ಸಿದ್ದರಾಮಯ್ಯನವರ ರಾಜ್ಯ ಪ್ರವಾಸಕ್ಕೆ ಸಿದ್ಧವಾಗಿರೋದು ಬಸ್ಸಲ್ಲ, ಚಲಿಸುವ ಐಷಾರಾಮಿ ಮನೆ!
ಪ್ರವಾಸದ ವೇಳೆ ಸಿದ್ದರಾಮಯ್ಯ ಹೋಟೆಲ್, ಪ್ರವಾಸಿ ಮಂದಿರ ಅಥವಾ ಕಾರ್ಯಕರ್ತರ ಮನೆಯಲ್ಲಿ ತಂಗುವ ಪ್ರಮೇಯವೇ ಉದ್ಭವಿಸುವುದಿಲ್ಲ.
ಕೋಲಾರ: ಮಂಗಳವಾರ ಬೆಳಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆಗೆ (Bus Yatre) ವಾಹನ ತಯಾರಾಗುತ್ತಿದೆ ಎಂದ ಹೇಳಿದ್ದರು. ಅವರು ಹೇಳಿದ ಬಸ್ ಸಂಪೂರ್ಣವಾಗಿ ತಯಾರಾಗಿದ್ದು, ಸದ್ಯಕ್ಕೆ ಅದು ಕೋಲಾರದಲ್ಲಿದೆ. ಟಿವಿ9 ಕನ್ನಡ ವಾಹಿನಿಯ ಕೋಲಾರ ವರದಿಗಾರ ರಾಜೇಂದ್ರ ಸಿಂಹ ಬಸ್ಸಿನ ವಿಶೇಷತೆಗಳ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಿದ್ದಾರೆ. ಅಸಲಿಗೆ ಇದೊಂದು ಚಲಿಸುವ ಐಷಾರಾಮಿ ಮನೆಯ (Luxurious Villa) ಹಾಗೆ ಕಾಣುತ್ತದೆ. ಬಸ್ ನೊಳಗೆ ಕಾನ್ಫರೆನ್ಸ್ ಹಾಲ್, ಬೆಡ್ ರೂಮ್, ಬಾತ್ರೂಮ್, ಟಾಯ್ಲೆಟ್, ಹೈಡ್ರಾಲಿಕ್ ವೇದಿಕೆ, ಮೂರು ಎಲ್ ಸಿ ಡಿ ಟಿವಿ, ರೆಫ್ರಿಜರೇಟರ್, ಓವನ್-ಎಲ್ಲವೂ ಇವೆ. ಪ್ರವಾಸದ ವೇಳೆ ಅವರು ಹೋಟೆಲ್, ಪ್ರವಾಸಿ ಮಂದಿರ ಅಥವಾ ಕಾರ್ಯಕರ್ತರ ಮನೆಯಲ್ಲಿ ತಂಗುವ ಪ್ರಮೇಯವೇ ಉದ್ಭವಿಸುವುದಿಲ್ಲ.
Published on: Nov 15, 2022 06:27 PM
Latest Videos