ಬಸ್​ಗಳು ಅಣಿಯಾದ ಕೂಡಲೇ ಕಾಂಗ್ರೆಸ್ ಪಕ್ಷದ ಯಾತ್ರೆ ಶುರುವಾಗುತ್ತದೆ: ಸಿದ್ದರಾಮಯ್ಯ

ಬಸ್​ಗಳು ಅಣಿಯಾದ ಕೂಡಲೇ ಕಾಂಗ್ರೆಸ್ ಪಕ್ಷದ ಯಾತ್ರೆ ಶುರುವಾಗುತ್ತದೆ: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2022 | 3:49 PM

ಬಸ್ ಗಳು ಅಣಿಗೊಳ್ಳುತ್ತಿರುವ ಕಾರಣಕ್ಕೆ ಪ್ರವಾಸ ಕೊಂಚ ವಿಳಂಬಗೊಂಡಿದೆ, ಅವು ಲಭ್ಯವಾದ ಕೂಡಲೇ ಯಾತ್ರೆ ಆರಂಭವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಹೇಳಿದರು.

ಮೈಸೂರು: ಭಾಗದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಚುನಾವಣಾ ಪ್ರಚಾರವನ್ನು (campaign) ಈಗಾಗಲೇ ಶುರುಮಾಡಿದಂತಿದೆ. ಮಂಗಳವಾರದಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯನವರು ಅಧಿಕೃತವಾಗಿಯೇ ಪ್ರಚಾರ ಶುರುವಾಗಿದೆ ಎಂದರು. ಬಸ್ ಯಾತ್ರೆ ಆರಂಭಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ತಾವು ಮತ್ತು ಡಿಕೆ ಶಿವಕುಮಾರ (DK Shivakumar) ಎರಡು ತಂಡಗಳಾಗಿ ರಾಜ್ಯದಾದ್ಯಂತ ಪ್ರಚಾರ ಮಾಡುತ್ತೇವೆ ಅಂತ ಹೇಳಿದರು. ಬಸ್ ಗಳು ಅಣಿಗೊಳ್ಳುತ್ತಿರುವ ಕಾರಣಕ್ಕೆ ಪ್ರವಾಸ ಕೊಂಚ ವಿಳಂಬಗೊಂಡಿದೆ, ಅವು ಲಭ್ಯವಾದ ಕೂಡಲೇ ಯಾತ್ರೆ ಆರಂಭವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಹೇಳಿದರು.