ್ ಸಿಎಂ ಬದಲಾಯಿಸುವ ನಿರ್ಣಯ ತೆಗೆದುಕೊಂಡಿದ್ದೇಯಾದಲ್ಲಿ ಮತ್ತು ಆ ಸ್ಥಾನಕ್ಕೆ ದಲಿತರನ್ನು ನೇಮಕ ಮಾಡುವ ನಿರ್ಧಾರ ಮಾಡಿದ್ದೇಯಾದಲ್ಲಿ ದಲಿತನಾಗಿರುವ ತಾನು ಯಾಕೆ ಅರ್ಜಿ ಗುಜರಾಯಿಸಬಾರದು ಎಂದು ಸಚಿವ ತಿಮ್ಮಾಪುರ ಹೇಳುತ್ತಾರೆ. ಹಾಗೊಂದು ವೇಳೆ ಅಂಥ ಸಂದರ್ಭ ಸೃಷ್ಟಿಯಾದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಬೆಂಬಲವೂ ನಿರ್ಣಾಯಕವಾಗುತ್ತದೆ.
ಹುಬ್ಬಳ್ಳಿ: ನಿನ್ನೆ ನಾನ್ಯಾಕೆ ಸಿಎಂ ಆಗಬಾರದು ಅಂತ ಹೇಳಿ ಗೊಂದಲ ಸೃಷ್ಟಿಸಿದ್ದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಇವತ್ತು ವರಸೆ ಬದಲಿಸಿದ್ದಾರೆ. ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು ಸಿಎಂ ಬದಲಾವಣೆ ಸುದ್ದಿ ಪ್ರತಿದಿನ ಚ್ಯಾನೆಲ್ ಗಳಲ್ಲಿ ನೋಡುತ್ತಿದ್ದೇನೆಯೇ ಹೊರತು ಸರ್ಕಾರ ಮತ್ತು ಹೈಕಮಾಂಡ್ ಮಟ್ಟದಲ್ಲಿ ಅದು ಚರ್ಚೆಯಾಗುತ್ತಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವವರೆಗೆ ಬೇರೆಯವರನ್ನು ಆ ಸ್ಥಾನಕ್ಕೆ ಪರಿಗಣಿಸುವ ಪ್ರಶ್ನೆಯೇ ಉದ್ಧವಿಸಲ್ಲ ಎಂದಯ ತಿಮ್ಮಾಪುರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ನಾನು ದಲಿತ, ನಾನೇಕೆ ಸಿಎಂ ಆಗಬಾರದು?’: ಸಚಿವ ತಿಮ್ಮಾಪುರ